೧೨ ರಾಜ್ಯಗಳಲ್ಲಿ ಎನ್.ಐ.ಎ. ಮತ್ತು ಇಡಿಯಿಂದ ಪಿ.ಎಫ್.ಐ.ಯ ಸ್ಥಳಗಳ ಮೇಲೆ ದಾಳಿ : ೧೦೬ ಜನರ ಬಂದನ

ರಾಷ್ಟ್ರೀಯ ಅಧ್ಯಕ್ಷ ಓಮಾ ಸಾಲೇಮ್ ಇವನ ಸಹಿತ ಅನೇಕ ಪದಾಧಿಕಾರಿಗಳ ಬಂದನ

ನವದೆಹಲಿ – ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.) ಮತ್ತು ಜಾರಿ ನಿರ್ದೇಶನಾಲಯ (ಇಡಿ)ಯು ದೇಶಾದ್ಯಂತ ೧೨ ರಾಜ್ಯಗಳಲ್ಲಿ ‘ಪೊಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ಸ್ಥಳಗಳ ಮೇಲೆ ದಾಳಿ ಮಾಡಿ ೧೦೬ ಜನರನ್ನು ಬಂದಿಸಿದ್ದಾರೆ. ಕರ್ನಾಟಕ, ದೆಹಲಿ, ಬಿಹಾರ, ಬಂಗಾಲ, ಅಸ್ಸಾಂ, ಮಧ್ಯಪ್ರದೇಶ, ಮಹಾರಾಷ್ಟ್ರ, ಕೇರಳ, ತಮಿಳನಾಡು ಇತ್ಯಾದಿ ರಾಜ್ಯಗಳಲ್ಲಿ ಈ ದಾಳಿಯನ್ನು ನಡೆಸಲಾಗಿದೆ. ಇದರಲ್ಲಿ ಪಿ.ಎಫ್.ಐ.ನ ಅಧ್ಯಕ್ಷ ಓಮಾ ಸಾಲೇಮ್ ಇವನ ಕೇರಳದಲ್ಲಿನ ಸ್ಥಳದ ಮೇಲೆಯೂ ದಾಳಿಯಾಗಿದೆ. ಸಾಲೇಮ್ ಸಹಿತ ಪಿ.ಎಫ್.ಐ.ಯ ಕೇರಳದ ಪ್ರಮುಖ ಮಹಮ್ಮದ ಬಶೀರ, ರಾಷ್ಟ್ರೀಯ ಸಚಿವ ವಿ.ಪಿ. ನಜರುದ್ದೀನ ಮತ್ತು ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪಿ. ಕೋಯಾ ಮುಂತಾದವರನ್ನು ಬಂದಿಸಲಾಗಿದೆ. ಪಿ.ಎಫ್.ಐ.ಯ ರಾಜ್ಯ ಹಾಗೂ ಜಿಲ್ಲಾ ಸ್ತರದಲ್ಲಿನ ಮುಖಂಡರ ಕಾರ್ಯಾಲಯಸಹಿತ ಮನೆ ಮನೆಗೆ ಹೋಗಿ ದಾಳಿ ಮಾಡಲಾಗಿದೆ. ಮಹಾರಾಷ್ಟ್ರದ ೨೦ ಸ್ಥಳಗಳಲ್ಲಿ ದಾಳಿ ಮಾಡಲಾಯಿತು. ಮಧ್ಯಪ್ರದೇಶದ ಇಂದೂರಿನಲ್ಲಿ ಪಿ.ಎಫ್.ಐ.ನ ಕಾರ್ಯಾಲಯದ ಮೇಲೆ ದಾಳಿ ಮಾಡಿ ಉಜ್ಜೈನ್‌ನಿಂದ ೪ ಜನರನ್ನು ಬಂದಿಸಲಾಯಿತು. ಮೂಲಗಳಿಂದ ಸಿಕ್ಕಿದ ಮಾಹಿತಿಗನುಸಾರ ಜಿಹಾದಿ ಭಯೋತ್ಪಾದಕರಿಗೆ ಆರ್ಥಿಕ ಸಹಾಯ ಮಾಡಿದ ಪ್ರರಣದಲ್ಲಿ ಈ ದಾಳಿಯನ್ನು ಮಾಡಲಾಗಿದೆ.

