ಮಕ್ಕಾದ ಮಸೀದಿಯಲ್ಲಿ ಬ್ರಿಟನ್ನಿನ ಮಹಾರಾಣಿಗಾಗಿ ಪ್ರಾರ್ಥನೆ ಮಾಡಿದ ಮುಸಲ್ಮಾನನ ಬಂಧನ

ರಿಯಾಧ (ಸೌದಿ ಅರೇಬಿಯಾ) – ಯೇಮನ್ ದೇಶದಲ್ಲಿನ ಒಬ್ಬ ನಾಗರೀಕನನ್ನು ಸೌದಿ ಅರೇಬಿಯಾದಲ್ಲಿ ಬಂಧಿಸಲಾಗಿದೆ. ಇವನು ಮಕ್ಕಾದ ಗ್ರಾಂಡ್ ಮಸೀದಿಯಲ್ಲಿ ಕೈಯಲ್ಲಿ ಒಂದು ಫಲಕ ಹಿಡಿದಿದ್ದನು. ಆ ಫಲಕದ ಮೇಲೆ ‘ಮಹಾರಾಣಿ ಎಲಿಜಬೆತ್ ದ್ವಿತೀಯ ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ, ದೇವರು ಆಕೆಯನ್ನು ಸ್ವರ್ಗಕ್ಕೆ ಕೊಂಡೊಯ್ಯಲಿ’, ಎಂದು ಬರೆದಿದ್ದನು. ಆದ್ದರಿಂದ ಅವನನ್ನು ಬಂಧಿಸಲಾಗಿದೆ. ಮಕ್ಕಾದ ಯಾತ್ರೆ ಮಾಡುವವರಿಗೆ ಅಲ್ಲಿ ಫಲಕ ತೆಗೆದುಕೊಂಡು ಹೋಗಲು ಹಾಗೂ ಯಾವುದೇ ರೀತಿಯ ಘೋಷಣೆ ನೀಡುವುದು ನಿಷೇಧಿಸಿದ್ದಾರೆ.

ಅದೇ ರೀತಿ ಮೃತಪಟ್ಟ ಮುಸಲ್ಮಾನರಿಗಾಗಿ ಪ್ರಾರ್ಥನೆ ಮಾಡಲು ಅನುಮತಿ ಇದೆ; ಮುಸಲ್ಮಾನರೇತರಿಗೆ ಇಲ್ಲ. (ಮುಸಲ್ಮಾನರ ಧಾರ್ಮಿಕ ಸ್ಥಳದ ಜಾಗದಲ್ಲಿ ಕಠಿಣ ನಿಯಮಗಳ ಪಾಲನೆ ಮಾಡಬೇಕಾಗುತ್ತದೆ ಮತ್ತು ಅದರ ಉಲ್ಲಂಘನೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಹಿಂದೂಗಳ ಮಾತ್ರ ತಮ್ಮ ಧಾರ್ಮಿಕ ಸ್ಥಳದ ಪಾವಿತ್ರ್ಯ ಕಾಪಾಡುವುದಕ್ಕೆ ಕೆಲವು ನಿಯಮ ಮಾಡಿದರೆ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ’, ಎಂದು ಬೊಬ್ಬೆ ಹೊಡೆಯುತ್ತಾ ಜಾತ್ಯತೀತರು ಟೀಕಿಸುತ್ತಾರೆ. ಇಂತಹವರು ಮಕ್ಕಾದಲ್ಲಿನ ಘಟನೆಯ ಬಗ್ಗೆ ಮಾತನಾಡಲಿ ! – ಸಂಪಾದಕರು)