ಮಥುರಾದಲ್ಲಿನ ಶ್ರೀಕೃಷ್ಣಜನ್ಮ ಭೂಮಿಯ ಮೇಲೆ ಪೂರ್ವಕ್ಕೆ ಇರುವ ಮೀನಾ ಮಸೀದಿಯನ್ನು ತೆರೆವು ಗೊಳಿಸಬೇಕು !

ಮಥುರಾದಲ್ಲಿನ ದಿವಾಣಿ ನ್ಯಾಯಾಲಯದಲ್ಲಿ ಅರ್ಜಿ

ಮಥುರಾ (ಉತ್ತರಪ್ರದೇಶ) – ಇಲ್ಲಿಯ ಮೀನಾ ಮಸೀದಿಯನ್ನು ಅದರ ಮೂಲ ಸ್ಥಳದಿಂದ ತೆರವುಗೊಳಿಸಬೇಕು, ಅದಕ್ಕಾಗಿ ಇಲ್ಲಿಯ ದಿವಾಣಿ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿದೆ. ಅರ್ಜಿದಾರರು, ಈ ಮಸೀದಿ ಕೇಶವ ದೇವ ದೇವಸ್ಥಾನದ ಜಾಗದಲ್ಲಿ ಕಟ್ಟಲಾಗಿದೆ ಎಂದು ದಾವೆ ಮಾಡಿದ್ದಾರೆ. ಈ ಅರ್ಜಿಯ ಮೇಲೆ ಬರುವ ಅಕ್ಟೋಬರ್ ೨೬ ರಂದು ವಿಚಾರಣೆ ನಡೆಯುವುದು. ಅರ್ಜಿದಾರರ ನ್ಯಾಯವಾದಿ ದೀಪಕ ಶರ್ಮ ಇವರು, ನಾವು ನ್ಯಾಯಾಲಯಕ್ಕೆ ವಸ್ತುಸ್ಥಿತಿಯ ಮಾಹಿತಿ ತೆಗೆದುಕೊಳ್ಳಲು ಮಸೀದಿಗೆ ಒಬ್ಬ ಅಧಿಕಾರಿಯನ್ನು ಕಳಿಸುವ ವಿನಂತಿ ಮಾಡಿದ್ದೇವೆ ಎಂದು ಹೇಳಿದರು.

ಅರ್ಜಿಯಲ್ಲಿ, ಮೊಗಲ್ ಬಾದಶಾಹ ಔರಂಗಜೇಬನು ಶ್ರೀ ಕೃಷ್ಣಜನ್ಮಭೂಮಿಯಲ್ಲಿನ ದೇವಸ್ಥಾನ ಕೆಡವಿ ಅಲ್ಲಿ ಶಾಹಿ ಈದಗಾಹ ಮಸೀದಿ ಕಟ್ಟಿದನು. ಅದರ ನಂತರ ಔರಂಗಜೇಬನ ವಂಶಸ್ಥರ ದೇವಸ್ಥಾನದ ಪೂರ್ವಕ್ಕೆ ಮೀನಾ ಮಸೀದಿ ಕಟ್ಟಿದರು. ಈ ಮಸಿದಿ ಆ ಜಾಗದಿಂದ ತೆರೆವುಗೊಳಿಸಬೇಕು ಎಂದು ಹೇಳಲಾಗಿದೆ.