೧. ಎನ್.ಐ.ಎ.ಯ ಇಷ್ಟರವರೆಗಿನ ಅತೀ ದೊಡ್ಡ ಕಾರ್ಯಾಚರಣೆ ಇದಾಗಿದೆ. ಇದರಲ್ಲಿ ಪಿ.ಎಫ್.ಐ.ನ ಅನೇಕ ಸ್ಥಳಗಳಿಗೆ ದಾಳಿ ಮಾಡಲಾಗಿದೆ. ಭಯೋತ್ಪಾದನೆಗೆ ನಿಧಿಯನ್ನು ಪೂರೈಸುವುದು, ತರಬೇತಿ ಶಿಬಿರಗಳನ್ನು ಆಯೋಜಿಸುವುದು ಹಾಗೂ ಜನರನ್ನು ನಿರ್ಬಂಧ ಹೇರಿದ ಸಂಘಟನೆಗಳಲ್ಲಿ ಸೇರಿಸಿಕೊಳ್ಳಲು ಕಟ್ಟರ್‌ಪಂಥೀಯರನ್ನಾಗಿ ಮಾಡುವುದು, ಇದರಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳ ಮನೆಗಳಿಗೆ ಮತ್ತು ಕಾರ್ಯಾಲಯಗಳ ಮೇಲೆ ದಾಳಿ ಮಾಡಿ ತನಿಖಾ ದಳದಿಂದ ಶೋಧ ಕಾರ್ಯ ನಡೆಯುತ್ತಿದೆ.

೨. ತೆಲಂಗಾಣದಲ್ಲಿನ ಭಾಗ್ಯನಗರ ಮತ್ತು ಚಂದ್ರಯಾನಗುಟ್ಟಾದಲ್ಲಿನ ಹಾಗೂ ತಮಿಳುನಾಡಿನ ಪಿ.ಎಫ್.ಐ.ಯ ಕಾರ್ಯಾಲಯವನ್ನು ಸೀಲ್ ಮಾಡಲಾಗಿದೆ. ತಮಿಳನಾಡಿನಲ್ಲಿ ಈ ಕಾರ್ಯಾಚರಣೆಯ ವಿರುದ್ಧ ಪಿ.ಎಫ್.ಐ.ಯ ಕಾರ್ಯಕರ್ತರು ವಿರೋಧವನ್ನು ಆರಂಭಿಸಿದರು.

ಯಾವ ರಾಜ್ಯದಲ್ಲಿ ಎಷ್ಟು ಸ್ಥಳಗಳಲ್ಲಿ ದಾಳಿ ?

ಉತ್ತರಪ್ರದೇಶ -೮

ಬಿಹಾರ -೨

ಅಸ್ಸಾಂ- ೫

ದೆಹಲಿ – ೩

ರಾಜಸ್ಥಾನ – ೨

ಮಧ್ಯಪ್ರದೇಶ – ೪

ಮಹಾರಾಷ್ಟ್ರ – ೨೦

ಕರ್ನಾಟಕ – ೨೦

ಆಂಧ್ರಪ್ರದೇಶ – ೨೦

ಪುದುಚೇರಿ – ೩

ತಮಿಳನಾಡು – ೧೦

ಕೇರಳ – ೨೨

ಸಂಪಾದಕೀಯ ನಿಲುವು

ಕೇಂದ್ರೀಯ ತನಿಖಾ ದಳವು ತಡವಾಗಿಯಾದರೂ ಜಿಹಾದಿ ಸಂಘಟನೆ ಪಿ.ಎಫ್.ಐ.ಯ ವಿರುದ್ಧ ಕಾರ್ಯಾಚರಣೆಯನ್ನು ಆರಂಭಿಸಿತು, ಎಂಬುದು ಸ್ವಾಗತಾರ್ಹವಾಗಿದೆ. ಈಗ ಕೇಂದ್ರ ಸರಕಾರ ಇನ್ನೂ ಮುಂದೆ ಹೋಗಿ ಈ ಸಂಘಟನೆಯ ಮೇಲೆ ನಿರ್ಬಂಧ ಹೇರಿ ಅವರನ್ನು ಬೇರುಸಹಿತ ಕಿತ್ತೆಸೆಯಲು ಪ್ರಯತ್ನಿಸಬೇಕು, ಎಂದು ರಾಷ್ಟ್ರಪ್ರೇಮಿ ಜನತೆಗೆ ಅನಿಸುತ್ತದೆ !