ಬ್ರಿಟನ್‌ನಲ್ಲಿ ಮುಸಲ್ಮಾನರಿಂದ ಹಿಂದೂಗಳ ಮೇಲೆ ದಾಳಿ !

  • ದೇವಸ್ಥಾನದಲ್ಲಿ ವಿದ್ವಂಸಕ ಕೃತ್ಯ ನಡೆಸಿ ಭಗವಾ ದ್ವಜವನ್ನು ಸುಟ್ಟು ಹಾಕಿದರು

  • ಪೊಲೀಸರ ಮೇಲೆ ಗಾಜಿನ ಬಾಟಲಿಯಿಂದ ದಾಳಿ

ಲಂಡನ (ಬ್ರಿಟನ) – ಬ್ರಿಟನ್‌ನ ಲಿಸೇಸ್ಟರ್ ನಗರದಲ್ಲಿ ಸಪ್ಟೆಂಬರ್ ೧೮ ರಂದು ಮುಸಲ್ಮಾನರು ಹಿಂದೂಗಳನ್ನು ಗುರಿಯಾಗಿಸಿದ್ದರಿಂದ ಹಿಂದೂಗಳು ಕೂಡ ಅವರಿಗೆ ಪ್ರತ್ಯುತ್ತರ ನೀಡುವ ಪ್ರಯತ್ನ ಮಾಡಿದರು. ಆದ್ದರಿಂದ ಅಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಎರಡು ಧರ್ಮದ ಗುಂಪುಗಳು ಅಲ್ಲಿ ಸೇರಿದವು ಮತ್ತು ಅವರು ಒಬ್ಬರನ್ನೊಬ್ಬರು ವಿರೋಧಿಸಲು ಆರಂಭಿಸಿದರು. ಆ ಸಮಯದಲ್ಲಿ ಪೊಲೀಸರು ಅವರನ್ನು ತಡೆಯುವ ಪ್ರಯತ್ನ ಮಾಡುವಾಗ ಅವರ ಮೇಲೆ ಗಾಜಿನ ಬಾಟಲಿಗಳು ಎಸೆಯಲಾಯಿತು. ಕೋಲು ತಂದಿರುವ ಗುಂಪಿನಿಂದ ಆಸ್ತಿಯನ್ನು ನಾಶ ಮಾಡಿದರು. ಹಿಂದೂಗಳ ಒಂದು ದೇವಸ್ಥಾನದಲ್ಲಿನ ಭಗವಾ ದ್ವಜಾ ತೆಗೆದು ಅದನ್ನು ಸುಡವ ಒಂದು ವಿಡಿಯೋದಲ್ಲಿ ಕಂಡಿದೆ. ಈ ಹಿಂಸಾಚಾರದ ಪ್ರಕರಣದಲ್ಲಿ ೨೭ ಜನರನ್ನು ಬಂಧಿಸಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ತರುವುದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಯಿತು. ಮುಂದಿನ ಕೆಲವು ದಿನಗಳವರೆಗೆ ಈ ಪರಿಸರದಲ್ಲಿ ಪೊಲೀಸ್ ಬಂದೋಬಸ್ತ್ ಇರುವುದು. ಆಗಸ್ಟ್ ೨೮ ರಂದು ಬ್ರಿಟನ್‌ನಲ್ಲಿ ನಡೆದಿರುವ ಏಷ್ಯಾ ಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸಿತ್ತು. ಅದರ ನಂತರ ಸಪ್ಟೆಂಬರ್ ೬ ರಂದು ಮದವೇರಿದ್ದ ಪಾಕಿಸ್ತಾನಿ ಮುಸಲ್ಮಾನರಿಂದ ಲಿಸೇಸ್ಟರ್ ನಲ್ಲಿ ಹಿಂದೂಗಳ ಮೇಲೆ ದಾಳಿ ಮಾಡಿದ್ದರು. ಇದೆ ಸಂದರ್ಭದಲ್ಲಿ ಈ ಘಟನೆ ನಡೆಯಿತು.

