ಹಿಂದುದ್ವೇಷಿ ಹೇಳಿಕೆ ನೀಡಿದ ಡಿಎಂಕೆ ಸಂಸದ ಎ. ರಾಜಾ ವಿರುದ್ಧ ಬಂದ್‌ಗೆ ಕರೆ

(ಡಿಎಂಕೆ: ದ್ರಾವಿಡ ಮುನ್ನೇತ್ರ ಕಳಘಂ ಎಂದರೆ ದ್ರಾವಿಡ ಪ್ರಗತಿ ಸಂಘ)

ನೀಲಗಿರಿ (ತಮಿಳುನಾಡು) – ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಪಕ್ಷದ ಸಂಸದ ಎ. ರಾಜಾ ಅವರ ಹಿಂದೂಗಳ ಬಗ್ಗೆ ದ್ವೇಷಪೂರಿತ ಹೇಳಿಕೆಯನ್ನು ನೀಡಿರುವುದರ ವಿರುದ್ಧ ಹಿಂದೂ ಮುನ್ನಾನಿ ಸಂಘಟನೆ ಬಂದ್‌ಗೆ ಕರೆ ನೀಡಿತ್ತು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಎ. ರಾಜಾ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ಅದೇ ರೀತಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರವನ್ನು ಕಳುಹಿಸಿ ಎ. ರಾಜಾ ಇವರು ರಾಜಿನಾಮೆ ನೀಡುವಂತೆ ಆಗ್ರಹಿಸಲಾಗುವುದು. ಎ. ರಾಜಾ ಕೆಲವು ದಿನಗಳ ಹಿಂದೆ ನಡೆದ ಸಭೆಯೊಂದರಲ್ಲಿ ಹಿಂದೂಗಳನ್ನು ವೇಶ್ಯೆಯರಿಗೆ ಹೋಲಿಸಿದ್ದರು. (ಎ. ರಾಜಾ ಆಡಳಿತ ಪಕ್ಷದ ಸಂಸದನಾಗಿದ್ದರಿಂದ ಮತ್ತು ಹಿಂದುದ್ವೇಷ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಪೊಲೀಸರು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಿಲ್ಲ; ಆದರೆ ಇತರ ಧರ್ಮಗಳ ವಿರುದ್ಧ ಹೇಳಿಕೆ ನೀಡಿದ್ದರೆ ಕ್ರಮ ತೆಗೆದುಕೊಳ್ಳಲಾಗುತ್ತಿತ್ತು, ಎಂಬುದು ಸ್ಪಷ್ಟವಾಗುತ್ತದೆ ! – ಸಂಪಾದಕರು)