ಕಳೆದ ವರ್ಷ ಮಹಿಳೆಯರು ಕುಂಕುಮ ಹಚ್ಚಿಕೊಳ್ಳದೆ ತೋರಿಸಲಾಗಿರುವ ಜಾಹೀರಾತಿನಲ್ಲಿ ಈ ವರ್ಷ ಆಭರಣಗಳ ಜಾಹೀರಾತಿನಲ್ಲಿ ಮಹಿಳೆಯರು ಕುಂಕುಮ ಸಹಿತವಾಗಿ ತೋರಿಸಲಾಗಿದೆ !

ಮುಂಬಯಿ, ಅಕ್ಟೋಬರ್ ೪(ವಾರ್ತೆ.) – ಹಿಂದೂ ಧರ್ಮದಲ್ಲಿ ವಿವಾಹಿತ ಸ್ತ್ರೀಯ ಹಣೆಯ ಮೇಲೆ ಕುಂಕುಮ ಹಚ್ಚುವುದು ಇದು ಸೌಭಾಗ್ಯದ ಪ್ರತೀಕವಾಗಿದೆ. ಹೀಗಿರುವಾಗ ೨೦೨೧ ರಲ್ಲಿ ‘ಮಲಬಾರ್ ಗೋಲ್ಡ್ ಅಂಡ್ ಡೈಮಂಡ್’, ‘ತನಿಷ್ಕ ’, ‘ಫ್ಯಾಬ್ ಇಂಡಿಯಾ,’ ಈ ಕಂಪನಿಗಳಿಂದ ಹಿಂದೂಗಳ ಪವಿತ್ರ ಹಬ್ಬದ ಪ್ರಯುಕ್ತ ಆಭರಣಗಳ ಜಾಹಿರಾತಿನಲ್ಲಿ ಉದ್ದೇಶಪೂರ್ವಕವಾಗಿ ಮಹಿಳೆಯರನ್ನು ಕುಂಕುಮ ಇಲ್ಲದೆ ತೋರಿಸುವ ಕಿಡಿಗೇಡಿತನ ಮಾಡಿದ್ದರು. ಸಮಸ್ತ ಧರ್ಮ ಪ್ರೇಮಿ ಹಿಂದೂಗಳಿಂದ ಮಾಡಲಾದ ತೀವ್ರ ವಿರೋಧದ ನಂತರ ಇದೇ ಕಂಪನಿಗಳಿಂದ ಈ ವರ್ಷ ದೀಪಾವಳಿಯ ಪ್ರಯುಕ್ತ ನೀಡಲಾದ ಆಭರಣಗಳ ಜಾಹೀರಾತಿನಲ್ಲಿ ಮಹಿಳೆಯರು ಕುಂಕುಮ ಸಹಿತ ತೋರಿಸಿದ್ದಾರೆ.

೧. ೨೦೨೧ ರಲ್ಲಿ ‘ತನಿಷ್ಕಾ’ ಈ ಕಂಪನಿಯ ಜಾಹೀರಾತಿನಲ್ಲಿ ಮಹಿಳೆಯನ್ನು ಕುಂಕುಮ ಇಲ್ಲದೆ ತೋರಿಸಲಾದ ನಂತರ ಲೇಖಕಿ ಶೇಫಾಲಿ ವೈದ್ಯ ಇವರು ‘#NobindiNoBusiness’ ಈ ‘ಹ್ಯಾಶ್ ಟ್ಯಾಗ್ ಮೂಲಕ ಧ್ವನಿ ಎತ್ತಿದ್ದರು. ಸಮಸ್ತ ಹಿಂದೂ ಧರ್ಮ ಪ್ರೇಮಿಗಳು ಅದಕ್ಕೆ ಉತ್ಸಾಹಪೂರ್ಣವಾಗಿ ಬೆಂಬಲಿಸಿದರು.