೧. ಹಿಂಸಾಚಾರದ ಸಮಯದಲ್ಲಿ ಉಪಸ್ಥಿತರಿರುವ ಒಬ್ಬ ಪ್ರತ್ಯಕ್ಷದರ್ಶಿ ಮಹಿಳೆಯು, ಜನರು ಕಪ್ಪು ಬಣ್ಣದ ಮುಖವಾಡ ಧರಿಸಿದ್ದರು. ಅವರ ಮುಖ ಮತ್ತು ತಲೆ ಮುಚ್ಚಲಾಗಿತ್ತು. ಪೊಲೀಸರು ರಸ್ತೆಯ ಮೇಲೆ ಬ್ಯಾರಿಕೆಡ್ಸ್ ಹಚ್ಚಿದ್ದರು. ಗುಂಪಿನಿಂದ ಗಾಜಿನ ಬಾಟಲಗಳು ಮತ್ತು ಇತರ ಅನೇಕ ವಸ್ತುಗಳು ಎಸೆಯಲಾಗುತ್ತಿರುವಾಗ ಪೊಲೀಸರು ಗುಂಪನ್ನು ಹಿಂದೆ ತಳ್ಳಲು ಪ್ರಯತ್ನಿಸುತ್ತಿದ್ದರು ಎಂದು ಹೇಳಿದರು.

೨. ಇಲ್ಲಿಯ ಪೊಲೀಸ ಅಧಿಕಾರಿ ನಿಕ್ಸಾನ್ ಇವರು, ನಮಗೆ ಒಂದು ವಿಡಿಯೋದ ಮಾಹಿತಿ ದೊರೆತಿದೆ, ಅದರಲ್ಲಿ ಒಂದು ವ್ಯಕ್ತಿ ಲಿಸೇಸ್ಟರದ ಮಿಲ್ಟನ್ ರಸ್ತೆಯಲ್ಲಿರುವ ಧಾರ್ಮಿಕ ಕಟ್ಟಡದ ಹೊರಗೆ ದ್ವಜ ತೆಗೆಯುವುದು ಕಾಣುತ್ತಿದೆ. ಪೊಲೀಸ ಅಧಿಕಾರಿ ಪರಿಸರದಲ್ಲಿ ಅವ್ಯವಸ್ಥಿತ ವ್ಯವಹಾರ ನಡೆಸುತ್ತಿರುವಾಗ ಈ ಘಟನೆ ನಡೆದಿದೆ. ಈ ಘಟನೆಯ ವಿಚಾರಣೆ ನಡೆಸಲಾಗುವುದು ಎಂದು ಹೇಳಿದರು.

೩. ಈ ಹಿಂಸಾಚಾರದ ಪ್ರಕಾರದಲ್ಲಿ ಸ್ಥಳೀಯ ಶಾಸಕ ಕ್ಲಾವುಡಿಯಾ ವೆಬ್ಬೆ ಇವರು, ಏಶಿಯನ್ ಕಪ್ ಪಂದ್ಯದ ಮೊದಲನಿಂದಲೇ ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಅದರ ನಂತರ ಮೊದಲ ಬಾರಿಗೆ ಹಿಂಸಾಚಾರ ನಡೆದಿದೆ ಎಂದು ಹೇಳಿದರು.

