ನೋಬೆಲ್ ಪ್ರಶಸ್ತಿ ಪಡೆದಿದ್ದ ರೋಮನ್ ಬಿಷಪ್ ಮೇಲೆ ಲೈಂಗಿಕ ಕಿರುಕುಳದ ಆರೋಪ

ವ್ಯಾಟಿಕನ್‌ನಿಂದ ವಿಚಾರಣೆ

ವ್ಯಾಟಿಕನ್ ಸಿಟಿ – ನೋಬೆಲ್ ಪ್ರಶಸ್ತಿ ಪಡೆದ ೭೫ ವರ್ಷದ ರೋಮನ್ ಬಿಷಪ್ ಕಾರ್ಲೋಸ್ ಫಿಲಿಪೆ ಜಿಮೇನ್ಸ್ ಬೇಲೋ ಇವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಲಾಗಿದೆ. ನೆದರ್ಲ್ಯಾಂಡಿನ ಒಂದು ನಿಯತಕಾಳಿಕೆಯಲ್ಲಿ ಈ ವಿಷಯವಾಗಿ ವಾರ್ತೆ ಪ್ರಸಾರವಾಗಿದೆ. ಈ ವಾರ್ತೆಯ ನಂತರ ವ್ಯಾಟಿಕನ್ ಈ ಪ್ರಕರಣದ ವಿಚಾರಣೆ ನಡೆಸುವ ಭರವಸೆ ನೀಡಿದೆ. ಬೇಲೋ ೧೯೮೦ ಮತ್ತು ೯೦ ರ ದಶಕದಲ್ಲಿ ದಕ್ಷಿಣ ಪೂರ್ವ ಏಷ್ಯಾದಲ್ಲಿ ಪೂರ್ವ ತಿಮೋರ್ ದೇಶದ ಬಿಷಪ್ ಆಗಿರುವಾಗ ಈ ಘಟನೆ ನಡೆದಿದೆ. ಅಲ್ಲಿ ಅವರು ಅನೇಕ ಹುಡುಗಿಯರ ಲೈಂಗಿಕ ಶೋಷಣೆ ನಡೆಸಿರುವ ಆರೋಪವಿದೆ. ಯಾವ ಹುಡುಗಿಯರ ಲೈಂಗಿಕ ಶೋಷಣೆ ನಡೆಸಲಾಗಿದೆ, ಅವರಿಗೆ ಬೇಲೋ ಇವರು ಹಣ ನೀಡಿದ್ದಾರೆ; ಕಾರಣ ಅವರು ಬಡವರಾಗಿದ್ದರು. ಈ ವಿಷಯವಾಗಿ ಆ ಹುಡುಗಿಯರ ಕುಟುಂಬದವರು, ಅವರು ಹೆದರಿದ್ದರು; ಕಾರಣ ಬೇಲೋ ಯಾವ ಚರ್ಚ್‌ನಲ್ಲಿ ಇದ್ದರು ಆ ಚರ್ಚ್ ಅಲ್ಲಿಯ ಪ್ರಸಿದ್ಧ ಮತ್ತು ಗೌರವಯುಕ್ತವಾಗಿತ್ತು ಎಂದು ಹೇಳಿದರು.

೧೯೭೫ ರಿಂದ ೯೯ ವರೆಗೆ ಪೂರ್ವ ತಿಮೊರ್ ದೇಶದ ಮೇಲೆ ಇಂಡೋನೇಷಿಯಾದ ಆಡಳಿತವಿತ್ತು. ಆ ಸಮಯದಲ್ಲಿ ಅಲ್ಲಿ ದೊಡ್ಡ ನರಸಂಹಾರ ನಡೆದಿತ್ತು. ಆ ಸಮಯದಲ್ಲಿ ಬೇಲೋ ಇವರು ತೀಮೊರ್‌ದಲ್ಲಿ ಅಹಿಂಸಾ ಮಾರ್ಗದಿಂದ ಅಭಿಯಾನ ನಡೆಸಿದರು. ಆದ್ದರಿಂದ ಅವರಿಗೆ ೧೯೯೬ ರಲ್ಲಿ ನೋಬೆಲ್ ಪ್ರಶಸ್ತಿ ನೀಡಲಾಗಿತ್ತು.

ಸಂಪಾದಕೀಯ ನಿಲುವು

ಪ್ರತಿದಿನ ಬೆಳಕಿಗೆ ಬರುವ ಇಂತಹ ಘಟನೆಗಳಿಂದ ಪ್ರತಿಯೊಬ್ಬ ಕ್ರೈಸ್ತ ಪಾದ್ರಿಯ ಇತಿಹಾಸ ಮತ್ತು ವರ್ತಮಾನ ಪರಿಶೀಲಿಸುವ ಸಮಯ ಈಗ ಬಂದಿದೆ, ಹೀಗೆ ಎಲ್ಲರಿಗೂ ಅನಿಸಬಹುದು ! ಇಂತಹ ಪಾದ್ರಿಗಳನ್ನು ಭಾರತದಲ್ಲಿ ಮಾತ್ರ ಶಾಂತಿಯ ಪ್ರತಿರೂಪ ಎಂದು ತಿಳಿಯುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !