ಹಣಕಾಸಿನ ವಹಿವಾಟುಗಳ ತನಿಖೆ ನಡೆಯುತ್ತಿರುವುದರ ಪರಿಣಾಮ !
ನವ ದೆಹಲಿ – ಕೇಂದ್ರ ಸರಕಾರದಿಂದ ಚೀನಾ ಕಂಪನಿಗಳ ಹಣಕಾಸಿನ ವಹಿವಾಟುಗಳ ತನಿಖೆ ನಡೆಸಲಾಗುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಶಾವೋಮಿ, ವಿವೋ ಮತ್ತು ಒಪ್ಪೋ ಈ ಚೀನಾ ಕಂಪನಿಗಳ ಕಾರ್ಯಾಲಯಗಳ ಮೇಲೆ ದಾಳಿ ನಡೆಸಲಾಗಿತ್ತು. ಇನ್ನೊಂದು ಕಡೆಗೆ ವರ್ಷದಲ್ಲಿ ೩೦೦ ಚೀನಾ ಆಪ್‌ಗಳನ್ನು ನಿಷೇಧಿಸಲಾಗಿದೆ. ಈ ಕಾರಣಗಳಿಂದಾಗಿ ಈಗ ಚೀನಾ ಕಂಪನಿಗಳು ಭಾರತದಿಂದ ಬೇರೆ ದೇಶಗಳಿಗೆ ಸ್ಥಳಾಂತರಗೊಳ್ಳುವ ಪ್ರಯತ್ನ ಮಾಡುತ್ತಿವೆ. ಕೆಲವರ ಅಭಿಪ್ರಾಯದ ಪ್ರಕಾರ ಭಾರತದಲ್ಲಿ ದಿನಗೂಲಿಯಲ್ಲಿ ಸತತವಾಗಿ ಹೆಚ್ಚಳವಾಗುತ್ತಿರುವುದರಿಂದ ಚೀನಾ ಕಂಪನಿಗಳು ಭಾರತದ ಬದಲು ಇತರ ನೆರೆಯ ದೇಶಗಳಿಗೆ ಸ್ಥಳಾಂತರಗೊಳ್ಳುವ ಯೋಚನೆ ಮಾಡುತ್ತಿದೆ.
भारत सरकार की कार्रवाई से घबराहट में #ChineseCompanies, दूसरे देश में #ManufacturingPlant लगाने की कर रही तैयारीhttps://t.co/SkspFgQ0CP
— India TV Hindi (@IndiaTVHindi) September 18, 2022
ಚೀನಾ ಸರಕಾರದ ಮುಖವಾಣಿ ಆಗಿರುವ ‘ಗ್ಲೋಬಲ್ ಟೈಮ್ಸ್’ನ ವಾರ್ತೆಯನುಸಾರ ಚೀನಾ ಕಂಪನಿಗಳು ಭಾರತ ಬಿಟ್ಟು ಈಜಿಪ್ಟ್, ನೈಜೇರಿಯಾ, ಬಾಂಗ್ಲಾದೇಶ ಮತ್ತು ಇಂಡೋನೇಷಿಯ ಈ ದೇಶಗಳಿಗೆ ಸ್ಥಳಾಂತರಗೊಳ್ಳುವ ಯೋಚನೆ ಮಾಡುತ್ತಿದೆ. ಚೀನಾ ಕಂಪನಿಯಿಂದ ಈ ದೇಶಗಳಲ್ಲಿ ಉತ್ಪಾದನೆ ಪ್ರಕಲ್ಪಗಳು ಸಹ ಆರಂಭಿಸಲಾಗುತ್ತಿದೆ. ಚೀನಾ ಕಂಪನಿಗಳು ಭಾರತದಿಂದ ಹೊರಗೆ ಹೋದರೆ ಇದರ ಆರ್ಥಿಕವಾಗಿ ದೊಡ್ಡ ಹೊಡೆತ ಭಾರತಕ್ಕೆ ಬೀಳಬಹುದು ಎಂದು ಹೇಳಿದೆ.