ಗಾಳಿ ಸುದ್ದಿ ಹರಡಿ ಹಿಂದೂಗಳ ಮೇಲೆ ದಾಳಿ

ಇಲ್ಲಿಯ ಪ್ರಸಾರ ಮಾಧ್ಯಮಗಳು ನೀಡಿರುವ ವಾರ್ತೆಯ ಪ್ರಕಾರ ಹಿಂದೂಗಳು ಮಸೀದಿಯ ಮೇಲೆ ದಾಳಿ ನಡೆಸಿದ್ದಾರೆ ಮತ್ತು ಹಿಂದೂಗಳಿಂದ ಒಬ್ಬ ಮುಸಲ್ಮಾನ ಯುವತಿಯನ್ನು ಅಪಹರಿಸಲಾಗಿದೆ, ಈ ರೀತಿ ಎರಡು ಗಾಳಿ ಸುದ್ದಿ ಹರಡಿ ಮುಸಲ್ಮಾನರು ಹಿಂದೂಗಳ ಮೇಲೆ ದಾಳಿ ನಡೆಸಿದ್ದಾರೆ. ಇದರಲ್ಲಿ ಒಂದು ದೇವಸ್ಥಾನಕ್ಕೆ ನುಗ್ಗಿ ವಿದ್ವಾಂಸಕ ಕೃತ್ಯ ನಡೆಸಿದ್ದಾರೆ. ಹಿಂದೂಗಳ ಮನೆಯ ಮೇಲೆ ದಾಳಿ ಮಾಡಿದ್ದಾರೆ.

ಮುಸಲ್ಮಾನರಿಂದ ತಯಾರಿಸಲಾದ ಕರ ಪತ್ರದಲ್ಲಿ ಸಂಘದ ಉಲ್ಲೇಖ

ಬರ್ಮಿಂಗ್‌ಹ್ಯಾಮ್ ನಲ್ಲಿ ಮುಸಲ್ಮಾನರು ಲಿಸೇಸ್ಟರ್ ನಲ್ಲಿನ ಘಟನೆಯಂದ ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿದ್ದರು. ಅದರಲ್ಲಿ, ನಾವು ಲಿಸೇಸಿಸ್ಟರ್‌ನಲ್ಲಿ ವಿರೋಧ ವ್ಯಕ್ತಪಡಿಸಲು ಹೋಗುತ್ತಿದ್ದೇವೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಟ್ಟರವಾದಿಗಳಿಗೆ ನಮ್ಮ ಪೊಲೀಸ್, ಸಿಖ ಮಹಿಳೆ, ಮಕ್ಕಳು ಮತ್ತು ವೃದ್ಧರು ಅವರ ಜೊತೆಗೆ ಆಟ ಆಡಲು ಬಿಡುವುದಿಲ್ಲ. ಎಂದು ಫಕಲದಲ್ಲಿ ಬರೆಯಲಾಗಿತ್ತು. (‘ಹಿಂದೂ ಸಿಖರ ವಿರುದ್ಧ ಇದ್ದಾರೆ’, ಇದನ್ನು ತೋರಿಸುವುದು ಮುಸಲ್ಮಾನರ ಪ್ರಯತ್ನ ಅರ್ಥಮಾಡಿಕೊಳ್ಳಬೇಕು ! – ಸಂಪಾದಕರು)

ಹಿಂದೂಗಳು ಆಂದೋಲನ ನಡೆಸಿದ್ದರು !

ಹಿಂದೂಗಳು ಇಲ್ಲಿಯ ಬೇಲಗ್ರೇವ ರಸ್ತೆಯಿಂದ ಒಂದು ಆಂದೋಲನ ನಡೆಸಿದ್ದರು. ಅಲ್ಲೇ ಮುಸಲ್ಮಾನರ ಗುಂಪು ಅವರ ಎದುರು ಬಂದ ನಂತರ ಅವರವರಲ್ಲೇ ಘೋಷಣೆ ಕೂಗಿವುದು ಆರಂಭವಾಯಿತು. ಮುಸಲ್ಮಾನರು ‘ಅಲ್ಲಾಹು ಅಕ್ಬರ್’ (ಅಲ್ಲ ಮಹಾನ ಆಗಿರುವನು) ಹಾಗೂ ಹಿಂದೂಗಳು ‘ಜೈ ಶ್ರೀ ರಾಮ’ ಮತ್ತು ‘ವಂದೇ ಮಾತರಂ’ ಎಂಬ ಘೋಷಣೆ ನೀಡುತ್ತಿದ್ದರು.

