ತಮಿಳುನಾಡಿನ ಸರಕಾರಿ ನೌಕರರಿಗೆ ದೇವಸ್ಥಾನವನ್ನು ನಡೆಸಲು ಹೇಳುವುದಕ್ಕಿಂತಲೂ ಶಾಲೆ ಮತ್ತು ಆಸ್ಪತ್ರೆಗಳನ್ನು ಸಂಭಾಳಿಸಲು ನೇಮಕಾತಿ ಮಾಡಬೇಕು ! – ಸರ್ವೋಚ್ಚ ನ್ಯಾಯಾಲಯ

ಸರ್ವೋಚ್ಚ ನ್ಯಾಯಾಲಯ

ನವದೆಹಲಿ – ತಮಿಳುನಾಡಿನ ಸರಕಾರಿ ಅಧಿಕಾರಿಗಳಿಗೆ ದೇವಸ್ಥಾನವನ್ನು ನಡೆಸಲು ಹೇಳುವುದಕ್ಕಿಂತಲೂ ಶಾಲೆ ಮತ್ತು ಆಸ್ಪತ್ರೆಗಳ ವ್ಯವಸ್ಥಾಪನೆಯನ್ನು ನಡೆಸಲು ನೇಮಕಾತಿ ಮಾಡಬೇಕು, ಎಂದು ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯವು ಹೇಳಿದೆ. ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡರವರ ನೇತೃತ್ವದ ವಿಭಾಗೀಯ ಪೀಠವು ಟಿ. ಆರ್‌. ರಮೇಶರವರು ದಾಖಲಿಸಿದ ಅರ್ಜಿಯ ಮೇಲೆ ಆಲಿಕೆ ನಡೆಸುವಾಗ ಈ ತೀರ್ಪನ್ನು ನೀಡಿದೆ. ‘ತಮಿಳುನಾಡು ಹಿಂದೂ ಧಾರ್ಮಿಕ ಹಾಗೂ ದತ್ತೀ ಕಾನೂನು, ೧೯೫೯’ರ ಅನ್ವಯ ರಾಜ್ಯದಲ್ಲಿನ ೪೬ ಸಾವಿರ ದೇವಸ್ಥಾನಗಳು ಸರಕಾರದ ಹಿಡಿತದಲ್ಲಿದ್ದು ಅವುಗಳನ್ನು ಸರಕಾರ ನಡೆಸುತ್ತಿದೆ, ಎಂದು ಈ ಅರ್ಜಿಯ ಮೂಲಕ ಸರ್ವೋಚ್ಚ ನ್ಯಾಯಾಲಯದ ಗಮನಕ್ಕೆ ತರಲಾಯಿತು. ಸರ್ವೋಚ್ಚ ನ್ಯಾಯಾಲಯವು ತಮಿಳುನಾಡು ಸರಕಾರಕ್ಕೆ ನೋಟಿಸು ಕಳಿಸಿ ಉತ್ತರ ಕೇಳಿದೆ.

ವಿಭಾಗೀಯ ಪೀಠವು ಅರ್ಜಿದಾರರ ನ್ಯಾಯವಾದಿ ಸಿ. ಎಸ್‌. ವೈದ್ಯನಾಥನ್‌ ರವರಿಗೆ ವಿಶ್ವಸ್ಥರಿಲ್ಲದ ದೇವಸ್ಥಾನಗಳ ಸಂಖ್ಯೆ ಹಾಗೂ ಸರಕಾರಿ ಅಧಿಕಾರಗಳನ್ನು ನೇಮಿಸಲಾದ ದೇವಸ್ಥಾನಗಳ ಸಂಖ್ಯೆ ಗಳ ಬಗ್ಗೆ ಪ್ರತಿಜ್ಞಾಪತ್ರವನ್ನು ಸಾದರಪಡಿಸಲು ಅನುಮತಿ ನೀಡಿತ್ತು. ‘ಇವುಗಳಲ್ಲಿನ ಬಹುತೇಕ ದೇವಸ್ಥಾನಗಳು ಚಿಕ್ಕ ಊರುಗಳಲ್ಲಿ ಇರಬಹುದು’, ಎಂದು ನ್ಯಾಯಾಲಯವು ಹೇಳಿದೆ. ಈ ದೇವಸ್ಥಾನಗಳಲ್ಲಿ ದೊಡ್ಡ ಮಟ್ಟದ ದೇಣಿಗೆ ಅಥವಾ ಕಾಲುದಾರಿಯಿದೆ, ಇಂತಹ ದೇವಸ್ಥಾನಗಳಲ್ಲಿ ಸರಕಾರಿ ಆಡಳಿತದ ಭಾಗವಿರಬಹುದು. ಒಟ್ಟಿನಲ್ಲಿ ಬಂದಂತಹ ನಿಧಿಯನ್ನು ಸಾರ್ವಜನಿಕ ಕಾರಣಗಳಿಗಾಗಿ ಬಳಸಲಾಗುವುದು. ದೇವಸ್ಥಾನದಲ್ಲಿ ನೇಮಿಸಲು ಇಷ್ಟೊಂದು ಅಧಿಕಾರಿಗಳು ಎಲ್ಲಿಂದ ದೊರೆಯುತ್ತಾರೆ, ಎಂಬ ಪ್ರಶ್ನೆಯನ್ನು ನ್ಯಾಯಾಲಯವು ಈ ಸಮಯದಲ್ಲಿ ಕೇಳಿದೆ.

ಹೆಚ್ಚಿನ ಉದ್ಯೋಗವನ್ನು ದೊರಕಿಸಿ ಕೊಡಲು ಸರಕಾರದಿಂದ ಈ ವ್ಯವಸ್ಥೆಯನ್ನು ಬಳಸಲಾಗುತ್ತಿದೆ, ಎಂಬುದನ್ನು ನ್ಯಾಯವಾದಿ ವೈದ್ಯನಾಥನರವರು ನ್ಯಾಯಾಲಯದ ಗಮನಕ್ಕೆ ತಂದುಕೊಟ್ಟಿದ್ದಾರೆ.