ಜೈಪುರದ ಗಾರಬಾ ಪೆಂಡಾಲದಲ್ಲಿ ಬಲವಂತವಾಗಿ ನುಗ್ಗಿದ ಮುಸಲ್ಮಾನ ಯುವಕರು !

ಬಜರಂಗ ದಳ ಮತ್ತು ವಿಹಿಂಪ ಕಾರ್ಯಕರ್ತರು ತಲುಪಿದ ನಂತರ ಪರಾರಿ !

ಜೈಪುರ (ರಾಜಸ್ಥಾನ) – ಇಲ್ಲಿ ಸೆಪ್ಟೆಂಬರ್ ೩೦ ರ ರಾತ್ರಿ, ಕೆಲವು ಮುಸಲ್ಮಾನ ಯುವಕರು ತಮ್ಮ ಗುರುತನ್ನು ಮುಚ್ಚಿಟ್ಟು ನವರಾತ್ರಿಯ ಉತ್ಸವದ ಗರಬಾದಲ್ಲಿ ಭಾಗವಹಿಸಲು ಪ್ರವೇಶಿಸಿದ್ದರು. ಈ ವಿಷಯವು ತಿಳಿದ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಅಲ್ಲಿಗೆ ತಲುಪಿದ ನಂತರ ಈ ಯುವಕರು ಓಡಿ ಹೋದರು. ಈ ಹಿಂದೆ ಕರ್ಣಾವತಿ, ಇಂದೋರ್ ಮತ್ತು ಅಕೋಲಾದಲ್ಲಿ ಇದೇ ರೀತಿ ನುಗ್ಗಿದ್ದ ಮುಸಲ್ಮಾನ ಯುವಕರನ್ನು ಥಳಿಸಲಾಗಿತ್ತು.

ಜೈಪುರದ ನಾರಾಯಣ ವಾಟಿಕಾ ಎಂಬಲ್ಲಿರುವ ಉಪವನದಲ್ಲಿ ಗರಬಾವನ್ನು ಆಯೋಜಿಸಲಾಗಿತ್ತು. ಈ ವೇಳೆ ಕೆಲ ಮುಸಲ್ಮಾನ ಯುವಕರು ಅಲ್ಲಿಗೆ ಬಂದರು. ಒಳಗೆ ಹೋಗಲು ಪ್ರವೇಶದ್ವಾರದಲ್ಲಿದ್ದ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ಆರಂಭಿಸಿದರು. ನಂತರ ಭದ್ರತಾ ಸಿಬ್ಬಂದಿಯ ವಿರೋಧವನ್ನು ಮುರಿದು ಒಳಗೆ ಪ್ರವೇಶಿಸಿದರು. ಇದಾದ ಬಳಿಕ ಭದ್ರತಾ ಸಿಬ್ಬಂದಿ ಇದರ ಮಾಹಿತಿಯನ್ನು ಆಯೋಜಕರಿಗೆ ನೀಡಿದರು. ಆಯೋಜಕರು ಪೊಲೀಸರನ್ನು ಕರೆತರಿಸುವ ಮುನ್ನವೇ ಭಜರಂಗ ದಳ ಮತ್ತು ವಿಹಿಂಪ ಕಾರ್ಯಕರ್ತರು ಆ ಸ್ಥಳಕ್ಕೆ ತಲುಪಿದರು. ಅವರು ಗರಬಾಗಾಗಿ ನೆರೆದಿದ್ದ ಎಲ್ಲರ ಗುರುತಿನ ಚೀಟಿಗಳನ್ನು ಪರಿಶೀಲಿಸತೊಡಗಿದರು. ಇದನ್ನು ಕಂಡ ಕೂಡಲೇ ಅಲ್ಲಿ ನುಗ್ಗಿದ್ದ ಮುಸಲ್ಮಾನ್ ಯುವಕರು ಓಡಿ ಹೋದರು. ವಿಶೇಷವೆಂದರೆ, ಈ ಗರಬಾದ ೫ ಆಯೋಜಕರ ಪೈಕಿ ಇಬ್ಬರು ಮುಸಲ್ಮಾನರಾಗಿದ್ದರು. ಬಜರಂಗದಳ ಮತ್ತು ವಿಹಿಂಪ ಇದನ್ನು ವಿರೋಧಿಸಿದ ನಂತರ ಆ ಎರಡು ಆಯೋಜಕರನ್ನು ಹೊರಹಾಕಲಾಯಿತು.

ಸಂಪಾದಕೀಯ ನಿಲುವು

ಮುಸಲ್ಮಾನ್ ಯುವಕರು ಮಾತ್ರ ಏಕೆ ಗರಬಾಗೆ ಕದ್ದುಮುಚ್ಚಿ ಬರುತ್ತಾರೆ ? ಮುಸಲ್ಮಾನ ಯುವತಿಯರು ಮತ್ತು ಮಹಿಳೆಯರು ಏಕೆ ಬರುವುದಿಲ್ಲ ? ಜಾತ್ಯತೀತವಾದಿ ಹಾಗೂ ಪ್ರಗತಿ(ಅಧೋ)ಪರರು ಉತ್ತರಿಸುವರೇ ?