‘ಲಿಸೇಸ್ಟರ್ ಬ್ರಹ್ಮ ಸಮಾಜ ಶಿವಾಲಯ’ ದೇವಸ್ಥಾನದ ಅಧ್ಯಕ್ಷ ಮಧು ಶಾಸ್ತ್ರೀ ಇವರು ಪೊಲೀಸರಿಗೆ ಪತ್ರ ಬರೆದು ದೇವಸ್ಥಾನದ ಮೇಲಿನ ಧ್ವಜ ತೆಗೆದು ಅದನ್ನು ಸುಟ್ಟಿರುವವನಿಗೆ ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿದರು. ಹಾಗೂ ದೇವಸ್ಥಾನದ ಸುರಕ್ಷೆ ಹೆಚ್ಚಿಸಲು ಸಹ ಹೇಳಿದರು. ಇಲ್ಲಿಯ ಬೀಗುವಿನ ವಾತಾವರಣ ಹೆಚ್ಚಾದರೆ ದೇವಸ್ಥಾನ ಮುಚ್ಚಬೇಕಾಗುತ್ತದೆ ಎಂದು ಹೇಳಿದರು.
ಪೊಲೀಸರು ದೇವಸ್ಥಾನದ ಮೇಲೆ ದಾಳಿ ನಡೆಸಿರುವ ಪ್ರಕರಣದಲ್ಲಿನ ಇಬ್ಬರನ್ನು ಬಂಧಿಸಿದ್ದಾರೆ. ದೇವಸ್ಥಾನದ ಮೇಲಿನ ದಾಳಿಯ ಸಮಯದಲ್ಲಿ ಇಬ್ಬರು ಗಾಯಗೊಂಡಿದ್ದಾರೆ.

ಸಂಪಾದಕೀಯ ನಿಲುವು

  • ಕಳೆದ ಅನೇಕ ವರ್ಷಗಳಿಂದ ಬ್ರಿಟನ್‌ನಲ್ಲಿನ ಪರಿಸ್ಥಿತಿಯ ವರದಿ ನೋಡಿದರೆ ಅಲ್ಲಿ ಇಸ್ಲಾಮಿ ಕಟ್ಟರವಾದ ಹೆಚ್ಚುತ್ತಿದೆ; ಆದರೆ ಇವರ ಮೇಲೆ ಸರಕಾರದ ನಿಯಂತ್ರಣವಿಲ್ಲ. ಜಗತ್ತಿಗೆ ಮಾನವ ಹಕ್ಕುಗಳ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಸಲಹೆ ನೀಡುವ ಬ್ರಿಟನ್‌ನಲ್ಲಿ ಹಿಂದೂಗಳ ಧಾರ್ಮಿಕ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳು ನಾಶವಾಗುತ್ತಿದೆ, ಇದು ಅಲ್ಲಿಯ ಸರಕಾರಕ್ಕೆ ಲಚ್ಚಾಸ್ಪದ !
  • ಹಿಂದೂಗಳನ್ನು ಉದ್ದೇಶ ಪೂರ್ವಕ ಗುರಿ ಮಾಡುವ ಮುಸಲ್ಮಾನರ ಪ್ರಯತ್ನ ಎಲ್ಲಾ ಕಡೆ ಇರುತ್ತದೆ; ಕಾರಣ ಹಿಂದೂ ಮೂರ್ತಿ ಪೂಜೆ ಮಾಡುತ್ತಾರೆ. ಇಸ್ಲಾಂನಲ್ಲಿ ಮೂರ್ತಿ ಪೂಜೆ ಅಯೋಗ್ಯ ಎಂದು ಹೇಳಲಾಗುತ್ತದೆ. ಆದ್ದರಿಂದ ಇಂತಹ ಮತಾಂಧರು ಜಗತ್ತಿನಾದ್ಯಂತ ಹಿಂದೂಗಳ ಜೊತೆಗೆ ಎಂದಿಗೂ ಹೊಂದಿಕೊಂಡು ಇರಲು ಸಾಧ್ಯವಿಲ್ಲ ?