ನಾಯಕ ಕಮಲ ಹಾಸನ ಇವರ ಹುರುಳಿಲ್ಲದ ಶೋಧನೆ !
ಚೆನ್ನೈ (ತಮಿಳುನಾಡು) – ರಾಜ ರಾಜ ಚೋಳ ಇವರ ಕಾಲದಲ್ಲಿ ‘ಹಿಂದೂ’ ಎಂಬ ಯಾವುದೇ ಧರ್ಮ ಅಸ್ತಿತ್ವದಲ್ಲಿ ಇರಲಿಲ್ಲ. ಆಗ ಕೇವಲ ವೈಷ್ಣವ್, ಶಿವಂ ಮತ್ತು ಸಮಾನಂ ಹೆಸರಿನ ಧರ್ಮ ಇತ್ತು. ಹಿಂದೂ ಶಬ್ದ ಬ್ರಿಟಿಷರು ತಂದಿದ್ದಾರೆ, ಎಂದು ದಕ್ಷಿಣ ಭಾರತದ ಪ್ರಸಿದ್ಧ ನಟ ಹಾಗೂ ರಾಜಕೀಯ ಪಕ್ಷದ ಮುಖಂಡ ಕಮಲ ಹಸನ ಇವರು ಹೇಳಿಕೆ ನೀಡಿದ್ದಾರೆ. ಇತ್ತಿಚೆಗೆ ಚೋಳ ವಂಶದ ರಾಜರ ಆಧಾರಿತ ತಮಿಳು ಚಲನಚಿತ್ರ ‘ಪೋನ್ನಿಯನ ಸೆಲ್ವನ್ – ೧’ ಬಿಡುಗಡೆಯಾಗಿದೆ. ಆ ಸಮಯದಲ್ಲಿ ಆಯೋಜಿಸಲಾದ ಒಂದು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಪ್ರಸಿದ್ಧ ನಿರ್ದೇಶಕ ಮಣಿರತ್ನಂ ಇವರು ಈ ಚಲನಚಿತ್ರ ನಿರ್ಮಿಸಿದ್ದಾರೆ. ಕಮಲ ಹಸನ ಇವರ ಈ ಹೇಳಿಕೆಯ ನಂತರ ಅದರ ಬಗ್ಗೆ ವಿವಾದ ನಿರ್ಮಾಣವಾಯಿತು.
ಕಮಲ ಹಸನ ಇವರ ಮೊದಲು ತಮಿಳು ಚಲನಚಿತ್ರದ ನಿರ್ದೇಶಕ ವೇತ್ರಿ ಮಾರನ್ ಇವರು ಕೂಡ ‘ಚೋಳ ರಾಜ ಹಿಂದೂ ಆಗಿರಲಿಲ್ಲ’, ಎಂದು ಹೇಳಿದ್ದರು. ಅವರು, ನಮ್ಮ ಗುರುತು ಸತತವಾಗಿ ನಮ್ಮಿಂದ ಕಸಿದುಕೊಳ್ಳಲಾಗುತ್ತಿದೆ ಮತ್ತು ಅದರ ಕೇಸರೀಕರಣ ಮಾಡಲಾಗುತ್ತಿದೆ. ಚೋಳ ರಾಜನನ್ನು ಹಿಂದೂ ರಾಜ ಎಂದು ಹೇಳಲಾಗುತ್ತಿದೆ.
Tamil filmmaker claims Raja Raja Cholan wasn’t Hindu, Kamal Haasan backs him, says there was no Hindu religion in Chola times
Read @ANI Story | https://t.co/I5V76lyili#KamalHaasan #Vetrimaaran #VetrimaaranSpeech #PS1 #RajaRajaCholan pic.twitter.com/vIAKNP9eV8
— ANI Digital (@ani_digital) October 6, 2022
ಚೋಳ ರಾಜ ಹಿಂದೂವೇ ಆಗಿದ್ದರು ! – ಭಾಜಪ
ಭಾಜಪದ ನಾಯಕ ಹೆಚ್. ರಾಜಾ ಇವರು ಈ ಹೇಳಿಕೆಯನ್ನು ವಿರೋಧಿಸಿದ್ದಾರೆ. ಅವರು, ರಾಜರಾಜಾ ಚೋಳ ಇವರು ಹಿಂದೂ ರಾಜರೆಯಾಗಿದ್ದರು. ನನಗೆ ವೆತ್ರಿಮಾರನ್ ಇವರ ಹಾಗೆ ಇತಿಹಾಸದ ಬಹಳಷ್ಟು ಮಾಹಿತಿ ಇದೆ ಹಾಗೆನೂ ಇಲ್ಲ, ಆದರೆ ರಾಜರಾಜಾ ಚೋಳ ಇವರು ಎರಡು ಚರ್ಚ್ ಮತ್ತು ಮಸೀದಿ ಕಟ್ಟಿಸಿದರು, ಎಂದು ಹೇಳಿದರು.
ಸಂಪಾದಕೀಯ ನಿಲುವು
|