ಹಿಂದಿ ಚಿತ್ರರಂಗದ ಸ್ಥಿತಿ ಚಿಂತಾಜನಕ ! – ಚಲನಚಿತ್ರ ನಿರ್ದೇಶಕ ಪ್ರಕಾಶ ಝಾ

ಮುಂಬಯಿ – ಹಿಂದಿ ಚಿತ್ರರಂಗದ ಕಲಾವಿದರು ಈಗ ಗುಟ್ಕಾ ಮಾರುತಿದ್ದಾರೆ. ಅವರಿಗೆ ಬಿಡುವಿನ ಸಮಯ ಸಿಗುತ್ತಿದ್ದಂತೇ ಅವರು ಕೆಲವು ಹಾಸ್ಯ ಮತ್ತು ಅನ್ಯ ವಿಷಯಗಳ ಮೇಲೆ ಚಲನಚಿತ್ರ ನಿರ್ಮಿಸುತ್ತಾರೆ. ೫ – ೬ ಚಲನಚಿತ್ರಗಳು ವಿಫಲವಾದರೂ ಅವರಿಗೆ ಯಾವುದೆ ವ್ಯತ್ಯಾಸ ಆಗುವುದಿಲ್ಲ. ಇದು ನಿಜವಾಗಲೂ ಚಿಂತಾಜನಕ ಸ್ಥಿತಿ ಆಗಿದೆ. ಚಿತ್ರರಂಗದಲ್ಲಿ ಸ್ವಂತದ ಬಗ್ಗೆ ಚಿಂತನೆ ನಡೆಸುವುದು ಅವಶ್ಯಕವಾಗಿದೆ. ಅವರನ್ನು ಯಾರು ಬೆಳೆಸಿದ್ದಾರೆ ಅವರೇ ಅವರನ್ನು ತುಳಿಯುವರು, ಎಂದು ಚಲನಚಿತ್ರ ನಿರ್ದೇಶಕ ಪ್ರಕಾಶ ಝಾ ಕಪಾಳಮೋಕ್ಷ ಮಾಡಿದ್ದಾರೆ.

ಪ್ರಕಾಶ ಝಾ ತಮ್ಮ ಮಾತನ್ನು ಮುಂದುವರೆಸುತ್ತಾ, “ತಮಾಷೆ ಎಂದರೆ ದೊಡ್ಡ ಕಲಾವಿದರಿಂದ ಯಾವುದೇ ಚಲನಚಿತ್ರ ಯಶಸ್ಸು ಗಳಿಸುತ್ತದೆ ಎಂದು ಚಲನಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಅನಿಸುತ್ತದೆ; ಆದರೆ ವೀಕ್ಷಕರಿಗೆ ಒಳ್ಳೆಯ ಕಥೆ ಮತ್ತು ಜ್ವಲಂತ ಸಮಸ್ಯೆಗಳ ಹೇಳುವ ಕಥೆ ವೀಕ್ಷಿಸಲು ಹೀಡಿಸುತ್ತದೆ. ಕಳೆದ ೬ ತಿಂಗಳಿಂದ ಯಾವ ರೀತಿ ಚಲನಚಿತ್ರಗಳು ಬರುತ್ತಿದೆ ಮತ್ತು ವೀಕ್ಷಕರು ಅದನ್ನು ಬಹಿಷ್ಕರಿಸುತ್ತಿದ್ದಾರೆ, ಇದರಿಂದ ಇದೆ ತಿಳಿಯುತ್ತದೆ. ವಾಸ್ತವದಲ್ಲಿ ಒಳ್ಳೆಯ ಚಲನಚಿತ್ರಗಳ ಜವಾಬ್ದಾರಿ ಚಲನಚಿತ್ರ ನಿರ್ಮಾಪಕರು, ಲೇಖಕರು ಮತ್ತು ಯಾವ ಮಾಧ್ಯಮಗಳಲ್ಲಿ ಜನರು ಚಲನಚಿತ್ರ ನೋಡುತ್ತಾರೆ. ಅದರ ಮೇಲೆ ಅವಲಂಬಿಸಿದೆ. ಪ್ರಸ್ತುತ ಈ ಚಿತ್ರರಂಗ ಭೂಮಿಯ ಮೇಲೆ, ಆಕಾಶದಲ್ಲಿ ಅಥವಾ ಮಧ್ಯದಲ್ಲಿ ತ್ರಿಶಂಕು ಸ್ಥಿತಿಯಲ್ಲಿ ಇದೆ ಎಂದು ಅನಿಸುತ್ತದೆ.