ಲವಂಗಾ(ಸಾಂಗ್ಲಿ ಜಿಲ್ಲೆ)ದ ಗ್ರಾಮಸ್ಥರಿಂದ ಕಳ್ಳರೆಂದು ತಿಳಿದು ಸಾಧುಗಳ ಕ್ರೂರ ರೀತಿಯಲ್ಲಿ ಥಳಿತ : ಪೊಲೀಸರ ಹಸ್ತಕ್ಷೇಪದಿಂದ ತಪ್ಪಿದ ಅನಾಹುತ !

ಜತ (ಸಾಂಗ್ಲಿ ಜಿಲ್ಲೆ) – ಸಾಂಗ್ಲಿ ಜಿಲ್ಲೆಯಲ್ಲಿನ ಲವಂಗಾ ಎಂಬ ಊರಿನಲ್ಲಿ ಉತ್ತರಪ್ರದೇಶದ ೪ ಸಾಧುಗಳನ್ನು ‘ಮಕ್ಕಳನ್ನು ಅಪಹರಿಸುವ ಕಳ್ಳರ ಗುಂಪು’ ಎಂದು ತಿಳಿದು ಥಳಿಸಲಾಯಿತು. ಈ ಪ್ರಕರಣವು ಸಪ್ಟೆಂಬರ್‌ ೧೩ರಂದು ಘಟಿಸಿತು. ಉಮದಿಯ ಪೊಲೀಸರು ಹಸ್ತಕ್ಷೇಪ ಮಾಡಿದ್ದರಿಂದ ಈ ಸಾಧುಗಳನ್ನು ಬಿಡಲಾಯಿತು; ಇಲ್ಲದಿದ್ದರೆ ಇಲ್ಲಿ ಪಾಲಘರದಂತಹ ಘಟನೆಗಳು ನಡೆಯುತ್ತಿದ್ದವು. ೨೦೨೦ರಲ್ಲಿ ಪಾಲಘರ ಜಿಲ್ಲೆಯಲ್ಲಿ ೨ ಸಾಧುಗಳನ್ನು ಕಳ್ಳರೆಂದು ತಿಳಿದು ಒಂದು ಗುಂಪು ಅತ್ಯಂತ ಕ್ರೂರವಾಗಿ ಥಳಿಸಿ ಅವರ ಹತ್ಯೆ ಮಾಡಿತ್ತು. (ಗ್ರಾಮಸ್ಥರಿಗೆ ಸಾಧುಗಳು ಕಳ್ಳರಿದ್ದಾರೆ ಎಂಬ ಸಂದೇಹವಿದ್ದಲ್ಲಿಅವರು ಸಾಧುಗಳನ್ನು ಹಿಡಿದು ಪೊಲೀಸರಿಗೆ ಏಕೆ ಒಪ್ಪಿಸಲಿಲ್ಲ ? ಕಾನೂನನ್ನು ಏಕೆ ಕೈಗೆತ್ತಿಕೊಳ್ಳುವ ಅಧಿಕಾರವನ್ನು ಅವರಿಗೆ ಯಾರು ನೀಡಿದರು ? ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದ ಇಂದು ಭಾರತದಲ್ಲಿ ನಿಜವಾದ ಸಾಧು-ಸಂತರು ಯಾರು ಎಂಬುದು ತಿಳಿಯದಂತಾಗಿದೆ. ಇದರಿಂದಾಗಿ ಪಾಲಘರ, ಜತ ಗಳಂತಹ ಘಟನೆಗಳು ನಡೆಯುತ್ತಿವೆ ! – ಸಂಪಾದಕರು ) ಸಾಂಗ್ಲಿಯ ಪೊಲೀಸ ಅಧೀಕ್ಷಕರಾದ ದೀಕ್ಷಿತಕುಮಾರ ಗೆಡಾಮರವರು ‘ಈ ಪ್ರಕರಣದಲ್ಲಿ ೬ ಜನರ ಮೇಲೆ ಅಪರಾಧವನ್ನು ದಾಖಲಿಸಲಾಗಿದೆ, ಎಂಬ ಮಾಹಿತಿಯನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿನ ಹೆಚ್ಚಿನ ಮಾಹಿತಿಯು ಹೀಗಿದೆ

