ನೊಬೆಲ್ ಶಾಂತಿ ಪ್ರಶಸ್ತಿಗಾಗಿ ‘ಅಲ್ಟ್ ನ್ಯೂಸ್ ’ನ ಪ್ರತಿಕ ಸಿಂನ್ಹಾ ಮತ್ತು ಮಹಮ್ಮದ್ ಜುಬೇರ್ ಇವರ ಹೆಸರು !

ಮಹಮ್ಮದ್ ಜುಬೇರ್ ಇವನ ಮೇಲೆ ಎರಡು ಧರ್ಮದವರಲ್ಲಿ ಬಿರುಕು ಮೂಡಿಸುವ ಆರೋಪ !

ಒಸ್ಲೋ (ನಾರ್ವೆ) – ಇಲ್ಲಿ ಶಾಂತಿಯ ನೋಬೆಲ್ ಪ್ರಶಸ್ತಿ ಘೋಷಿಸಲಾಗುವುದು. ‘ರೈಟರ್ಸ್’ ಈ ವಾರ್ತಾ ಸಂಸ್ಥೆಯಿಂದ ನಡೆಸಲಾದ ಸಮೀಕ್ಷೆಯ ಪ್ರಕಾರ ಶಾಂತಿಯ ನೊಬೆಲ್ ಪ್ರಶಸ್ತಿಗಾಗಿ ಮುಂಚೂಣಿಯಲ್ಲಿರುವ ಹೆಸರುಗಳಲ್ಲಿ ಭಾರತದಲ್ಲಿನ ವಾರ್ತಾವಾಹಿನಿ ‘ಅಲ್ಟ್ ನ್ಯೂಸ್’ನ ಸಂಸ್ಥಾಪಕ ಪ್ರತೀಕ ಸಿಂನ್ಹಾ ಮತ್ತು ಮೊಹಮ್ಮದ್ ಜುಬೇರ್ ಇವರ ಹೆಸರು ಒಳಗೊಂಡಿವೆ. ಹಾಗೂ ಅಂತರಾಷ್ಟ್ರೀಯ ಆರೋಗ್ಯ ಸಂಘಟನೆ, ಮ್ಯಾನಮಾರನ ರಾಷ್ಟ್ರೀಯ ಏಕತಾ ಸರಕಾರ, ಬೇಲಾರುಸ್‌ನ ವಿರೋಧಿಪಕ್ಷದ ನಾಯಕಿ ಸಿವತಲಾನಾ ಇವರ ಹೆಸರು ಕೂಡ ಮುಂಚೂಣಿಯಲ್ಲಿದೆ. ಈ ಮೊದಲು ಭಾರತದ ಮದರ್ ತೆರೇಸಾ ಮತ್ತು ಕೈಲಾಸ ಸತ್ಯಾರ್ಥಿ ಇವರಿಗೆ ಶಾಂತಿಗಾಗಿ ನೋಬೆಲ್ ಪ್ರಶಸ್ತಿ ದೊರೆಕಿತ್ತು.

೧. ಮಹಮ್ಮದ್ ಜುಬೇರ್ ಇವನಿಗೆ ಕೆಲವು ವಾರಗಳ ಹಿಂದೆ ನೂಪುರ ಶರ್ಮಾ ಇವರು ಮಹಮ್ಮದ್ ಪೈಗಂಬರ್ ಇವರ ಬಗ್ಗೆ ತಥಾಕಥಿತ ಅವಮಾನಕಾರಿ ಹೇಳಿಕೆ ಇರುವ ಒಂದು ಚರ್ಚಾ ಕೂಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದರಿಂದ ಬಂಧಿಸಲಾಗಿತ್ತು. ನಂತರ ಅವನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

೨. ಅಮೇರಿಕಾದಲ್ಲಿನ ‘ಟೈಮ್ಸ್’ ನಿಯತಕಾಲಿಕೆಯು, ಪ್ರತಿಕ ಸಿಂನ್ಹಾ ಮತ್ತು ಮಹಮದ್ ಜುಬೇರ್ ಭಾರತದಲ್ಲಿ ಸುಳ್ಳು ವಾರ್ತೆಯಲ್ಲಿನ ಸತ್ಯಂಶ ಹುಡುಕಿ ತೆಗೆದು ಸತ್ಯ ಬೆಳಕಿಗೆ ತರುವುದಕ್ಕಾಗಿ ಸಂಘರ್ಷ ಮಾಡುತ್ತಿದ್ದಾರೆ. ಸಿಂನ್ಹಾ ಮತ್ತು ಜುಬೇರ್ ಸಾಮಾಜಿಕ ಜಾಲತಾಣದಲ್ಲಿ ನಿಯೋಜನಬದ್ಧವಾಗಿ ಹರಡಲಾಗುವ ಸುಳ್ಳು ವರ್ತೆಗಳನ್ನು ತಡೆಯುವ ಪ್ರಯತ್ನ ಮಾಡುತ್ತಾರೆ. (ಅಮೇರಿಕ ವಾರ್ತಾ ಪತ್ರಿಕೆ ಹಿಂದೂ ದ್ವೇಷ ! – ಸಂಪಾದಕರು)

ಸಂಪಾದಕೀಯ ನಿಲುವು

ಇದರಿಂದ ಇದು ಶಾಂತಿ ಪ್ರಶಸ್ತಿ ಸಾಮಾಜದಲ್ಲಿ ಶಾಂತತೆ ಕದಡುವವರಿಗೆ ನೀಡಲಾಗುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ !