ಮಥುರಾದಲ್ಲಿನ ಶ್ರೀ ಕೃಷ್ಣಜನ್ಮಭೂಮಿ ಪರಿಸರದಲ್ಲಿ ಇರುವ ಮೀನಾ ಮಸೀದಿ ತೆರವುಗೊಳಿಸಲು ನ್ಯಾಯಾಲಯದಲ್ಲಿ ಅರ್ಜಿ

ಮಥುರಾ – ಉತ್ತರಪ್ರದೇಶದಲ್ಲಿನ ಮಥುರಾದಲ್ಲಿ ಇರುವ ಶ್ರೀಕೃಷ್ಣ ಜನ್ಮಭೂಮಿ ಪರಿಸರದಲ್ಲಿರುವ ಮೀನಾ ಮಸೀದಿ ತೆರವುಗೊಳಿಸಲು ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದೆ. ಈ ಮಸೀದಿ ಮೊಗಲರ ಕಾಲದವೆಂದು ಹೇಳಲಾಗುತ್ತಿದೆ. ಠಾಕೂರ್ ಕೇಶವದೇವ ದೇವಸ್ಥಾನದ ಒಂದು ಭಾಗದಲ್ಲಿ ಈ ಮಸೀದಿ ಕಟ್ಟಲಾಗಿದೆ. ಅಖಿಲ ಭಾರತ ಹಿಂದೂ ಮಹಾಸಭೆಯ ರಾಷ್ಟ್ರೀಯ ಕೋಶಾಧ್ಯಕ್ಷ ದಿನೇಶ ಶರ್ಮಾ ಇವರು ಮಥೂರೆಯ ದೀವಾಣಿ ನ್ಯಾಯಾಧೀಶ (ವರಿಷ್ಠ ವಿಭಾಗ ) ಜ್ಯೋತಿ ಸಿಂಹ ಇವರ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದಾರೆ.

೧. ಅರ್ಜಿದಾರರ ನ್ಯಾಯವಾದಿ ದೀಪಕ ಶರ್ಮಾ ಇವರು, ನ್ಯಾಯಾಲಯ ಈ ಪ್ರಕರಣದಲ್ಲಿ ಅಕ್ಟೋಬರ್ ೨೬ ರಂದು ವಿಚಾರಣೆ ನಡೆಸಲಿದೆ. ಶ್ರೀಕೃಷ್ಣಜನ್ಮ ಭೂಮಿಗೆ ಸಂಬಂಧಿತ ಅನೇಕ ಅರ್ಜಿಗಳು ಈ ಮೊದಲೇ ಮಥುರಾದ ವಿವಿಧ ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ. ಈ ಮೊದಲಿನ ಅರ್ಜಿಯಲ್ಲಿ ಶಾಹಿ ಈದ್ಗಾ ಮಸೀದಿ ಭಗವಾನ ಶ್ರೀಕೃಷ್ಣನ ಜನ್ಮಸ್ಥಾನದಲ್ಲಿ ಕಟ್ಟಲಾಗಿರುವುದನ್ನು ತೆರವುಗೊಳಿಸಬೇಕೆಂದು ಓರ್ವ ಅರ್ಜಿದಾರರು ಒತ್ತಾಯಿಸಿದರು, ಎಂದು ಹೇಳಿದರು.

೨. ಠಾಕೂರ ಕೇಶವ ದೇವ ಮಹಾರಾಜ ಇವರ ಸಂಪತ್ತಿಯ ರಕ್ಷಣೆ ಮಾಡುವುದಕ್ಕಾಗಿ ಈ ಅರ್ಜಿ ದಾಖಲಿಸಲಾಗಿದೆ ಎಂದು ದಿನೇಶ ಶರ್ಮಾ ಇವರು ದಾವೆ ಮಾಡಿದ್ದಾರೆ. ಠಾಕೂರ ಕೇಶವದೇವ ಮಹಾರಾಜ ಇವರು ಮಥುರಾ ನಗರದಲ್ಲಿನ ೧೩.೩೭ ಎಕರೆ ಭೂಮಿಯ ಮಾಲಕರಾಗಿದ್ದಾರೆ, ಅವರ ಭೂಮಿಯ ಮೇಲೆ ಶ್ರೀಕೃಷ್ಣ ಜನ್ಮಭೂಮಿ ಇದೆ. ಇಂತಹ ಸ್ಥಿತಿಯಲ್ಲಿ ಈಗ ದೇವತೆಯ ಭೂಮಿಯ ಮೇಲೆ ಕಟ್ಟಲಾಗಿರುವ ಮೀನಾ ಮಸೀದಿ ತೆರವುಗೊಳಿಸಲು ಒತ್ತಾಯಿಸಲಾಗಿದೆ.

ಸಂಪಾದಕೀಯ ನಿಲುವು

ಈಗ ಕೇಂದ್ರ ಸರಕಾರ ಹಿಂದೂಗಳ ಧಾರ್ಮಿಕ ಸ್ಥಳಗಳ ಮೇಲೆ ಕಟ್ಟಲಾಗಿರುವ ಮಸೀದಿಯ ಸಮೀಕ್ಷೆ ನಡೆಸಿ ಸತ್ಯ ಬಹಿರಂಗಪಡಿಸಬೇಕು ಮತ್ತು ಹಿಂದೂಗಳಿಗೆ ಅವರ ಅಧಿಕಾರ ನೀಡಬೇಕು ಎಂದು ಸಾಮಾನ್ಯ ಹಿಂದೂಗಳ ಅಪೇಕ್ಷೆಯಾಗಿದೆ !