ಆಯೋಜಕರಲ್ಲಿ ಒಬ್ಬರು ಮುಸಲ್ಮಾನ !
ರಾಯಪುರ (ಛತ್ತಿಸಗಢ) – ಇಲ್ಲಿಯ ಫುಂಡಹರ್ ಪ್ರದೇಶದಲ್ಲಿರುವ ಸಾಲಾಸರ ಬಾಲಾಜಿ ದೇವಸ್ಥಾನದಲ್ಲಿ ಎಫ್.ಡಿ.ಸಿ.ಎ. ಹೆಸರಿನ ಕಂಪನಿಯ ಆರಿಫ್ ಮತ್ತು ಮನೀಶ್ ಈ ಆಯೋಜಕರ ಮೂಲಕ ಒಂದು ‘ಫ್ಯಾಷನ್ ಶೋ’ ದ ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಪಾಶ್ಚಾತ್ಯ ಉಡುಗೆತೊಡಿಗೆ ಧರಿಸಿರುವ ಅನೇಕ ಯುವತಿಯರು ಸಹಭಾಗಿಯಾಗಿದ್ದರು. ಆಯೋಜನೆಯ ಪ್ರಾರಂಭವಾದ ನಂತರ ಕೆಲವೇ ಸಮಯದಲ್ಲಿ ಬಜರಂಗದಳದ ಕಾರ್ಯಕರ್ತರು ಅಲ್ಲಿಗೆ ತಲುಪಿದರು ಮತ್ತು ಈ ಕಾರ್ಯಕ್ರಮವನ್ನು ನಿಲ್ಲಿಸಿದರು. ಈ ಘಟನೆಯ ಮಾಹಿತಿ ದೊರೆಯುತ್ತಲೇ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದರು ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸಿ ಕಾರ್ಯಕ್ರಮ ರದ್ದಗೊಳಿಸಿದರು.
रायपुर के सालासर मंदिर में फैशन शो पर बवाल: मॉडल्स कर रही थी रैंप वॉक, बजरंग दल कार्यकर्ताओं ने करवाया बंद; आयोजकों से हुई बहसhttps://t.co/TZWZSkAhIs#Chhattisgarh #Raipur pic.twitter.com/ZwyfJRa197
— Dainik Bhaskar (@DainikBhaskar) September 18, 2022
ಈ ಸಮಯದಲ್ಲಿ ಸಹಭಾಗಿ ಆಗಿರುವ ಯುವತಿಯರು ದೇವಸ್ಥಾನದ ಹೊರಗೆ ಹೊರಟು ಹೋದರು. ಭಜರಂಗದಳದ ಕಾರ್ಯಕರ್ತರು ವಿರೋಧದ ಸಮಯದಲ್ಲಿ ‘ಜೈ ಶ್ರೀರಾಮ’ ಎಂದು ಘೋಷಣೆ ಕೂಗುತ್ತಿದ್ದರು. ಭಜರಂಗದಳವು ಈ ಪ್ರಕರಣದಲ್ಲಿ ಪೊಲೀಸರಲ್ಲಿ ಧಾರ್ಮಿಕ ಭಾವನೆ ನೋಯಿಸಿರುವದರ ದೂರು ದಾಖಲಿಸಿದ್ದಾರೆ. ಈ ಆಯೋಜನೆಯ ಘಟನೆಯ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ. ಈ ವಿಡಿಯೋದಲ್ಲಿ ಹಿಜಾಬ್ (ಮುಸಲ್ಮಾನ ಮಹಿಳೆಯರ ತಲೆ ಮತ್ತು ಕತ್ತನ್ನು ಮುಚ್ಚಿಕೊಳ್ಳುವ ವಸ್ತ್ರ) ಧರಿಸಿರುವ ಓರ್ವ ಮಹಿಳೆ ಸಹ ಕಾಣುತ್ತಿದ್ದಾಳೆ.
ಸಂಪಾದಕೀಯ ನಿಲುವು
|