ಹಿಂದೂ ದೇವತೆಗಳ ಅವಮಾನ ಮಾಡುವ ಹಾಸ್ಯ ಕಲಾವಿದ ಮುನವ್ವರ್ ಫಾರೂಕಿ ಗರಬಾ ಕಾರ್ಯಕ್ರಮದಲ್ಲಿ ಸಹಭಾಗಿ !

ಸಾಮಾಜಿಕ ಜಾಲತಾಣದಲ್ಲಿ ಟಿಕೆ !

ಕರ್ಣಾವತಿ (ಗುಜರಾತ) – ಹಿಂದೂಗಳ ದೇವರನ್ನು ತನ್ನ ಕಾರ್ಯಕ್ರಮದಲ್ಲಿ ಅವಮಾನಿಸುವ ಹಾಸ್ಯ ಕಲಾವಿದ ಮುನವ್ವರ ಫಾರೂಕಿ ಒಂದು ಗರಬಾ ಕಾರ್ಯಕ್ರಮದಲ್ಲಿ ಸಹಭಾಗಿಯಾಗಿ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ. ‘ರಾಜ್ ಫೂಟ್‌ಪ್ರಿಂಟ್’ ಈ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರಗೊಂಡಿರುವುದು ಹೇಳಲಾಗುತ್ತಿದೆ; ಆದರೆ ಈ ಕಾರ್ಯಕ್ರಮ ಎಲ್ಲಿ ನಡೆದಿದೆ ಇದು ಇನ್ನೂ ತಿಳಿದುಬಂದಿಲ್ಲ. ಪಾರುಕಿಯ ಸಹಭಾಗದಿಂದ ಸಾಮಾಜಿಕ ಜಾಲತಾಣದಲ್ಲಿ ಅವನನ್ನು ಟಿಕಿಸಲಾಗುತ್ತಿದೆ. ಈ ವಿಡಿಯೋದಲ್ಲಿ ಗಾಯಕಿ ಫಾಲ್ಗುನಿ ಪಾಠಕ ಹಾಡುತ್ತಿದ್ದು ಹೆಚ್ಚಿನ ಜನರು ಗರಬಾ ನೃತ್ಯ ಮಾಡುತ್ತಿದ್ದಾರೆ. ಇದರಲ್ಲಿ ಮುನವ್ವರ್ ಫಾರೂಕಿ ಕೂಡ ಕಾಣುತ್ತಿದ್ದಾನೆ.

(ಸೌಜನ್ಯ : All In One News)

ಸಂಪಾದಕೀಯ ನಿಲುವು

ಒಂದು ಕಡೆಗೆ ಹಿಂದೂ ದೇವತೆಯರ ಅವಮಾನ ಮಾಡುವುದು ಮತ್ತು ಇನ್ನೊಂದು ಕಡೆ ಅದೇ ದೇವತೆಯ ಹಬ್ಬ ಉತ್ಸವದ ಕಾರ್ಯಕ್ರಮದಲ್ಲಿ ಸಹಭಾಗಿ ಆಗುವುದು, ಈ ರೀತಿ ದ್ವಂದ್ವತೆಯಿಂದ ವರ್ತಿಸುವವರಿಗೆ ಹಿಂದೂಗಳು ಹೇಗೆ ಪ್ರವೇಶ ನೀಡುತ್ತಾರೆ ? ಈ ಆತ್ಮಘಾತಕ ಸಹಿಷ್ಣುತೆ ಮತ್ತು ಗಾಂಧಿಗಿರಿ ಎಷ್ಟು ವರ್ಷ ಸಹಿಸಿದ್ದೇವೆ, ಇದು ಹಿಂದೂಗಳಿಗೆ ಯಾವಾಗ ತಿಳಿಯುವುದು ? ಈಗ ಪಾರುಕಿಗೆ ಗರಬಾದ ಸ್ಥಳಕ್ಕೆ ಪ್ರವೇಶ ನೀಡುವ ಹಿಂದೂಗಳ ಮೇಲೆ ಕೂಡ ಕ್ರಮ ಕೈಗೊಳ್ಳಲು ಒತ್ತಾಯಿಸಬೇಕು !