‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ಮೇಲೆ ೫ ವರ್ಷಗಳ ನಿರ್ಬಂಧ

ನವದೆಹಲಿ – ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (ಪಿ.ಎಫ್.ಐ.) ಎಂಬ ಕಟ್ಟರ್ ಜಿಹಾದಿ ಮಾನಸಿಕತೆಯ ಸಂಘಟನೆಯ ಮೇಲೆ ಸರಕಾರವು ೫ ವರ್ಷಗಳಿಗಾಗಿ ನಿರ್ಬಂಧ ಹೇರಿದೆ. ಇದರೊಂದಿಗೆ ಸರಕಾರವು ಹಿರಬ್ ಇಂಡಿಯಾ ಫೌಂಡೇಶನ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಆಪ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ನ್ಯಾಶನಲ್ ಕಾನ್ಫರೆನ್ಸ್ ಆಫ್ ಹ್ಯುಮನ್ ರೈಟ್ ಆರ್ಗನೈಝೇಶನ್, ನ್ಯಾಶನಲ್ ವುವನ್ಸ್ ಫ್ರಂಟ್, ಜ್ಯೂನಿಯರ್ ಫ್ರಂಟ್, ಹಾಗೂ ಎಂಪವರ್ ಇಂಡಿಯಾ ಫೌಂಡೇಶನ್ ಎಂಡ್ ರಿಹಬ್ ಫೌಂಡೇಶನ್ (ಕೇರಳ) ಎಂಬ ಸಂಸ್ಥೆಗಳ ಮೇಲೆಯೂ ನಿರ್ಬಂಧ ಹೇರಿದೆ. ಮುಂದಿನ ೫ ವರ್ಷಗಳಿಗಾಗಿ ಈ ಸಂಘಟನೆಗಳು ಮತ್ತು ನ್ಯಾಸಗಳಿಗೆ ಸಂಬಂಧಿತ ಸಂಸ್ಥೆಗಳಿಗೆ ಈ ನಿರ್ಣಯವು ಅನ್ವಯಿಸಲಿದೆ ಎಂದು ಕೇಂದ್ರವು ಸ್ಪಷ್ಟಪಡಿಸಿದೆ.

ಪಿ.ಎಫ್.ಐ. ಯನ್ನು ಸ್ಥಾಪಿಸಿದ ಕೆಲವು ಸದಸ್ಯರು ಇದು‘ ಸ್ಟುಡೆಂಟ್ಸ್ ಇಸ್ಲಾಮಿಕ್ ಮೂವಮೆಂಟ್ ಆಫ್ ಇಂಡಿಯಾ’ ಅಂದರೆ ‘ಸಿಮಿ’ ಎಂಬ ಜಿಹಾದಿ ಭಯೋತ್ಪಾದಕ ಸಂಘಟನೆಯ ಸದಸ್ಯರಾಗಿದ್ದಾರೆ ಎಂಬ ಮಾಹಿತಿಯನ್ನು ಕೇಂದ್ರಿಯ ಗೃಹ ಸಚಿವಾಲಯವು ನೀಡಿದೆ. ಈ ಸಂಘಟನೆಗೆ ‘ಜಮಾತ-ಅಲ್-ಮುಜಾಹಿದ್ದೀನ್ ಬಾಂಗ್ಲಾದೇಶ’ (ಜೆ.ಎಮ್.ಬಿ.) ಎಂಬ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧವಿರುವುದು ಬೆಳಕಿಗೆ ಬಂದಿದೆ. ಇವೆರಡೂ ನಿರ್ಬಂಧಿತ ಭಯೋತ್ಪಾದಕ ಸಂಘಟನೆಗಳಾಗಿವೆ.

(ಸೌಜನ್ಯ : Tv9 Kannada)