ಪಾಕಿಸ್ತಾನದಲ್ಲಿ ವಿವಾಹಿತ ಹಿಂದೂ ಮಹಿಳೆ ಮತ್ತು ಆಕೆಯ ಇಬ್ಬರ ಅಪ್ರಾಪ್ತ ಹೆಣ್ಣು ಮಕ್ಕಳ ಅಪಹರಣ

ಹೆಣ್ಣು ಮಕ್ಕಳಿಬ್ಬರನ್ನೂ ಬಲವಂತವಾಗಿ ಮತಾಂತರಗೊಳಿಸಿ ಮುಸಲ್ಮಾನರ ಜೊತೆಗೆ ನಿಕಾಹ !

ರಾಚಿ (ಪಾಕಿಸ್ತಾನ) – ಪಾಕಿಸ್ತಾನದ ಸಿಂಧಪ್ರಾಂತದಿಂದ ಓರ್ವ ಹಿಂದೂ ಮಹಿಳೆ ಮತ್ತು ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ಅಪಹರಣ ಮಾಡಲಾಗಿದೆ. ಇದರಲ್ಲಿ ಇಬ್ಬರು ಹೆಣ್ಣು ಮಕ್ಕಳ ಬಲವಂತವಾಗಿ ಮತಾಂತರಗೊಳಿಸಿ ಅವರನ್ನು ಮುಸಲ್ಮಾನರ ಜೊತೆಗೆ ನಿಕಾಹ ಮಾಡಿಕೊಡಲಾಗಿದೆ.

೧. ಮೀನಾ ಮೇಘವಾರ ಈ ೧೪ ವರ್ಷದ ಹುಡುಗಿಯನ್ನು ನಸರಪುರ ಪ್ರದೇಶದಿಂದ ಅಪಹರಿಸಲಾಗಿದೆ ಹಾಗೂ ಮೀರಪೂರಖಾಸ ನಗರದ ಮಾರುಕಟ್ಟೆಯಿಂದ ಮನೆಗೆ ಹಿಂತಿರುಗುವಾಗ ಇನ್ನೊರ್ವ ಹಿಂದೂ ಹುಡುಗಿಯ ಅಪಹರಣ ಮಾಡಲಾಗಿದೆ. ಅದೇ ಸಮಯದಲ್ಲಿ ಮೀರಪೂರಖಾಸನಲ್ಲಿನ ಓರ್ವ ವಿವಾಹಿತ ಹಿಂದೂ ಮಹಿಳೆ ಹಟಾತ್ತಾಗಿ ನಾಪತ್ತೆಯಾದಳು. ಆಕೆಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿ ಮುಸಲ್ಮಾನ ಪುರುಷನೊಂದಿಗೆ ನಿಕಾಹ ಮಾಡಿಸಿರುವುದು ನಂತರ ಬೆಳಕಿಗೆ ಬಂದಿದೆ. ಈ ಹಿಂದೂ ಮಹಿಳೆ ಮೂರು ಮಕ್ಕಳ ತಾಯಿ ಆಗಿದ್ದಾಳೆ ಎಂದು ಹೇಳಲಾಗುತ್ತಿದೆ.

೨. ಮೀರಪೂರಖಾಸದಲ್ಲಿನ ಓರ್ವ ಪೊಲೀಸ್ ಅಧಿಕಾರಿ, “ಮೂರು ಪ್ರಕರಣಗಳ ತನಿಖೆ ಮಾಡಲಾಗುತ್ತಿದೆ. ವಿವಾಹಿತ ಮಹಿಳೆಯ ಪ್ರಕಾರ, ಆಕೆ ಸ್ವಇಚ್ಛೆಯಿಂದ ಮತಾಂತರಗೊಂಡು ಮುಸಲ್ಮಾನ ಪುರುಷನೊಂದಿಗೆ ವಿವಾಹ ಮಾಡಿಕೊಂಡಿರುವುದು,” ಎಂದು ಹೇಳಿದರು.

೩. ಈ ಪ್ರಕರಣದಲ್ಲಿ ಮಹಿಳೆಯ ಪತಿ ರವಿ ಕುರ್ಮಿ ಇವರು ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ; ಆದರೆ ಪೊಲೀಸರು ಅದನ್ನು ದಾಖಲಿಸಲು ನಿರಾಕರಿಸಿದ್ದಾರೆ. (ಭಾರತದಲ್ಲಿನ ಮತ್ತು ಪಾಕಿಸ್ತಾನದಲ್ಲಿನ ಪೊಲೀಸರು ಹಿಂದೂಗಳ ಸಂದರ್ಭದಲ್ಲಿ ಒಂದೆ ರೀತಿ ವರ್ತಿಸುತ್ತಾರೆ, ಇದನ್ನು ತಿಳಿದುಕೊಳ್ಳಿ ! – ಸಂಪಾದಕರು) ರವಿ ಕುರ್ಮಿ ಇವರು, “ನಮ್ಮ ಪಕ್ಕದಲ್ಲಿ ಇರುವ ಅಹಮದ್ ಚಂಡಿಯೋ ಇವನು ನನ್ನ ಪತ್ನಿಗೆ ತೊಂದರೆ ನೀಡುತ್ತಿದ್ದನು. ನಂತರ ಆಕೆಯನ್ನು ಅಪಹರಿಸಿ ಮತಾಂತರಗೊಳಿಸಲಾಗಿದೆ” ಎಂದು ಹೇಳಿದರು.

ಸಂಪಾದಕೀಯ ನಿಲುವು

ಪಾಕಿಸ್ತಾನದಲ್ಲಿ ಈ ರೀತಿಯ ಘಟನೆ ನಡೆಯುವುದು ಹೊಸದೇನಲ್ಲ; ಆದರೆ ಇದರ ಬಗ್ಗೆ ಭಾರತದಲ್ಲಿನ ಮತ್ತು ಜಗತ್ತಿನಾದ್ಯಂತ ಹಿಂದೂಗಳು ನಿಷ್ಕ್ರಿಯವಾಗಿರುತ್ತಾರೆ, ಇದು ಕೂಡ ಅಷ್ಟೇ ಸತ್ಯವಾಗಿದೆ ! ಇದು ಹಿಂದೂಗಳಿಗೆ ಮತ್ತು ಅದರ ಸಂಘಟನೆಗಳಿಗೆ ಲಾಜ್ಜಾಸ್ಪದವಾಗಿದೆ !