೨. ಅದರ ನಂತರ ತನಿಷ್ಕ ಕಂಪನಿಯಿಂದ ಜಾಹೀರಾತು ಹಿಂಪಡೆದು ಕುಂಕುಮ ಹಚ್ಚಿಕೊಂಡಿರುವ ಮಹಿಳೆ ಇರುವ ಹೊಸ ಜಾಹಿರಾತು ನೀಡಿದ್ದರು. ‘ಫ್ಯಾಬ್ ಇಂಡಿಯಾ’ ಈ ‘ಫ್ಯಾಶನ್ ಬ್ರಾಂಡ್’ದಿಂದ ದೀಪಾವಳಿಯ ಪ್ರಯುಕ್ತ ನೀಡಲಾದ ಜಾಹೀರಾತಿನಲ್ಲಿ ‘ಜಶ್ನ-ಏ-ರಿವಾಝ’ ಈ ಉರ್ದು ಹೆಸರು ನೀಡಿ ಹಿಂದೂಗಳ ಭಾವನೆಯನ್ನು ಉದ್ದೇಶಪೂರ್ವಕವಾಗಿ ನೋಯಿಸಲಾಗಿತ್ತು. ಈ ಜಾಹೀರಾತಿನಲ್ಲಿ ಕೂಡ ಮಹಿಳೆಯನ್ನು ಕುಂಕುಮ ಇಲ್ಲದೆ ತೋರಿಸಲಾಗಿತ್ತು.

೩. ಹಿಂದೂಗಳ ವಿರೋಧದ ನಂತರ ಈ ಕಂಪನಿಯಿಂದ ಈ ಜಾಹೀರಾತು ಹಿಂಪಡೆಯಲಾಯಿತು. ‘ಮಲಬಾರ್ ಗೋಲ್ಡ್ ಆಂಡ್ ಡೈಮಂಡ್’ ಈ ಕಂಪನಿಯಿಂದ ಅಕ್ಷತ್ ತೃತೀಯದ ಪ್ರಯುಕ್ತ ನೀಡಲಾಗಿರುವ ಜಾಹೀರಾತಿನಲ್ಲಿ ಕರೀನಾ ಕಪೂರ ಖಾನ ಈಕೆಯನ್ನು ಕುಂಕುಮ ಇಲ್ಲದೆ ತೋರಿಸಲಾಗಿತ್ತು. ಹಿಂದೂಗಳ ವಿರೋಧದ ನಂತರ ಕಂಪನಿಯಿಂದ ಜಾಹೀರಾತು ಹಿಂಪಡೆದು ಕರೀನಾ ಕಪೂರ ಖಾನ ಈಕೆಯ ಬದಲು ತಮನ್ನಾ ಭಾಟಿಯಾ ಈ ನಾಯಕಿಯನ್ನು ಕುಂಕುಮ ಸಹಿತಾಗಿ ತೋರಿಸಿ ಹೊಸ ಜಾಹೀರಾತು ನೀಡಿದರು.

೪. ಕಳೆದ ವರ್ಷ ಈ ಕಂಪನಿಯಿಂದ ಹಿಂದುವಿರೋಧಿ ಪ್ರಕಾರಕ್ಕೆ ಹಿಂದೂಗಳು ಆಗಿಂದಾಗಲೇ ವಿರೋಧಿಸಿರುವುದರಿಂದ ಈ ವರ್ಷ ಬೇರೆ ಬೇರೆ ಕಂಪನಿಗಳಿಂದ ಇಲ್ಲಿಯವರೆಗೆ ದೀಪಾವಳಿಯ ಪ್ರಯುಕ್ತ ನೀಡಿರುವ ಆಭರಣದ ಜಾಹೀರಾತಿನಲ್ಲಿ ಮಹಿಳೆಯರನ್ನು ಕುಂಕುಮ ಸಹಿತವಾಗಿ ತೋರಿಸಲಾಯಿತು. ಇದು ಒಂದು ರೀತಿಯಿಂದ ಹಿಂದೂಗಳ ಸಂಘಟಿತವಾಗಿರುವುದರ ಶಕ್ತಿಯ ಪರಿಣಾಮ ಕಂಡು ಬಂದಿದೆ.

ಸಂಪಾದಕೀಯ ನಿಲುವು

ಧರ್ಮಪ್ರೇಮಿ ಹಿಂದೂಗಳಿಂದ ಶೀಘ್ರವಾಗಿ ವಿರೋಧಿಸಿದ ಪರಿಣಾಮ ! ಇಂತಹ ಒಗ್ಗಟ್ಟು ಮತ್ತು ತತ್ಪರತೆ ಹಿಂದೂಗಳು ಪ್ರತಿಯೊಂದು ಆಘಾತದ ಸಮಯದಲ್ಲಿ ತೋರಿಸಬೇಕಿದೆ !