ನೋಟ್‌ನ ಮೇಲೆ ‘ಚಲನಚಿತ್ರದ ಚಿತ್ರೀಕರಣಕ್ಕಾಗಿ’ ಎಂಬ ಉಲ್ಲೆಖ
ಸೂರತ್ (ಗುಜರಾತ್) – ಇಲ್ಲಿನ ಪೊಲೀಸರು ಒಂದು ಆಂಬ್ಯುಲೆನ್ಸ್‌ನಿಂದ ೨ ಸಾವಿರ ರೂಪಾಯಿಯ ೨೫ ಕೋಟಿ ರೂಪಾಯ ನಕಲಿ ನೋಟುಗಳಿಂದ ತುಂಬಿದ ಪೆಟ್ಟಿಗೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಎಲ್ಲಾ ನೋಟುಗಳ ಮೇಲೆ ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ ಬದಲಿಗೆ ‘ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ’ ಎಂದು ಬರೆಯಲಾಗಿದೆ. ಇದರ ಜೊತೆಗೆ ‘ಚಲನಚಿತ್ರಗಳ ಚಿತ್ರೀಕರಣಕ್ಕಾಗಿ ಮಾತ್ರ’ ಎಂದು ಬರೆಯಲಾಗಿದೆ. ಈ ಪ್ರಕರಣದಲ್ಲಿ ಆಂಬ್ಯುಲೆನ್ಸ್‌ನ ಚಾಲಕನನ್ನು ಮತ್ತಷ್ಟು ವಿಚಾರಣೆ ನಡೆಸಲಾಗುತ್ತಿದೆ. ಚಲನಚಿತ್ರದ ಚಿತ್ರೀಕರಣಕ್ಕಾಗಿ ಇದ್ದರೇ ಯಾವ ಚಲನಚಿತ್ರದ ಚಿತ್ರೀಕರಣಕ್ಕೆ, ಎಲ್ಲಿ ನಡೆಯುತ್ತಿದೆ ? ಮತ್ತು ಆಂಬ್ಯುಲೆನ್ಸ್‌ನಲ್ಲಿ ನಕಲಿ ನೋಟುಗಳನ್ನು ಏಕೆ ತೆಗೆದುಕೊಂಡು ಹೋಗಲಾಗುತ್ತಿತ್ತು ? ಮುಂತಾದುವುಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Surat, Gujarat |On basis of inputs received by Kamrej police, an ambulance was intercepted on Ahmedabad-Mumbai road. On questioning driver & checking vehicle, 6 cartons containing 1290 packets of Rs 2000 counterfeit notes worth Rs 25.80 crores, was found: Hitesh Joysar, SP Rural pic.twitter.com/wWiItpmQpa
— ANI (@ANI) September 29, 2022