ಕೋಲಕಾತಾ – ಬಂಗಾಳದಲ್ಲಿ ದುರ್ಗಾಪೂಜೆಯ ಸಿದ್ಧತೆಯು ಆರಂಭವಾಗಿದೆ. ನಗರದಲ್ಲಿ ನವರಾತ್ರೋತ್ಸವ ಮಂಡಳಿಗಳು ಪೂಜಾಮಂಟಪಗಳನ್ನು ಸಿದ್ಧಪಡಿಸುವುದನ್ನು ಆರಂಭಿಸಿವೆ. ಪ್ರತಿವರ್ಷ ಬೇರೆ ಬೇರೆ ವಿಷಯಗಳ ಮೇಲೆ ಪೂಜಾ ಮಂಟಪವನ್ನು ಅಲಂಕರಿಸುವ ‘ಶ್ರೀಭೂಮಿ ಸ್ಪೋರ್ಟಿಂಗ್ ಕ್ಲಬ್’ ಈ ವರ್ಷ ‘ವ್ಯಾಟಿಕನ್ ಸಿಟಿ’ಯ ಭೂಮಿಯಲ್ಲಿ ಮಂಟಪವನ್ನು ಅಲಂಕರಿಸಲಾಗುವುದು ಎಂದು ಘೋಷಿಸಿದೆ. ಕಳೆದ ವರ್ಷ ಅವರು ದುಬೈನ ‘ಬುರ್ಜ ಖಲಿಫಾ’ದ ಭೂಮಿಯಲ್ಲಿ ಭವ್ಯವಾದ ಮಂಟಪವನ್ನು ಅಲಂಕರಿಸಿತ್ತು. ಅದಕ್ಕೆ ಜನರಿಂದ ಉತ್ಸಾಹಭರಿತ ಪ್ರತಿಕ್ರಿಯೆ ಲಭಿಸಿತ್ತು. ‘ವ್ಯಾಟಿಕನ್ ಸಿಟಿ’ಯು ಇಟಲಿ ದೇಶದಲ್ಲಿನ ರೋಮನಲ್ಲಿರುವ ಒಂದು ಚಿಕ್ಕ ನಗರವಾಗಿದೆ. ಇದು ರೋಮನ ಕ್ಯಾಥುಲಿಕ್ ಚರ್ಚನ ಪ್ರಮುಖ ಕೇಂದ್ರವಾಗಿದೆ.
‘ಶ್ರೀಭೂಮಿ ಸ್ಪೋರ್ಟಿಂಗ ಕ್ಲಬ್’ ಆರಂಭವಾಗಿ ಈ ವರ್ಷ ೫೦ ವರ್ಷಗಳು ಪೂರ್ಣವಾಗುತ್ತಿವೆ. ಈ ನಿಮಿತ್ತವಾಗಿ ಅಲಂಕಾರಕ್ಕಾಗಿ ಅವರು ‘ವ್ಯಾಟಿಕನ್ ಸಿಟಿ’ಯ ವಿಷಯವನ್ನು ಆಯ್ಕೆ ಮಾಡಿದ್ದಾರೆ. ರಾಜ್ಯದ ಅಗ್ನಿಶಮನ ಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ಸಿನ ಶಾಸಕರಾದ ಸುಜಿತ ಬಸುರವರು ಶ್ರೀಭೂಮಿ ಸ್ಪೋರ್ಟಿಂಗ ಕ್ಲಬ್‌ನ ಪೂಜಾ ಸಮಿತಿಯ ಆಯೋಜಕರಲ್ಲಿ ಒಬ್ಬರಾಗಿದ್ದಾರೆ.
ಸಂಪಾದಕೀಯ ನಿಲುವು
|