ಮುಸಲ್ಮಾನ ಪಕ್ಷದಿಂದ ಶ್ರೀ ಕೃಷ್ಣ ಜನ್ಮ ಭೂಮಿಯ ಮೊಕದ್ದಮೆಯ ಸಮಯದಲ್ಲಿ ಗೈರಹಾಜರಾಗಿ ವಿಚಾರಣೆ ತಪ್ಪಿಸುತ್ತಿದ್ದಾರೆ ! – ಹಿಂದೂ ಪಕ್ಷದ ಆರೋಪ

ಮಥುರ (ಉತ್ತರಪ್ರದೇಶ) – ಮಥುರಾದಲ್ಲಿನ ಶ್ರೀ ಕೃಷ್ಣ ಜನ್ಮ ಭೂಮಿ ಮೊಕದ್ದಮೆಯ ಪ್ರಕರಣದಲ್ಲಿ ಹಿಂದೂ ಪಕ್ಷದ ನ್ಯಾಯವಾದಿ ಮಹೇಂದ್ರ ಪ್ರತಾಪ ಸಿಂಹ ಮತ್ತು ರಾಜೇಂದ್ರ ಮಾಹೇಶ್ವರಿಯವರು ನ್ಯಾಯಾಲಯದಲ್ಲಿ ಶಾಹಿ ಈದಗಾಹ ಮಸೀದಿ ಕಕ್ಷಿದಾರರ ಮೇಲೆ ಆರೋಪಿಸುತ್ತಾ, ಅವರು ನ್ಯಾಯಾಲಯದಲ್ಲಿ ಗೈರುಹಾಜರಾಗಿ ವಿಚಾರಣೆ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು. ‘ಈ ಪ್ರಕರಣದಲ್ಲಿ ಸುನ್ನಿ ಸೆಂಟ್ರಲ್ ವಕ್ಫ ಬೋರ್ಡಿನ ನ್ಯಾಯವಾದಿ ಗೆ ನೋಟಿಸ್ ಜಾರಿ ಮಾಡಬೇಕೆಂದು ಒತ್ತಾಯಿಸಿದ್ದಾರೆ. ನ್ಯಾಯಾಲಯ ಇದರ ಬಗೆಗಿನ ಆದೇಶ ಸುರಕ್ಷಿತವಾಗಿರಿಸಿ ಮುಂದಿನ ವಿಚಾರಣೆ ಅಕ್ಟೋಬರ್ ೨೮ ರಂದು ಮುಂದೂಡಿದ್ದಾರೆ. ಈ ಮೊಕದ್ದಮೆಯಲ್ಲಿ ಹಿಂದೂ ಕಕ್ಷಿದಾರರು ಶ್ರೀ ಕೃಷ್ಣ ಜನ್ಮ ಭೂಮಿಯ ಮೇಲಿರುವ ಈದಾಗಾಹ ಮಸೀದಿ ತೆರವುಗೊಳಿಸಲು ಒತ್ತಾಯಿಸಿದ್ದಾರೆ.