ನವದೆಹಲಿ – ಇಲ್ಲಿಯವರೆಗೆ ಪತಂಜಲಿಯು ೫ ಲಕ್ಷಕ್ಕಿಂತ ಹೆಚ್ಚು ಯುವಕರಿಗೆ ಉದ್ಯೋಗದ ಅವಕಾಶವನ್ನು ನೀಡಿದೆ. ಆದರೂ ಪತಂಜಲಿಯ ವಿರುದ್ಧ ಷಡ್ಯಂತ್ರವನ್ನು ಹೂಡಲಾಗುತ್ತಿದೆ. ಸರಕಾರಿ ನಿಯಮಕ್ಕನುಸಾರ ಪತಂಜಲಿ ಕಂಪನಿಯು ವಿವಿಧ ಉತ್ಪಾದನೆಗಳನ್ನು ನಿರ್ಮಾಣ ಮಾಡುತ್ತದೆ. ಆದರೂ ಅನೇಕ ಕ್ಷೇತ್ರಗಳಲ್ಲಿನ ಮಾಫಿಯಾಗಳು ಪತಂಜಲಿಯನ್ನು ಮುಗಿಸಲು ಷಡ್ಯಂತ್ರವನ್ನು ಹೂಡುತ್ತಿದ್ದಾರೆ. ಮಾಫಿಯಾಗಳ ದೊಡ್ಡ ಷಡ್ಯಂತ್ರ ಕಾರ್ಯ ಮಾಡುತ್ತಿದೆ. ಇದರಲ್ಲಿ ವಿಶೇಷವಾಗಿ ಕೆಲವು ವಾರ್ತಾ ವಾಹಿನಿಗಳು ಪತಂಜಲಿಯ ಹೆಸರನ್ನು ಕೆಡಿಸಲು ಆಕಾಶ ಪಾತಾಳ ಒಂದು ಮಾಡುತ್ತಿದೆ ಎಂದು ಪತಂಜಲಿ ಸಮೂಹದ ಪ್ರಮುಖ ಯೋಗಋಷಿ ರಾಮ ದೇವ ಬಾಬಾ ಇವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು. ಪತಂಜಲಿ ಸಮೂಹದ ಪ್ರಯಾಣದ ಕುರಿತು ಅವರು ಮಾಹಿತಿಯನ್ನು ನೀಡುತ್ತಿದ್ದರು.
‘पतंजलीच्या कोणत्याही उत्पादनात भेसळ नाही.
परंतु, स्पर्धेक कंपन्यांकडून बदनामी करण्यासाठी
खोटा प्रचार केला जातोय, असा आरोप बाबा रामदेव यांनी केलाय
.
.
➡️https://t.co/xEnSlxfaRU
.
.#Patanjali #babaramdev pic.twitter.com/OPIlC76tFe— ABP माझा (@abpmajhatv) September 16, 2022
ಯೋಗೃಷಿ ರಾಮದೇವ ಬಾಬಾ ಇವರು ಮಂಡಿಸಿರುವ ವಿಷಯಗಳು
೧. ಪತಂಜಲಿಯ ಪ್ರಯೋಗಶಾಲೆಯಲ್ಲಿ ೫೦೦ ಕ್ಕಿಂತಲೂ ಹೆಚ್ಚು ಸಂಶೋಧಕರು ಕಾರ್ಯನಿರತರಾಗಿದ್ದಾರೆ. ಆದರೂ ವಿವಿಧ ದೋಷಗಳನ್ನು ಹುಡುಕಿ ನಮ್ಮ ಉತ್ಪಾದನೆಗಳ ಹೆಸರನ್ನು ಕೆಡಿಸಲಾಗುತ್ತಿದೆ; ಆದರೆ ಷಡ್ಯಂತ್ರ ಹೂಡುವವರ ಕೈಗೆ ಇದುವರೆಗೆ ಏನೂ ಸಿಕ್ಕಿಲ್ಲ; ಏಕೆಂದರೆ ನಾವು ಸರಕಾರದ ನಿಯಮಕ್ಕನುಸಾರ ಕಾರ್ಯ ಮಾಡುತ್ತಿದ್ದೇವೆ. ಸರಕಾರದ ಬಳಿ ಇರಲಾರದಷ್ಟು ಅತ್ಯಾಧುನಿಕ ಪ್ರಯೋಗಶಾಲೆಗಳು ಪತಂಜಲಿಯಲ್ಲಿದೆ.
೨. ಪತಂಜಲಿಯ ವಿರುದ್ಧ ಷಡ್ಯಂತ್ರ ಹೂಡುವವರಿಗೆ ಬಾಬಾ ರಾಮದೇವ ಇವರು ಭಯೋತ್ಪಾದಕ ಅಥವಾ ಆರೊಪಿಯಾಗಿದ್ದಾರೆ, ಎಂದು ಅನಿಸುತ್ತಿದೆ; ಆದರೆ ಇದು ಸರಿಯಲ್ಲ.
೩. ಪತಂಜಲಿ ಸಮೂಹವು ಮುಂದಿನ ೫ ವರ್ಷಗಳಲ್ಲಿ ೧ ಲಕ್ಷ ಕೋಟಿ ರೂಪಾಯಿಗಳ ವ್ಯವಹಾರವನ್ನು ಮಾಡುವ ಯೋಜನೆಯನ್ನು ಹಮ್ಮಿಕೊಂಡಿದೆ. ಹಾಗೂ ರಾಷ್ಟ್ರ ನಿರ್ಮಾಣಕ್ಕಾಗಿ ೫ ಲಕ್ಷ ಉದ್ಯೋಗಗಳನ್ನು ನಿರ್ಮಾಣ ಮಾಡುವ ಯೋಜನೆ ನಡೆಯುತ್ತಿದೆ.