ಇರಾನಲ್ಲಿನ ಮಹಿಳೆಯರು ಹಿಜಾಬ್ ತೆಗೆದು ಸರಕಾರದ ವಿರುದ್ಧ ಆಂದೋಲನ !

ಹಿಜಾಬ್ ಧರಿಸದೆ ಇರುವುದರಿಂದ ಬಂಧಿಸಿದ ನಂತರ ಸಾವನ್ನಪ್ಪಿರುವ ಇರಾನಲ್ಲಿನ ಯುವತಿಯ ಪ್ರಕರಣ

(ಹಿಜಾಬ್ ಎಂದರೆ ಮುಸಲ್ಮಾನ ಮಹಿಳೆಯರು ತಮ್ಮ ತಲೆ ಮತ್ತು ಕತ್ತನ್ನು ಮುಚ್ಚುವುದಕ್ಕಾಗಿ ಉಪಯೋಗಿಸುವ ವಸ್ತ್ರ)

ತೆಹರಾನ್ (ಇರಾನ್) – ಪಶ್ಚಿಮ ಇರಾನದಲ್ಲಿನ ಸಾಕೇಜ ನಗರದಲ್ಲಿ ಸೆಪ್ಟೆಂಬರ್ ೧೭ ರಂದು ಮಹಿಳೆಯರು ಹಿಜಾಬ್ ತೆಗೆದು ಸರಕಾರದ ವಿರುದ್ಧ ಆಂದೋಲನ ನಡೆಸಿದರು. ಹಿಜಾಬ್ ಸಂಬಂಧಿದ ನಿಯಮದ ಉಲ್ಲಂಘನೆ ಮಾಡಿರುವ ಪ್ರಕರಣದಲ್ಲಿ ಪೊಲೀಸರ ದೌರ್ಜನ್ಯದಿಂದ ೨೨ ವಯಸ್ಸಿನ ಮಹಸಾ ಅಮಿನಿ ಇವಳು ಸಾವನ್ನಪ್ಪಿದಳು. ಆಕೆಯ ಸಾವನ್ನು ಖಂಡಿಸಿ ಇರಾನಿನಲ್ಲಿನ ಮಹಿಳೆಯರು ಆಕ್ರಮಣಕಾರಿಯಾಗಿದ್ದಾರೆ. ಹಿಜಾಬ್ ತೆಗೆದು ನಡೆಸಿರುವ ಆಂದೋಲನದಲ್ಲಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಸಾರಗೊಂಡಿದೆ. ಇರಾನಿನಲ್ಲಿನ ಮಹಿಳೆಯರಿಗೆ ಹಿಜಾಬ್ ಅನಿವಾರ್ಯವಿದೆ. ಹಿಜಾಬ್ ತೆಗೆಯುವುದು ಇರಾನಿನಲ್ಲಿ ದಂಡಿಸುವ ಅಪರಾಧವಾಗಿದೆ.

ಏನಿದು ಪ್ರಕರಣ ?

ಹಿಜಾಬ್ ಧರಿಸದೆ ಇರುವುದರಿಂದ ಪೊಲೀಸರು ಮಹಾಸ ಅಮೀನಿ ಎಂಬ ೨೨ ವಯಸ್ಸಿನ ಯುವತಿಗೆ ಸೆಪ್ಟೆಂಬರ್ ೧೩ ರಂದು ಬಂಧಿಸಿದ್ದರು; ಆದರೆ ೩ ದಿನಗಳ ಕಾರಾಗೃಹದಲ್ಲಿ ಪ್ರಜ್ಞಾಹೀನ ಅವಸ್ಥೆಯಲ್ಲಿ ಇರುವ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಆಕೆ ಸಾವನ್ನಪ್ಪಿದಳು. ಮಹಸಾಳ ಕುಟುಂಬದವರನ್ನು ಭೇಟಿಯಾಗಲು ತೆಹರಾನಿಗೆ ಬಂದಿದ್ದಳು. ಬಂಧಿಸಿದ ನಂತರ ಕೆಲವೆ ಗಂಟೆಯಲ್ಲಿ ಅಮೀನಿ ಕೋಮಾದಲ್ಲಿ ಇದ್ದಳು. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು; ಆದರೆ ಆಕೆ ಸಾವನ್ನಪ್ಪಿದ್ದಳು. ಆಕೆಯ ಕುಟುಂಬದವರು, ಆಕೆಗೆ ಯಾವುದೇ ಕಾಯಿಲೆ ಇರಲಿಲ್ಲ ಎಂದು ಹೇಳಿದರು. ಆಕೆಯ ಸಾವು ಸಂದೇಹಾಸ್ಪದವಾಗಿದೆ. ಮಹಸಾಗೆ ಥಳಿಸಿಲ್ಲ ಎಂಬುದು ಪೊಲೀಸರ ಹೇಳಿಕೆ ಆಗಿದೆ.