ಗದಗ – ಇಲ್ಲಿಯ ನಾಗಾವಿ ಪ್ರದೇಶದಲ್ಲಿ ಒಂದು ಸರಕಾರಿ ಶಾಲೆಯಲ್ಲಿ ಮಹಮ್ಮದ್ ಪೈಗಂಬರ್ ಇವರ ಬಗ್ಗೆ ಪ್ರಬಂಧ ಸ್ಪರ್ಧೆ ಆಯೋಜನೆ ಮಾಡಿದ್ದರಿಂದ ಶಾಲೆಯ ಮುಖ್ಯೋಪಾಧ್ಯಾಯ ಅಬ್ದುಲ್ ಮುನಾಫ ಬಿಜಾಪುರಾ ಇವರಿಗೆ ಅಮಾನತುಗೊಳಿಸಲಾಗಿದೆ. ಕರ್ನಾಟಕ ಸರಕಾರದಿಂದ ಈ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆ ಆಯೋಜಿಸುವ ಯಾವುದೇ ಆದೇಶ ನೀಡಿರಲಿಲ್ಲ; ಆದರೂ ಮುನಫ್ ಇವರು ಗೌಪ್ಯವಾಗಿ ಈ ಸ್ಪರ್ಧೆ ಆಯೋಜಿಸಿದ್ದರು. ಶ್ರೀರಾಮ ಸೇನೆಯ ಕಾರ್ಯಕರ್ತರಿಗೆ ಇದರ ಮಾಹಿತಿ ದೊರೆತನಂತರ ಅವರು ಇದನ್ನು ವಿರೋಧಿಸಿದರು. ಅದರ ನಂತರ ಸರಕಾರದಿಂದ ಮೇಲಿನ ಕ್ರಮ ಕೈಗೊಳ್ಳಲಾಯಿತು.
Karnataka: Headmaster Abdul Munaf suspended for making students write an essay on Prophet Muhammad https://t.co/LV7cjbQoPR
— OpIndia.com (@OpIndia_com) September 29, 2022
೧. ಸರಕಾರವು ಈ ಸಂದರ್ಭದಲ್ಲಿ ಮಾಡಿದ ವಿಚಾರಣೆಯಿಂದ, ಮುನಾಫ್ ಇವರು ಶಿಕ್ಷಕರಿಗೆ ಹೇಳದೇ ಎಂಟನೇ ತರಗತಿಯ ೪೩ ವಿದ್ಯಾರ್ಥಿಗಳಿಗೆ ಮಹಮ್ಮದ್ ಪೈಗಂಬರನ ಬಗ್ಗೆ ಒಂದು ಪುಸ್ತಕ ನೀಡಿ ಪ್ರಬಂಧ ಸ್ಪರ್ಧೆ ಆಯೋಜಿಸಿದ್ದರು. ಅದಕ್ಕಾಗಿ ಅವರಿಗೆ ೫ ಸಾವಿರ ರೂಪಾಯಿಯ ಬಹುಮಾನ ಘೋಷಿಸಿರುವುದು ಬೆಳಕಿಗೆ ಬಂದಿದೆ.
೨. ಒಂದು ವಿದ್ಯಾರ್ಥಿಯ ಪೋಷಕರಾದ ಶರಣಪ್ಪ ಗೌಡ ಹಾಪಲಾದ ಇವರು, ಇಂತಹ ಪ್ರಬಂಧ ಸ್ಪರ್ಧೆಯ ಮೂಲಕ ಮಕ್ಕಳ ಮೇಲೆ ಇಸ್ಲಾಂ ಹೇರುವ ಪ್ರಯತ್ನ ಮಾಡಲಾಗುತ್ತಿದೆ. ಮುಖ್ಯೋಪಾಧ್ಯಾಯ ಮುನಾಫ್ ಇವರು ಮಕ್ಕಳನ್ನು ಮತಾಂತರಗೊಳಿಸುವ ಪ್ರಯತ್ನ ಮಾಡುತ್ತಿದ್ದರು. ಆದ್ದರಿಂದ ನಾನು ಈ ಘಟನೆಯ ಮಾಹಿತಿ ಶ್ರೀರಾಮ ಸೇನೆಯ ಕಾರ್ಯಕರ್ತರಿಗೆ ನೀಡಿದೆ. ಪೈಗಂಬರನ ಬಗ್ಗೆ ಪ್ರಬಂಧ ಬರೆಯುವ ಸ್ಪರ್ಧೆ ನಡೆಸುವ ಹಿಂದೆ ಏನು ಉದ್ದೇಶ ಇತ್ತು ಅದನ್ನು ನಾವು ತಿಳಿಯಲು ಬಯಸುತ್ತೇವೆ ಎಂದು ಹೇಳಿದರು.
ಸಂಪಾದಕೀಯ ನಿಲುವುಮುಸಲ್ಮಾನ ವಿದ್ಯಾರ್ಥಿಗಳಿಗಾಗಿ ಎಂದಾದರು ಹಿಂದೂ ಮುಖ್ಯೋಪಾಧ್ಯಾಯರು ಶ್ರೀರಾಮ, ಶ್ರೀ ಕೃಷ್ಣ ಮುಂತಾದ ಹಿಂದೂ ದೇವತೆಗಳ ಬಗ್ಗೆ ಪ್ರಬಂಧ ಸ್ಪರ್ಧೆ ನಡೆಸುವ ಧೈರ್ಯ ತೋರಲು ಸಾಧ್ಯವೇ ? ಮತ್ತು ತೋರಿಸಿದರೆ, ಆಗ ಅವರ ಸ್ಥಿತಿ ಏನಾಗುವುದು, ಇದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ! |