೧. ಉತ್ತರಪ್ರದೇಶದಲ್ಲಿನ ವಾರಾಣಸಿಯಿಂದ ೪ ಜನ ಸಾಧುಗಳು ಕರ್ನಾಟಕಕ್ಕೆ ದೇವರ ದರ್ಶನಕ್ಕಾಗಿ ಹೋಗಿದ್ದರು. ಕರ್ನಾಟಕದಲ್ಲಿನ ದೇವರ ದರ್ಶನವನ್ನು ಮುಗಿಸಿ ಅವರು ಲವಂಗಾದ ಮಾರ್ಗದಿಂದ ವಿಜಾಪೂರಕ್ಕೆ ಹೋಗುತ್ತಿದ್ದರು. ಅವರು ರಸ್ತೆಯಲ್ಲಿ ಗಾಡಿ ನಿಲ್ಲಿಸಿ ‘ವಿಜಾಪೂರಕ್ಕೆ ಹೋಗುವ ರಸ್ತೆ ಯಾವುದು ?’ ಎಂದು ಓರ್ವ ವಿದ್ಯಾರ್ಥಿನಿಯಲ್ಲಿ ವಿಚಾರಿಸುತ್ತಿದ್ದರು.
೨. ಆಗ ಅಲ್ಲಿ ಕೆಲವು ಸ್ಥಳೀಯ ನಾಗರೀಕರು ಬಂದರು. ಅವರಿಗೆ ಸಾಧುಗಳ ಭಾಷೆ ತಿಳಿಯಲಿಲ್ಲ. ಇದರಿಂದಾಗಿ ಗ್ರಾಮಸ್ಥರ ಸಂದೇಹ ಬಲವಾಯಿತು ಮತ್ತು ಅವರು ಆ ಸಾಧುಗಳನ್ನು ಗಾಡಿಯಿಂದ ಎಳೆದು ಬೆಲ್ಟ(ಸೊಂಟ ಪಟ್ಟಿ) ಹಾಗೂ ಕೋಲಿನಿಂದ ಥಳಿಸಿದರು. ಆಗ ಸಾಧುಗಳು ಆಗಾಗ ‘ನಾವು ಸಾಧುಗಳು’ ಎಂದು ಹೇಳುವ ಪ್ರಯತ್ನ ಮಾಡಿದರೂ ಗ್ರಾಮಸ್ಥರು ಅವರ ಮಾತನ್ನು ಕೇಳಲಿಲ್ಲ.
೩. ಈ ಘಟನೆಯ ಮಾಹಿತಿ ದೊರೆಯುತ್ತಲೇ ಉಮದಿಯ ಪೊಲೀಸರು ಘಟನಾಸ್ಥಳವನ್ನು ತಲುಪಿದರು. ಪೊಲೀಸರು ಈ ಸಾಧುಗಳ ಸಂದರ್ಭದಲ್ಲಿ ಹೆಚ್ಚಿನ ತನಿಖೆ ನಡೆಸಿದಾಗ ಅವರ ಬಳಿ ಉತ್ತರಪ್ರದೇಶದಲ್ಲಿನ ಆಧಾರಕಾರ್ಡ ಇರುವುದು ಕಂಡುಬಂದಿದೆ. ಪೊಲೀಸರು ಅವರ ಸಂಬಂಧಿಗಳಿಗೆ ದೂರವಾಣಿ ಮಾಡಿ ಮಾಹಿತಿ ಪಡೆದಾಗ, ಅವರು ಮಥುರಾದ ಶ್ರೀ ಪಂಚದಶನಾಮ ಜುನಾ ಆಖಾಡಾದ ಸಾಧುಗಳಾಗಿರುವುದು ತಿಳಿಯಿತು.
೪. ಈ ಎಲ್ಲ ಘಟನೆಯ ನಂತರ ಸಾಧುಗಳು ಈ ಗ್ರಾಮಸ್ಥರನ್ನು ಕ್ಷಮಿಸಿ ತಪ್ಪುತಿಳುವಳಿಕೆಯಿಂದ ಹೀಗೆ ನಡೆದಿದೆ ಎಂದು ಹೇಳಿದರು. ಆದುದರಿಂದ ಈ ಪ್ರಕರಣದಲ್ಲಿ ಪೊಲೀಸರಲ್ಲಿ ಯಾವುದೇ ದೂರನ್ನು ದಾಖಲಿಸಲಾಗಿಲ್ಲ.

ಈ ಸಂದರ್ಭದಲ್ಲಿ ‘ಎನ್‌.ಆಯ್‌.ಎ.’ ಎಂಬ ವಾರ್ತಾಸಂಸ್ಥೆಯು ಸಾಂಗ್ಲಿಯ ಜಿಲ್ಲಾ ಪೊಲೀಸ ಅಧೀಕ್ಷಕರಾದ ದೀಕ್ಷಿತ ಗೆಡಾಮರವರನ್ನು ವಿಚಾರಿಸಿದಾಗ, ‘ಈ ಸಂದರ್ಭದಲ್ಲಿ ನಮ್ಮ ಬಳಿ ಯಾವುದೇ ಲಿಖಿತ ದೂರು ಇಲ್ಲ. ಆದರೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರಿತವಾದ ‘ವಿಡಿಯೋ’ ಹಾಗೂ ಛಾಯಾಚಿತ್ರಗಳನ್ನು ನೋಡಿ ನಾವು ವಸ್ತುಸ್ಥಿತಿಯನ್ನು ತಿಳಿದುಕೊಳ್ಳುತ್ತಿದ್ದೇವೆ. ಈ ಸಂದರ್ಭದಲ್ಲಿ ಯೋಗ್ಯ ಕಾರ್ಯಾಚರಣೆಯನ್ನು ಮಾಡಲಾಗುವುದು’, ಎಂದು ಹೇಳಿದರು.

 

ಸಂಪಾದಕೀಯ ನಿಲುವು

  • ಹಿಂದೂಗಳು ಬಹುಸಂಖ್ಯಾತರಾಗಿರುವ ದೇಶದಲ್ಲಿ ಸಾಧು-ಸಂತರನ್ನು ಥಳಿಸುವ ಘಟನೆಗಳು ಆಗಾಗ ಮರುಕಳಿಸುವುದು, ಆಕ್ರೋಶಕಾರಿಯಾಗಿದೆ !
  • ಸರಕಾರವು ‘ಇದರ ಹಿಂದೆ ಹಿಂದೂ ಸಾಧುಗಳ ಹತ್ಯೆ ಮಾಡುವವರ ಷಡ್ಯಂತ್ರವಿಲ್ಲ ಅಲ್ಲವೇ ? ಎಂಬುದರ ಆಳವಾದ ತನಿಖೆ ನಡೆಸಿ ಸತ್ಯವನ್ನು ಎದುರಿಗೆ ತರುವುದು ಆವಶ್ಯಕವಾಗಿದೆ !