ಕೊಲಕಾತಾದಲ್ಲಿನ ಶ್ರೀ ದುರ್ಗಾದೇವಿ ಮಂಟಪ ವ್ಯಾಟಿಕನ್ ಸಿಟಿಯಂತೆ ಅಲಂಕಾರ !

  • ಯೇಸು ಕ್ರಿಸ್ತ ಮತ್ತು ಮೇರಿ ಇವರ ಮಧ್ಯದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿ ಇಡಲಾಗಿದೆ !

  • ಹಿಂದೂಗಳಿಂದ ಸಾಮಾಜಿಕ ಮಾಧ್ಯಮದಿಂದ ವಿರೋಧ !

ಕೊಲಕಾತಾ (ಬಂಗಾಲ) – ಇಲ್ಲಿಯ ಶ್ರೀಭೂಮಿ ದುರ್ಗಾ ಪೂಜಾ ಮಂಡಪದಲ್ಲಿ ಈ ವರ್ಷ ನವರಾತ್ರಿ ಉತ್ಸವ ಪ್ರಯುಕ್ತ ವ್ಯಾಟಿಕನ್ ಸಿಟಿಯ ರೀತಿಯಲ್ಲಿ ಅಲಂಕಾರ ಮಾಡಲಾಗಿದೆ. ಹೊರಗಿನಿಂದ ಈ ಮಂಟಪ ಯಾವುದೋ ಚರ್ಚ್‌ನ ಹಾಗೆ ಅನಿಸುತ್ತದೆ. ಒಳಗೆ ಏಸುಕ್ರಿಸ್ತ ಮತ್ತು ಮೇರಿ ಇವರ ಚಿತ್ರಗಳನ್ನು ಹಾಕಲಾಗಿದೆ. ಇಬ್ಬರ ಮಧ್ಯದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿ ಇಡಲಾಗಿದೆ. ಸಾಮಾಜಿಕ ಜಾಲತಾಣದಿಂದ ಈ ಮಂಟಪದ ಛಾಯಾಚಿತ್ರಗಳು ಪ್ರಸಾರಗೊಂಡ ನಂತರ ಹಿಂದೂಗಳಿಂದ ಟೀಕಿಸಲಾಗುತ್ತಿದೆ.

‘ಇದು ಏನು ಇಲ್ಲ ಸ್ವಲ್ಪ ದಿನ ಕಾಯಿರಿ. ಮುಸಲ್ಮಾನರ ಕಾಬಾದಂತೆ ಕೂಡ ಮಂಟಪ ಅಲಂಕರಿಸಲಾಗುವುದು ಮತ್ತು ಚಂಡಿಪಾಠದ ಬದಲು ಅಜಾನ್ ಕೇಳಲು ಸಿಗುವುದು. ಶ್ರೀ ದುರ್ಗಾದೇವಿಗೆ ಹಿಜಾಬ್ ಹಾಕಲು ಈ ಜನರು ಹಿಂದೆ ಸರಿಯುವುದಿಲ್ಲ. ಯಾವಾಗ ಬಂಗಾಲದ ವಿಷಯ ಬರುತ್ತದೆ, ಆಗ ಅಲ್ಲಿ ಹೀಗೆ ಏನಾದರೂ ನಡೆಯುತ್ತದೆ ಇದರಲ್ಲಿ ಆಶ್ಚರ್ಯ ಅನಿಸುವಂಥದ್ದು ಏನೂ ಇಲ್ಲ’, ಎಂದು ಒಬ್ಬರು ಟೀಕಿಸಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದಿದ್ದರಿಂದ ಅವರು ಸರ್ವಧರ್ಮಸಮ ಭಾವದಯ ಹೆಸರಿನಲ್ಲಿ ಈ ರೀತಿ ಕೃತ್ಯಗಳು ಮಾಡುತ್ತಾರೆ; ಆದರೆ ಬೇರೆ ಧರ್ಮದಲ್ಲಿ ಎಂದಿಗೂ ಸರ್ವಧರ್ಮ ಸಮಭಾವ ಎಂದು ಧಾರ್ಮಿಕ ಸ್ಥಳಗಳಲ್ಲಿ ಹಿಂದೂಗಳ ದೇವತೆಯ ಮೂರ್ತಿ ಅಥವಾ ಧಾರ್ಮಿಕ ಕೃತಿಗಳು ಎಂದೂ ಮಾಡುವುದಿಲ್ಲ, ಇದನ್ನು ಅರಿಯಬೇಕು !