ಪ್ರಸ್ತುತ ಪ್ರಾರಂಭವಾಗಿರುವ ಕಾಂಗ್ರೆಸ್‌ನ `ಭಾರತ ಜೊಡೋ ಯಾತ್ರೆ’ ನಿಮಿತ್ತ….

ರಾಹುಲ ಗಾಂಧಿ

ರಾಹುಲ ಗಾಂಧಿಯವರು `ಕಾಂಗ್ರೆಸ್ ಜೊಡೋ’ ಯಾತ್ರೆಯನ್ನು ಯಾವಾಗ ಕೈಗೊಳ್ಳುವರು ?

ಮುಳುಗುತ್ತಿರುವ ಕಾಂಗ್ರೆಸ್‌ಗೆ ಪುನಶ್ಚೇತನ ನೀಡಲು ಈಗ ಸ್ವತಃ ಗಾಂಧಿ ಕುಟುಂಬದ ಯುವರಾಜ ಅಂದರೆ ರಾಹುಲ ಗಾಂಧಿ ಅಖಾಡಕ್ಕಿಳಿದಿದ್ದಾರೆ. ಕಾಂಗ್ರೆಸ್ಸಿನ ಜಡ್ಡುತನವನ್ನು ದೂರಗೊಳಿಸಲು ಇತ್ತೀಚೆಗೆ ಕನ್ಯಾಕುಮಾರಿಯಿಂದ ಪ್ರಾರಂಭ ವಾದ `ಭಾರತ ಜೊಡೋ’ ಇದು ೧೨ ರಾಜ್ಯಗಳಿಂದ ಸಾಗುತ್ತಾ೩ ಸಾವಿರದ ೫೭೦ ಕಿಲೋಮೀಟರ್ ದೂರ ತಲುಪಿ ಸುಮಾರು ೧೫೦ ದಿನಗಳ ನಂತರ ಈ ಯಾತ್ರೆಯು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳುತ್ತಿದೆ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಮಾಡುತ್ತಿರುವುದು `ಭಾರತ ಜೊಡೋ ಯಾತ್ರೆ’ ಅಲ್ಲ `ಭಾರತ ತೊಡೋ ಯಾತ್ರೆ’ ಎಂದು ಆರೋಪಗಳಾಗುತ್ತಿದೆ. ಈ ಯಾತ್ರೆಯ ಬಗೆಗಿನ ಅನೇಕ ವಿಷಯಗಳು ಬೆಳಕಿಗೆ ಬಂದಿದ್ದೂ ಈ ಯಾತ್ರೆಯು `ಕಂಟೈನರ್‌ಯಾತ್ರೆ’ ಎಂಬ ಟೀಕೆ ವ್ಯಕ್ತವಾಗುತ್ತಿದೆ ಯಾತ್ರೆಯಲ್ಲಿ ಪ್ರತಿ ಸ್ಥಳದಲ್ಲಿ ಸುಮಾರು ೬೦ ಕಂಟೈನರ್ ಜೊತೆಗಿರಲಿದೆ.ಇದರಲ್ಲಿ ಐಷಾರಾಮಿ ಮತ್ತು ದೊಡ್ಡ ಪ್ರಮಾಣದ ಸೌಲಭ್ಯಗಳಿವೆ. ರಾಹುಲ ಗಾಂಧಿ ಮತ್ತು ಅವರ ನಾಯಕರು ಹೋಟೆಲ್‌ಗಿಂತ ಈ ಎಲ್ಲ ಸುಸಜ್ಜಿತಗಳೊಂದಿಗೆ ಕಂಟೈನರಗಳಲ್ಲಿ ಸ್ವತಃ ತಂಗಲಿದ್ದಾರೆ. ಆದುದರಿಂದ ರಾಹುಲ ಇವರು ನಿಜವಾಗಿಯೂ ಭಾರತ ಜೋಡಿಸಲು ಬಯಸುತ್ತಾರೆಯೇ ? ಅಥವಾ `ಪಕ್ಷದಲ್ಲಿ ಅಳಿದುಳಿದ ಮಾನಹಾನಿಯನ್ನು ಉಳಿಸಲು ಸ್ವತಃಕ್ಕೆ ತೋರಿಸುವುದಿದೆಯೇ ?’, ಎಂಬ ಪ್ರಶ್ನೆಯು ಇಲ್ಲಿ ಈ ಸಂದರ್ಭದಲ್ಲಿ ಉದ್ಭವಿಸುತ್ತಿದೆ.

೧. ಸರಕಾರದ ಹಣದ ಮೇಲೆ ಮೋಜುಮಜಾ ಮಾಡುವ ಕಾಂಗ್ರೆಸ್ಸಿನ ಹಳೆಯ ಪರಂಪರೆ !

