ದೇಶದ ಎರಡನೇ ‘ರಾಷ್ಟ್ರೀಯ ಆದರ್ಶ ವೇದ ವಿದ್ಯಾಲಯದ’ವನ್ನು ಜಗನ್ನಾಥ ಪುರಿಯಲ್ಲಿ ಉದ್ಘಾಟನೆ !

ಜಗನ್ನಾಥ ಪುರಿ (ಒಡಿಸ್ಸಾ) – ಇಲ್ಲಿ ದೇಶದ ಎರಡನೇ ‘ರಾಷ್ಟ್ರೀಯ ಆದರ್ಶ ವೇದ ವಿದ್ಯಾಲಯ’ವನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಇವರ ಹಸ್ತದಿಂದ ಅಕ್ಟೋಬರ್ ೫ ರಂದು ಉದ್ಘಾಟನೆ ಮಾಡಲಾಯಿತು. ‘ಶ್ರೀ ಜಗನ್ನಾಥ ರಾಷ್ಟ್ರೀಯ ಆದರ್ಶ ವೇದ ವಿದ್ಯಾಲಯ’ ಎಂದು ಇದರ ನಿವಾಸಿ ವಿದ್ಯಾಲಯದ ಹೆಸರಾಗಿದ್ದು ವೇದ ಮಂತ್ರದ ಘೋಷದಲ್ಲಿ ಉದ್ಘಾಟನೆ ಮಾಡಲಾಯಿತು. ಇದು ನನ್ನ ಸೌಭಾಗ್ಯವಾಗಿದೆ, ನನಗೆ ವಿದ್ಯಾಲಯದ ಉದ್ಘಾಟನೆ ಮಾಡುವ ಅವಕಾಶ ದೊರೆತಿದೆ. ವೇದ, ಹಾಗೂ ಸಂಸ್ಕೃತ ಇದರ ಬಗ್ಗೆ ಜನರಲ್ಲಿ ಜಾಗೃತಿ ಆಗಬೇಕು, ಅದಕ್ಕಾಗಿ ಇಲ್ಲಿ ಶಿಕ್ಷಣ ಮತ್ತು ನಿವಾಸದ ಉಚಿತ ವ್ಯವಸ್ಥೆ ಉಪಲಬ್ದ ಮಾಡಿಕೊಡಲಾಗಿದೆ, ಎಂದು ಪ್ರಧಾನ ಇವರು ಈ ಸಮಯದಲ್ಲಿ ಹೇಳಿದರು.

೧. ವಿದ್ಯಾಲಯದಲ್ಲಿ ಋಗ್ವೇದ, ಸಾಮವೇದ, ಯಜುರ್ವೇದ ಮತ್ತು ಅಥರ್ವಣವೇದ ಈ ಪಠ್ಯಕ್ರಮದ ಜೊತೆಗೆ ವಿದ್ಯಾರ್ಥಿಗಳಿಗೆ ವಿಜ್ಞಾನ, ಗಣಿತ, ವೇದ ಗಣಿತ, ಇಂಗ್ಲೀಷ್, ಸಮಾಜಶಾಸ್ತ್ರ, ಗಣಕಯಂತ್ರ ವಿಜ್ಞಾನ ಹಾಗೂ ಕೃಷಿಯ ವಿಷಯದ ಅಭ್ಯಾಸ ಕ್ರಮ ಕೂಡ ಕಲಿಸಲಾಗುವುದು.

೨. ಈ ವಿದ್ಯಾಲಯದಲ್ಲಿ ಗುಣಮಟ್ಟದ ಮೇಲೆ ಪ್ರವೇಶ ನೀಡಲಾಗುವುದು ಎಂದು, ‘ವೇದ ಭೂಷಣ’ (೯ ಮತ್ತು ೧೦ ನೇ ತರಗತಿ) ಮತ್ತು ‘ವೇದ ವಿಭೂಷಣ’(೧೧ ಮತ್ತು ೧೨ ನೆಯ ತರಗತಿ ) ಹೆಸರಿನ ಪಠ್ಯಕ್ರಮ ಇರುವುದೆಂದು ಅಧಿಕಾರಿಗಳು ಹೇಳಿದರು.

೩. ಈ ಪಠ್ಯಕ್ರಮ ೨೦೨೨ – ೨೩ ರ ಸಾಲಿನ ಶೈಕ್ಷಣಿಕ ವರ್ಷಕ್ಕಾಗಿ ಇರಲಿದೆ.

೪. ಉತ್ತರಖಂಡದಲ್ಲಿನ ಬದ್ರಿನಾಥ ಹಾಗೂ ಅಸ್ಸಾಂನಲ್ಲಿನ ಗೌಹಾಟಿ, ಗುಜರಾತಿನ ದ್ವಾರಕಾ ಮತ್ತು ಕರ್ನಾಟಕದಲ್ಲಿನ ಶೃಂಗೇರಿ ಇಲ್ಲಿಯೂ ಕೂಡ ಈ ರೀತಿಯ ವಿದ್ಯಾಲಯಗಳು ತೆರೆಯಲಾಗುವುದು.

೫. ಈ ಸಮಯದಲ್ಲಿ ಕೇಂದ್ರ ಶಿಕ್ಷಣ ಸಚಿವ ಪ್ರಧಾನ ಇವರು, ವೇದ ಇದು ಕೇವಲ ಮಂತ್ರವಲ್ಲದೆ, ವೇದಗಳಲ್ಲಿ ಬರೆಯಲಾದ ಎಲ್ಲವೂ ಜೀವನದ ಎಲ್ಲಾ ಭಾಗದ ವೈಜ್ಞಾನಿಕ ಮಟ್ಟದಲ್ಲಿ ಸಿದ್ಧಪಡಿಸುತ್ತದೆ. ಮನುಷ್ಯನ ಪ್ರತಿಯೊಂದು ಸಮಸ್ಯೆಗಾಗಿ ವೇದಗಳಲ್ಲಿ ಉಪಾಯವಿದೆ, ಎಂದು ಹೇಳಿದರು.