ಭಾರತದಿಂದ ಚೀನಾಕ್ಕೆ ಹೋಗುವ ವಿಮಾನದಲ್ಲಿ ಬಾಂಬ್ ಇರುವ ಬಗ್ಗೆ ಮಾಹಿತಿ

  • ವಿಮಾನ ಕೆಳಗಿಳಿಸಲು ಭಾರತದ ಅನುಮತಿ ನಿರಾಕರಣೆ

  • ಭಾರತದ ಸುಖೋಯಿ ಯುದ್ಧ ವಿಮಾನವು ಆ ವಿಮಾನವನ್ನು ಜೊತೆ ಮಾಡಿ ಗಡಿಯಿಂದ ಹೊರಗೆ ಬಿಟ್ಟಿತು

ನವ ದೆಹಲಿ – ಇರಾನದಿಂದ ಚೀನಾದ ಗ್ವಾಂಗಝೂ ಪ್ರದೇಶಕ್ಕೆ ಹೋಗುವ ‘ಮಹಾನ್ ಏಯರ್ ಲೈನ್ಸ’ ನ ವಿಮಾನದಲ್ಲಿ ಬಾಂಬ್ ಇರುವುದಾಗಿ ಬೆದರಿಗೆ ಕರೆ ಬಂದ ಬಳಿಕ ಅದನ್ನು ತಕ್ಷಣವೇ ಕೆಳಗಿಳಿಸುವ ಪ್ರಯತ್ನ ಮಾಡಲಾಯಿತು. ಇರಾನನಿಂದ ಈ ವಿಮಾನ ಪಾಕಿಸ್ತಾನದ ಲಾಹೋರಗೆ ಬಂದ ಬಳಿಕ ಅದರಲ್ಲಿ ಬಾಂಬ ಇರುವ ಮಾಹಿತಿ ದೊರಕಿತು. ತದನಂತರ ಈ ವಿಮಾನವನ್ನು ಭಾರತದ ರಾಜಧಾನಿ ದೆಹಲಿಯಲ್ಲಿ ಇಳಿಸಲು ಅನುಮತಿಯನ್ನು ಕೋರಲಾಯಿತು; ಆದರೆ ಭಾರತವು ತಾಂತ್ರಿಕ ಕಾರಣಗಳಿಂದ ಅದನ್ನು ನಿರಾಕರಿಸಿತು. ತದನಂತರ ಈ ವಿಮಾನ ಚೀನಾಕ್ಕೆ ಹೋಯಿತು ಮತ್ತು ಕೆಲವು ಗಂಟೆಗಳ ಬಳಿಕ ಅಲ್ಲಿಯ ವಿಮಾನ ನಿಲ್ದಾಣದಲ್ಲಿ ಇಳಿಯಿತು.

ಭಾರತದ ಗಡಿಯಲ್ಲಿ ಈ ವಿಮಾನ ಬಂದಾಗ ಅದರ ಮೇಲೆ ನಿಗಾವಹಿಸಲು ಭಾರತದ ಸುಖೋಯಿ ಯುದ್ಧ ವಿಮಾನವನ್ನು ನಿಯೋಜಿಸಲಾಯಿತು. ಈ ಯುದ್ಧ ವಿಮಾನವು ಪಂಜಾಬ ಮತ್ತು ಜೋಧಪುರ ನೆಲೆಯಿಂದ ಹಾರಾಟ ನಡೆಸಿತು. ಈ ವಿಮಾನವು ಇರಾನಿನ ವಿಮಾನದೊಂದಿಗೆ ಹಾರಾಟ ನಡೆಸುತ್ತಾ ಅದನ್ನು ಭಾರತದ ಗಡಿಯಿಂದ ಹೊರಗೆ ಹೋಗುವವರೆಗೆ ಜೊತೆಯಲ್ಲಿತ್ತು. ಭಾರತದಿಂದ ಅದು ಮ್ಯಾನಮಾರ ಮಾರ್ಗದ ಮೂಲಕ ಚೀನಾಕ್ಕೆ ಹೋಯಿತು. ಇರಾನ ಸರಕಾರ ಮಾತ್ರ ವಿಮಾನದಲ್ಲಿ ಬಾಂಬ್ ಇರುವ ಸಾಧ್ಯತೆಯನ್ನು ತಳ್ಳಿಹಾಕಿದೆ.