ಪಾಕಿಸ್ತಾನದಲ್ಲಿನ ಭಯೋತ್ಪಾದಕ ಸಂಘಟನೆಗಳೊಂದಿಗೆ ಭಾರತದಲ್ಲಿನ ರೋಹಿಂಗ್ಯಾ ಮುಸಲ್ಮಾನರೊಂದಿಗೆ ನಂಟು ! – ಕೇಂದ್ರ ಸರಕಾರ

ನವ ದೆಹಲಿ – ಭಾರತದಲ್ಲಿ ವಾಸಿಸುವ ರೋಹಿಂಗ್ಯಾ ಮುಸಲ್ಮಾನ ನುಸುಳುಕೋರರಿಗೆ ಪಾಕಿಸ್ತಾನದಲ್ಲಿನ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟಿದೆ, ಎಂದು ಕೇಂದ್ರ ಸರಕಾರವು ದೆಹಲಿ ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಿದ ಪ್ರತಿಜ್ಞಾಪತ್ರದಲ್ಲಿ ತಿಳಿಸಿದೆ. ಈ ನುಸುಳುಕೋರರು ದೊಡ್ಡ ಸಂಖ್ಯೆಯಲ್ಲಿ ಇರುವುದರಿಂದ ದೇಶದಲ್ಲಿ ಭದ್ರತೆಗೆ ಗಂಭೀರ ಸಮಸ್ಯೆ ನಿರ್ಮಾಣವಾಗಿದೆ. ಮ್ಯಾನಮಾರದಿಂದ ಬಂಗಾಲಸಹಿತ ಭಾರತದ ವಿವಿಧ ರಾಜ್ಯಗಳಲ್ಲಿ ರೋಹಿಂಗ್ಯಾ ನುಸುಳುಕೋರರ ಒಗ್ಗಟ್ಟಿನ ಪ್ರವಾಹ ಮುಂದುವರೆದಿದೆ, ಎಂದು ಕೇಂದ್ರ ಸರಕಾರ ಹೇಳಿದೆ. ಗೃಹ ಸಚಿವಾಲಯದ ನಿರ್ಣಯವನ್ನು ಪ್ರಶ್ನಿಸಿ ಮ್ಯಾನಮಾರನಲ್ಲಿರುವ ಮಹಿಳಾ ಸೆನೋಆರಾ ಬೇಗಮ್ ಹಾಗೂ ಆಕೆಯ ೩ ಅಪ್ರಾಪ್ತ ವಯಸ್ಸಿನ ಮಕ್ಕಳು ದಾಖಲಿಸಿದ ಅರ್ಜಿಯ ಕುರಿತು ಕೇಂದ್ರ ಸರಕಾರ ಈ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿತು.

ನೆರೆಯ ದೇಶಗಳಿಂದ ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿ ನುಸುಳಿದ್ದರಿಂದ ಕೆಲವು ಗಡಿಭಾಗದಲ್ಲಿನ ರಾಜ್ಯಗಳಲ್ಲಿ ಜನಸಂಖ್ಯೆಯ ಕುರಿತು ಸಮಸ್ಯೆಯ ಮುನ್ಸೂಚನೆ ಹುಟ್ಟಿಕೊಂಡಿದೆ. ಭಾರತದಲ್ಲಿನ ನಾಗರಿಕರ ಮೂಲಭೂತ ಮಾನವ ಹಕ್ಕುಗಳ ಮೇಲೆ ಅದರ ಅಪಾಯಕರ ಪರಿಣಾಮ ಬೀಳುತ್ತಿದೆ, ಎಂದು ಕೂಡ ಈ ಪ್ರತಿಜ್ಞಾಪತ್ರದಲ್ಲಿ ಹೇಳಲಾಗಿದೆ.