ಬಂದೂಕಿನ ಭಯ ತೋರಿಸಿ ರಸ್ತೆ ದುರುಸ್ತಿ ಕೆಲಸ ಮಾಡಿಸಿಕೊಂಡ ಗುರುಗ್ರಾಮ (ಉತ್ತರಪ್ರದೇಶ) ಇಲ್ಲಿಯ ಗ್ರಾಮಸ್ಥರು

೩೦ ಗ್ರಾಮಸ್ಥರ ವಿರುದ್ಧ ದೂರು ದಾಖಲಿಸಲಾಗಿದೆ

ಗುರುಗ್ರಾಮ (ಉತ್ತರಪ್ರದೇಶ) : ಇಲ್ಲಿಯ ಸೆಕ್ಟರ್ ೭೮ ಮತ್ತು ೭೯ ರಲ್ಲಿ ರಸ್ತೆಯ ಕಾಮಗಾರಿ ನಡೆಸುವ ಗುರುಗ್ರಾಮ ಮೆಟ್ರೋಪೋಲಿಟನ್ ಡೆವೆಲಪ್ಮೆಂಟ್ ಅಥಾರಿಟಿಯ ಕಾರ್ಮಿಕರಿಗೆ ಮತ್ತು ಅಧಿಕಾರಿಗಳಿಗೆ ಬೆದರಿಸಿದ ಪ್ರಕರಣದಲ್ಲಿ ನವರಂಗಪುರ ಗ್ರಾಮದ ೩೦ ಜನರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ. ಇದರಲ್ಲಿ ಬ್ಲಾಕ್ ಸಮಿತಿಯ ಮಾಜಿ ಅಧ್ಯಕ್ಷರೂ ಒಳಗೊಂಡಿದ್ದಾರೆ. ಹಣೆಗೆ ಬಂದುಕು ಇರಿಸಿ ಈ ೩೦ ಜನರು ಅಧಿಕಾರಿಗಳನ್ನು ಬೆದರಿಸಿ ಗ್ರಾಮದ ರಸ್ತೆ ದುರಸ್ತಿ ಮಾಡಿಸಿಕೊಂಡಿರುವ ಆರೋಪ ಅವರ ಮೇಲಿದೆ. ಗ್ರಾಮದಲ್ಲಿನ ರಸ್ತೆಯಲ್ಲಿ ಇರುವ ಹಳ್ಳಗಳನ್ನು ಮುಚ್ಚುವುದಕ್ಕಾಗಿ ಗ್ರಾಮಸ್ಥರು ಬಂದೂಕಿನ ಭಯ ತೋರಿಸಿ ಈ ಅಧಿಕಾರಿಗಳಿಂದ ಕೆಲಸ ಮಾಡಿಸಿಕೊಂಡಿದ್ದಾರೆ.

ರಸ್ತೆಯಲ್ಲಿನ ಹಳ್ಳಗಳ ಮುಚ್ಚುವ ಹೆಸರಿನಲ್ಲಿ ಒಬ್ಬ ವ್ಯಕ್ತಿಯು ತನ್ನ ಖಾಸಗಿ ಸ್ವಾರ್ಥಕ್ಕಾಗಿ ಈ ಕೆಲಸ ಮಾಡಿಸಿಕೊಂಡಿದ್ದಾನೆ. ಬ್ಲಾಕ್ ಸಮಿತಿಯ ಮಾಜಿ ಅಧ್ಯಕ್ಷ ಹೋಶಿಯಾರ ಸಿಂಹ ಇವರ ಮಾಲೀಕತ್ವದಲ್ಲಿನ ಪೆಟ್ರೋಲ್ ಬಂಕ್ ಎದುರು ರಸ್ತೆ ಕಟ್ಟಬೇಕು ಎಂದು ಅವರ ಇಚ್ಛೆಯಾಗಿತ್ತು. ಸಿಂಹ ಇವರು ನೇರ ಸರಕಾರದ ಹತ್ತಿರ ಪಂಚಕ್ರೋಷಿಯಲ್ಲಿರುವ ಎಲ್ಲ ಗ್ರಾಮಗಳಿಗೆ ಈ ಸ್ಥಳದಲ್ಲಿ ರಸ್ತೆ ಕಟ್ಟಬೇಕೆಂಬುವುದು ದಾವೆ ಹೂಡಿದರು.