ವಿಶೇಷವೆಂದರೆ `ರಾಹುಲ ಇವರಿಗೆ ಪ್ರತ್ಯಕ್ಷ ಕಾರ್ಯದ ಸ್ತರದಲ್ಲಿ ಎಷ್ಟು ಅಧ್ಯಯನವಾಗಿದೆ ?’, ಎಂಬುದು ಹೇಳುವ ಅಗತ್ಯವಿಲ್ಲ. ಇಷ್ಟೇ ಅಲ್ಲದೇ, ೧೯೭೭ ರಲ್ಲಿ ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು ತಮ್ಮ ಮೊಮ್ಮಗ ರಾಹುಲ ಗಾಂಧಿಯವರ ಹುಟ್ಟುಹಬ್ಬವನ್ನು ವಿಮಾನದಲ್ಲಿ ಆಚರಿಸಿದ್ದರು. ಆಗ ಅವರೊಂದಿಗೆ ಸೋನಿಯಾ ಗಾಂಧಿ ಇವರೊಂದಿಗೆ ಇತರ ಕುಟುಂಬದವರೂ ಉಪಸ್ಥಿತರಿದ್ದರು. ಆದುದರಿಂದ ಸರಕಾರದ ಹಣದ ಮೇಲೆ ಮೋಜು ಮಾಡುವ ಪರಂಪರೆ ಕಾಂಗ್ರೆಸ್‌ಗೆ ಹೊಸತಲ್ಲ.

೨. ಯಾತ್ರೆಯ ಹೆಸರಿನಲ್ಲಿ ದೇಶಕ್ಕೆ ಮುಳುವಾಗುವುದಿಲ್ಲವಲ್ಲ ?

ಈ ಯಾತ್ರೆಗೆ `ಆಂದೋಲನವಾದಿ’ಗಳೆಂದು ಪ್ರಸಿದ್ಧವಾಗಿರುವ ಮೇಧಾ ಪಾಟಕರ, ಯೋಗೇಂದ್ರ ಯಾದವ ಇವರ ಬೆಂಬಲವೂ ಸಿಗುತ್ತಿದೆ. ಆದುದರಿಂದ `ಈ ಯಾತ್ರೆಯಲ್ಲಿ ಮುಂದೇನಾಗುವುದು ?’, ಎಂಬುದು ಗೊತ್ತಾಗುತ್ತಿದೆ. ಪಾಕಿಸ್ತಾನದಲ್ಲಿ ಆಗಿನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಇವರೂ ಈ ಹಿಂದೆ `ಕಂಟೈನರ್ ಪಾಲಿಸಿ’ ಜಾರಿಗೆ ತಂದಿದ್ದರು. ಆದುದರಿಂದ ಪಾಕಿಸ್ತಾನದಲ್ಲಿ ಆಗಾಗ ಹಿಂಸಾಚಾರಗಳು ನಡೆಯುತ್ತಿದ್ದವು. ಕಾಂಗ್ರೆಸ್ಸಿನ ಈ ಯಾತ್ರೆಯು ದೇಶಕ್ಕೆ ಮುಳುವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ರೈತರು ಮತ್ತು ಪೌರತ್ವ ಕಾಯಿದೆಗೆ ವಿರೋಧಿಸುವ ಶಾಹೀನಬಾಗದಲ್ಲಿನ ನಡೆದ ಪ್ರತಿಭಟನೆಗಳ ಸಮಯದಲ್ಲಿ ದೇಹಲಿಯನ್ನು ಮುತ್ತಿಗೆ ಹಾಕಲಾಯಿತು, ಇದೇ ಆಧಾರದಲ್ಲಿ ದೇಶಕ್ಕೆ ಮುತ್ತಿಗೆ ಹಾಕಲು ಈ ಯಾತ್ರೆ ಇಲ್ಲವಲ್ಲ ?’, ಎಂಬ ಪ್ರಶ್ನೆ ಉದ್ಭವಿಸುತ್ತಿದೆ. ಆದುದರಿಂದ ರಾಹುಲ ಗಾಂಧಿಯವರು ಭಾರತಕ್ಕೆ ಜೋಡಿಸುವ ಮೊದಲು ಕಾಂಗ್ರೆಸ್‌ನ್ನು ಒಗ್ಗೂಡಿಸುವ ಕೆಲಸವನ್ನು ಮಾಡಬೇಕು. – ಪನವ ಬೊರಸ್ತೆ (ಆಧಾರ : ದೈನಿಕ `ಮುಂಬೈ ತರುಣ ಭಾರತ’, ೮.೯.೨೦೨೨)