ಉಕ್ರೇನನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವವರಿಗೆ ಮತ್ತು ಭಾರತಕ್ಕೆ ಹಿಂತಿರುಗಿರುವ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಥೆಯಲ್ಲಿ ಪ್ರವೇಶವಿಲ್ಲ !

ಸರ್ವೋಚ್ಚ ನ್ಯಾಯಾಲಯದಲ್ಲಿ ಕೇಂದ್ರ ಸರಕಾರದಿಂದ ಪ್ರಮಾಣ ಪತ್ರ !

ನವದೆಹಲಿ – ಉಕ್ರೇನಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವವರು ಮತ್ತು ಭಾರತಕ್ಕೆ ಹಿಂತಿರುಗಿರುವ ವಿದ್ಯಾರ್ಥಿಗಳಿಗೆ ಭಾರತೀಯ ವಿದ್ಯಾಪೀಠ ಅಥವಾ ಸಂಸ್ಥೆಯಲ್ಲಿ ಸೇರಿಸಿಕೊಳ್ಳಲಾಗುವುದಿಲ್ಲ ಎಂಬ ಪ್ರಮಾಣಪತ್ರವನ್ನು ಕೇಂದ್ರ ಸರಕಾರ ಸೆಪ್ಟೆಂಬರ್ ೧೬ ರಂದು ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಿದೆ. ಫೆಬ್ರುವರಿ ತಿಂಗಳಿನಲ್ಲಿ ರಷ್ಯಾ ಉಕ್ರೇನಿನ ಮೇಲೆ ದಾಳಿ ನಡೆದ ನಂತರ ಯುದ್ಧಜನ್ಯ ಪರಿಸ್ಥಿತಿಯಿಂದಾಗಿ ಸುಮಾರು ೨೦ ಸಾವಿರ ಭಾರತೀಯ ವಿದ್ಯಾರ್ಥಿಗಳು ಅವರ ಶಿಕ್ಷಣ ಬಿಟ್ಟು ಮಾತೃಭೂಮಿಗೆ ಹಿಂತಿರುಗಬೇಕಾಯಿತು.

೧. ರಾಷ್ಟ್ರೀಯ ವೈದ್ಯಕೀಯ ಆಯೋಗದ ಕಾನೂನಿನಲ್ಲಿ ಈ ರೀತಿ ಯಾವುದೇ ಅವಕಾಶ ಇಲ್ಲ ಎಂದು ಕೇಂದ್ರ ಸರಕಾರ ಪ್ರಮಾಣಪತ್ರದಲ್ಲಿ ನಮೂದಿಸಿದ್ದು ಈ ಎಲ್ಲಾ ವಿದ್ಯಾರ್ಥಿಗಳಿಗೆ ‘ನಿಟ್’ ಪರೀಕ್ಷೆಯಲ್ಲಿ (ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರವೇಶ ಪಡೆಯುವುದಕ್ಕಾಗಿ ಇರುವ ಪರೀಕ್ಷೆ) ಕಡಿಮೆ ಅಂಕಗಳು ಪಡೆದಿರುವ ಅಥವಾ ಭಾರತದಲ್ಲಿ ಶುಲ್ಕ ಭರಿಸಲು ಸಾಧ್ಯ ಇಲ್ಲದೇ ವಿದೇಶದಲ್ಲಿ ಶಿಕ್ಷಣಕ್ಕಾಗಿ (ವಿದ್ಯಾಭ್ಯಾಸಕ್ಕಾಗಿ) ಹೋಗಿದ್ದರು. ಆದ್ದರಿಂದ ಅವರಿಗೆ ರಿಯಾಯತಿ ನೀಡಿದರೆ ದೇಶದಲ್ಲಿನ ವೈದ್ಯಕೀಯ ಶಿಕ್ಷಣದ ಮಾನದಂಡದ ಅಧೋಗತಿ ಆಗುವುದು. ಅದೇ ರೀತಿ ಈ ವಿದ್ಯಾರ್ಥಿಗಳು ಶುಲ್ಕ ಕೂಡ ಭರಿಸಲಾಗುವುದಿಲ್ಲ, ಎಂಬ ಶಬ್ದಗಳಲ್ಲಿ ಕೇಂದ್ರ ಸರಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

೨. ಹೀಗಿದ್ದರೂ ಈ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಪೂರ್ಣ ಪಡೆಯುವುದಕ್ಕಾಗಿ ರಷಿಯನ ವಿದ್ಯಾಪೀಠಗಳು ರತ್ನ ಕಂಬಳಿ ಹಾಸಿದೆ. ನವದೆಹಲಿಯ ರಷಿಯನ್ ಶೈಕ್ಷಣಿಕ ಮೇಳದ ಸಮಯದಲ್ಲಿ ಅದಕ್ಕಾಗಿ ವಿಶೇಷ ‘ಹೆಲ್ಪ್ ಡೆಸ್ಕ್’ ಇರಿಸಲಾಗಿತ್ತು. ಭಾರತೀಯ ವಿದ್ಯಾರ್ಥಿಗಳ ‘ಟ್ಯೂಷನ್ ಫೀಸ್’ ಮತ್ತು ವಸತಿಗೃಹದಲ್ಲಿ ವಾಸಿಸುವುದಕ್ಕೆ ವಿಶೇಷ ಸವಲತ್ತು ನೀಡಲಾಗುತ್ತಿದೆ.