ತಿರುಪತಿ (ಆಂಧ್ರ ಪ್ರದೇಶ) ಇಲ್ಲಿಯ ಗೋಡೆಗಳ ಮೇಲೆ ಚಿತ್ರಿಸಲಾಗಿರುವ ಹಿಂದೂ ದೇವತೆಗಳ ಚಿತ್ರಗಳ ಮೇಲೆ ಪಕ್ಷದ ಬಣ್ಣ ಬಳಿಯಲಾಗಿದೆ !

ಅಧಿಕಾರದಲ್ಲಿರುವ ಕ್ರೈಸ್ತ ವೈ.ಎಸ್.ಆರ್. ಕಾಂಗ್ರೆಸ್ ಪಕ್ಷದ ಹಿಂದೂ ದ್ರೋಹ !

ತಿರುಪತಿ (ಆಂಧ್ರ ಪ್ರದೇಶ) – ತಿರುಪತಿಯಲ್ಲಿನ ರಸ್ತೆಗಳಿಗೆ ಅಂಟಿಕೊಂಡಿರುವ ಗೋಡೆಗಳ ಮೇಲೆ ಹಿಂದೆ ಭಗವಾನ್ ಶಿವ, ಹನುಮಂತ ಇತರ ದೇವತೆಗಳ ಚಿತ್ರಗಳು ಹಾಗೂ ಶಿವಲಿಂಗ ಚಿತ್ರಿಸಲಾಗಿತ್ತು; ಆದರೆ ಈಗ ಅದರ ಮೇಲೆ ಅಧಿಕಾರದಲ್ಲಿರುವ ವೈ.ಇಸ್.ಆರ್. ಕಾಂಗ್ರೆಸ್ ಪಕ್ಷದ ನೀಲಿ, ಹಸಿರು ಮತ್ತು ಬಿಳಿ ಬಣ್ಣ ಬಳಿಯಲಾಗಿದೆ. ಇದಕ್ಕೆ ವಿರೋಧ ಪಕ್ಷದಿಂದ ತೀವ್ರ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕೂಡ ಇದನ್ನು ವಿರೋಧಿಸಲಾಗುತ್ತಿದೆ. ಈ ಪ್ರಕರಣವನ್ನು ವಿರೋಧಿಸಿರುವ ಸ್ಥಳೀಯ ಮಾಜಿ ಶಾಸಕ ಮತ್ತು ಅವರ ಬೆಂಬಲಿಗರನ್ನು ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಇವರು ಈ ಗೋಡೆಗಳ ಛಾಯಾಚಿತ್ರವನ್ನು ಅವರ ಟ್ವಿಟರ್ ಖಾತೆಯ ಮೂಲಕ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು, ಈ ಛಾಯಾಚಿತ್ರ ತಿರುಪತಿ ನಗರದಲ್ಲಿನದಾಗಿದೆ. ಹಿಂದೂಗಳ ದೇವತೆಯ ಚಿತ್ರಗಳ ಮೇಲೆ ಅಧಿಕಾರದಲ್ಲಿ ಇರುವ ವೈ.ಎಸ್.ಆರ್. ಕಾಂಗ್ರೆಸ್ ಪಕ್ಷ ತಮ್ಮ ಪಕ್ಷದ ಬಣ್ಣ ಬಳಿದಿದ್ದಾರೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಹಿಂದೂ ಧರ್ಮದ ಅಪಮಾನ ಮಾಡುವವರ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಎಂದು ಹೇಳಿದರು.

ಸಂಪಾದಕೀಯ ನಿಲುವು

ಕ್ರೈಸ್ತ ಮುಖ್ಯಮಂತ್ರಿ ಇರುವುದರಿಂದ ಬೇರೆ ಇನ್ನೇನು ಅಪೇಕ್ಷೆ ಮಾಡಲು ಸಾಧ್ಯ ?

ಹಿಂದೂಗಳಿಗೆ ಇಲ್ಲಿಯವರೆಗೆ ಸರ್ವ ಧರ್ಮಸಮಭಾವದ ಉಪದೇಶ ನೀಡಿದ್ದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದೂಗಳು ಈಗಲಾದರೂ ಎಚ್ಚರಗೊಳ್ಳಬೇಕು ಮತ್ತು ಈ ರೀತಿಯ ಘಟನೆ ಮತ್ತೆ ಯಾರು ಪುನರಾವರ್ತಿಸಬಾರದು ಆ ರೀತಿಯ ಸ್ಥಿತಿ ನಿರ್ಮಾಣ ಮಾಡಬೇಕು !