ಭಾಗ್ಯನಗರ (ತೆಲಂಗಾಣಾ) ದಲ್ಲಿ ೩ ಉಗ್ರರ ಬಂಧನ

ದಾಸರಾದಂದು ಭಾಜಪ ಮತ್ತು ರಾ.ಸ್ವ. ಸಂಗದ ಕಾರ್ಯಕ್ರಮಗಳಲ್ಲಿ ಹ್ಯಾಂಡ್ ಗ್ರೆನೇಡ್ ಗಳನ್ನು ಎಸೆದು ದಾಳಿ ಮಾಡುವವರಿದ್ದರು !

ಭಾಗ್ಯನಗರ (ತೆಲಂಗಾಣಾ) – ವಿಶೇಷ ಕ್ರಿಯಾ ಪಡೆಯು ಒಟ್ಟು ೨೦ ಜನರನ್ನು ಬಂಧಿಸಿದ್ದು ಅದರಲ್ಲಿ ಭಯೋತ್ಪಾದಕರಾದ ಅಬ್ದುಲ್ ಜಾಹೇದ್ ಅಲಿಯಾಸ್ ಮೋಟು, ಮೊಹಮ್ಮದ್ ಸಮಿಯುದ್ದೀನ್ ಮತ್ತು ಮಾಜ್ ಹಸನ್ ಫಾರೂಕ್ ಈ ಮೂವರು ಒಂದು ರಕ್ತಪಾತ ನಡೆಸುವ ಯೋಜನೆಯನ್ನು ತಯಾರಿಸಿದ್ದರು. ಈ ಯೋಜನೆಯ ಪ್ರಕಾರ, ಅವರು ಅಕ್ಟೋಬರ್ ೫, ೨೦೨೨ ರಂದು ದಸರಾ ಸಂದರ್ಭದಲ್ಲಿ ನಡೆಯಲಿರುವ ಭಾಜಪ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮಗಳಲ್ಲಿ ಉಪಸ್ಥಿತರಿದ್ದು ಕಾಲ್ತುಳಿತವನ್ನುಂಟು ಮಾಡುವವರಿದ್ದರು. ಇದಕ್ಕಾಗಿ ಭಯೋತ್ಪಾದಕರು ಅವಶ್ಯಕ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಅವರು ಪಾಕಿಸ್ತಾನದಲ್ಲಿನ ತಮ್ಮ ಪ್ರಮುಖರ ಸಂಪರ್ಕದಲ್ಲಿದ್ದರು. ಭಯೋತ್ಪಾದಕರು ರಕ್ತಪಾತದ ಯೋಜನೆಯನ್ನು ಯಶಸ್ವಿಗೊಳಿಸುವುದಕ್ಕಾಗಿ ಇನ್ನೂ ಕೆಲವರ ಸಹಾಯ ಪಡೆದುಕೊಂಡಿದ್ದರು. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿ ಕೆಲವರನ್ನು ಬಂಧಿಸಿದ್ದಾರೆ. ಬಂಧಿತರಿಂದ ೪ ಲಕ್ಷ ನಗದು ಹಾಗೂ ೪ ಹ್ಯಾಂಡ್ ಗ್ರೆನೇಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹತ್ಯೆಯ ಯೋಜನೆಗೆ ಸಂಬಂಧಿಸಿದ ಆಯ್ದ ಪ್ರಮುಖ ದಾಖಲೆಗಳೊಂದಿಗೆ ಕೆಲವು ಪ್ರಚೋದನಕಾರಿ ಮಾಹಿತಿ ನೀಡೂವ ದಾಖಲೆಗಳನ್ನೂ ವಶಪಡಿಸಿಕೊಳ್ಳಲಾಗಿದೆ.

೧. ಬಂಧಿತ ಉಗ್ರರೊಂದಿಗೆ ಸಂಪರ್ಕದಲ್ಲಿದ್ದ ಆದಿಲ್ ಅಫ್ರೋಜ್, ಅಬ್ದುಲ್ ಹಾದಿ, ಸೊಹೈಲ್ ಕುರೇಷಿ ಮತ್ತು ಅಬ್ದುಲ್ ಕಲೀಂ ಅಲಿಯಾಸ್ ಹಾದಿ ಎಂಬ ನಾಲ್ವರಿಗಾಗಿ ಶೋಧ ನಡೆಸಲಾಗುತ್ತಿದೆ. ಈ ನಾಲ್ವರು ತಲೆಮಾರಿಸಿಕೊಂಡಿದ್ದಾರೆ. ಅಬ್ದುಲ್ ಜಾಹೇದ್ ಅಲಿಯಾಸ್ ಮೋಟು ಮತ್ತು ಆತನ ಸಹಚರರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ. ನ ಅಧಿಕಾರಿಗಳು ಮತ್ತು ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಭಯೋತ್ಪಾದಕರೊಂದಿಗೆ ಸಂಪರ್ಕದಲ್ಲಿದ್ದರು. ಅವರ ಹೆಸರುಗಳು ಘೌರಿ, ಹಂಜಾಲಾ ಮತ್ತು ಮಜೀದ್ ಎಂದಾಗಿದೆ.

೨. ೨೦೦೫ರ ಭಾಗ್ಯನಗರ ಸ್ಫೋಟದಲ್ಲಿ ಮೋಟು ಭಾಗಿಯಾಗಿರುವ ಆರೋಪವೂ ಇದೆ.

೩. ಭಾಜಪ ಮತ್ತು ಸಂಘದ ಸಭೆಗಳು ನಡೆಯುತ್ತಿರುವಾಗ, ಆ ಸ್ಥಳದಲ್ಲಿ ಕಾಲ್ತುಳಿತ ನಡೆದು ದೊಡ್ಡ ಪ್ರಮಾಣದಲ್ಲಿ ಜೀವಹಾನಿಯಾಗಬೇಕೆಂಬ ಉದ್ದೇಶದಿಂದ ಭಯೋತ್ಪಾದಕರು ಹ್ಯಾಂಡ್ ಗ್ರೆನೇಡ್‌ಗಳನ್ನು ಎಸೆಯುವ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.