ಬಿಹಾರದಲ್ಲಿನ ಸಾಸಾರಾಮದಲ್ಲಿ ಅಶೋಕನ ಶಿಲಾಲೇಖದ ಮೇಲೆ ಮಜಾರನ್ನು ಕಟ್ಟಲಾಗಿದೆ

(ಮಜಾರ ಅಂದರೆ ಇಸ್ಲಾಮೀ ಸಂತ ಅಥವಾ ಫಕೀರರ ಸಮಾಧಿ)

ಮಹಾನ ಮೌರ್ಯ ಸಾಮ್ರಾಟ ಅಶೋಕನ ಶಿಲಾಲೇಖದ (ಎಡಬದಿಗೆ) ಮೇಲೆ ಮಜಾರನ್ನು (ಬಲಬದಿಗೆ) ಕಟ್ಟಲಾಗಿದೆ

ಸಾಸಾರಾಮ (ಬಿಹಾರ) – ಇಲ್ಲಿನ ರೋಹತಾಸ ಜಿಲ್ಲೆಯಲ್ಲಿನ ಚಂದನ ದಿಬ್ಬದ ಮೇಲಿದ್ದ ಮಹಾನ ಮೌರ್ಯ ಸಾಮ್ರಾಟ ಅಶೋಕನ ಶಿಲಾಲೇಖದ ಮೇಲೆ ಮಜಾರನ್ನು ಕಟ್ಟಲಾಗಿದೆ. ದೇಶದಾದ್ಯಂತ ಸಮ್ರಾಟ ಅಶೋಕನ ೬ ರಿಂದ ೮ ಶಿಲಾಲೇಖಗಳಿವೆ, ಅವುಗಳಲ್ಲಿ ಕೇವಲ ಒಂದು ಬಿಹಾರದಲ್ಲಿದೆ. ಈ ಶಿಲಾಲೇಖದ ಮೇಲೆ ಮಜಾರನ್ನು ಕಟ್ಟಿ ಈಗ ಅದಕ್ಕೆ ಚಾದರ ಹಾಕಲಾಗುತ್ತಿದೆ.

ಒಂದು ಕಡೆ ಅಖಂಡ ಭಾರತದ ಮೇಲೆ (ಕಾಬೂಲಿನಿಂದ ಕನ್ಯಾಕುಮಾರಿ) ಆಡಳಿತ ನಡೆಸುವ ಸಾಮ್ರಾಟ ಅಶೋಕನ ೨ ಸಾವಿರದ ೩೦೦ ವರ್ಷ ಹಳೆಯ ಶಿಲಾಲೇಖವನ್ನು ನಾಶಗೊಳಿಸಲಾಗುತ್ತಿದೆ. ೨ ಸಾವಿರದ ೩೦೦ ವರ್ಷ ಹಳೆಯ ಪರಂಪರೆಯನ್ನು ಕಳೆದ ೨೩ ವರ್ಷಗಳಲ್ಲಿ ಒರೆಸಲಾಗಿದೆ. ಭಾರತೀಯ ಪುರಾತತ್ತ್ವ ಸಮೀಕ್ಷಾ ವಿಭಾಗವು ಜಿಲ್ಲಾಡಳಿತಕ್ಕೆ ಚಂದನ ದಿಬ್ಬದಲ್ಲಿ ನಡೆಯುತ್ತಿರುವ ಕಾಮಗಾರಿಯು ಕಾನೂನುಬಾಹಿರವಾಗಿದ್ದು ಅಲ್ಲಿನ ಪೂರ್ವ ಸ್ಥಿತಿಯನ್ನು ಕಾಯ್ದುಕೊಳ್ಳುವ ಬಗ್ಗೆ ಪತ್ರ ಬರೆದಿತ್ತು. ೨೦೦೮ರಲ್ಲಿ ಭಾರತೀಯ ಪುರಾತತ್ತ್ವ ಸಮೀಕ್ಷಾ ವಿಭಾಗವು ನೀಡಿದ್ದ ಆದೇಶದ ಅನುಸಾರ ಸಮ್ರಾಟ ಅಶೋಕನ ಶಿಲಾಲೇಖದ ಹತ್ತಿರ ನಡೆದ ಅತಿಕ್ರಮಣವನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳು ಸಾಸಾರಾಮದ ಉಪಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದರು. ಆಗಿನ ಜಿಲ್ಲಾಧಿಕಾರಿಗಳು ಮರಕಜೀ ಮೊಹರಮ ಸಮಿತಿಗೆ ಗೋರಿಯ ಕೀಲಿಯನ್ನು ಸರಕಾರಕ್ಕೆ ಒಪ್ಪಿಸುವಂತೆ ಸೂಚಿಸಿತ್ತು. ಆದರೆ ಸಮಿತಿಯು ಆದೇಶವನ್ನು ಪಾಲಿಸಲಿಲ್ಲ. ಸದ್ಯ ಇಲ್ಲಿ ದೊಡ್ಡ ಕಟ್ಟಡವನ್ನು ಕಟ್ಟಲಾಗಿದೆ. (ಈ ಐತಿಹಾಸಿಕ ಪರಂಪರೆಯ ಸ್ಥಳದಲ್ಲಿ ಕಾನೂನುಬಾಹಿರ ಕಟ್ಟಡ ಕಾಮಗಾರಿ ನಡೆಯಲು ಜವಾಬ್ದಾರರಾಗಿರುವ ಭಾರತೀಯ ಪುರಾತತ್ವ ಸಮೀಕ್ಷಾ ವಿಭಾಗದ ಅಧಿಕಾರಿಗಳ ಮೇಲೂ ಕಠೋರ ಕಾರ್ಯಾಚರಣೆಯನ್ನು ನಡೆಸಬೇಕು. ಇದರೊಂದಿಗೆ ಈ ಕಾನೂನು ಬಾಹಿರ ಕಾಮಗಾರಿಯನ್ನು ತಕ್ಷಣ ತೆರವುಗೊಳಿಸಬೇಕು ! – ಸಂಪಾದಕರು)

ಸಂಪಾದಕೀಯ ನಿಲುವು

ಮಜಾರನ್ನು ನಿರ್ಮಿಸುವ ವರೆಗೆ ಸರಕಾರವು ಮಲಗಿತ್ತೇ ? ಇಂತಹವರ ಮೇಲೆ ತನಿಖೆ ನಡೆಯಬೇಕು ಹಾಗೂ ಅಪರಾಧಿಗಳ ಮೇಲೆ ಕಾರ್ಯಾಚರಣೆ ನಡೆಯಬೇಕು !