ಕೊಲಕಾತಾ – ಬಂಗಾಲದಲ್ಲಿನ ಸಿತಲಕೂಚಿಯಲ್ಲಿ ಸೆಪ್ಟೆಂಬರ್ ೧೧ ರಂದು ಭಾಜಪದ ನಿಷೇಧ ಆಂದೋಲನದ ಮೇಲೆ ನಾಡ ಬಾಂಬ್ ಎಸೆಯಲಾಗಿತ್ತು. ಆದ್ದರಿಂದ ಆಂದೋಲನದ ಸ್ಥಳದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಆ ಸಮಯದಲ್ಲಿ ನಡೆದಿರುವ ಸ್ಫೋಟದಲ್ಲಿ ಭಾಜಪದ ಇಬ್ಬರು ಕಾರ್ಯಕರ್ತರು ಗಾಯಗೊಂಡರು. ಈ ಆಂದೋಲನ ತೃಣಮೂಲ ಕಾಂಗ್ರೆಸ್ಸಿನ ನಾಯಕರ ವಿವಿಧ ಹಗರಣಗಳ ವಿರುದ್ಧ ನಡೆಸಲಾಗಿತ್ತು ಎಂದು ಭಾಜಪಾದ ಜಿಲ್ಲಾ ಅಧ್ಯಕ್ಷ ಸುಕುಮಾರ ರಾಯ್ ಇವರು ಹೇಳಿದರು. ‘ಈ ಆಂದೋಲನದ ಮೇಲೆ ಕೇವಲ ನಾಡ ಬಾಂಬ್ ಎಸೆಯುದು ಅಷ್ಟೇ ಅಲ್ಲದೆ ಕಲ್ಲುತೂರಾಟ ಕೂಡ ನಡೆಸಲಾಯಿತು’, ಎಂದು ರಾಯ್ ಹೇಳಿದರು. ಈ ದಾಳಿ ತೃಣಮೂಲ ಕಾಂಗ್ರೆಸ್ಸಿನ ಕಾರ್ಯಕರ್ತರು ನಡೆಸಿದ್ದಾರೆಂದು ಭಾಜಪ ಆರೋಪಿಸಿದೆ, ಆದರೆ ತೃಣಮೂಲ ಕಾಂಗ್ರೆಸ್ ಈ ಆರೋಪ ತಳ್ಳಿ ಹಾಕಿದೆ.
West Bengal: Bombs hurled, stones pelted at BJP rally against TMC government, cops remain mute spectators. Here is what we know so far https://t.co/NvmKEExdAe
— OpIndia.com (@OpIndia_com) September 12, 2022
ಬಂಗಾಲದಲ್ಲಿ ಕೆಲವು ದಿನಗಳಿಂದ ‘ಈಡಿ’ಯು ಅನೇಕ ಜನರ ನಿವಾಸ ಸ್ಥಳಗಳ ಮೇಲೆ ನಡೆಸಿರುವ ದಾಳಿಯಲ್ಲಿ ದೊಡ್ಡ ಪ್ರಮಾಣದಲ್ಲಿ ನಗದು ಹಣ ಮತ್ತು ಬೇನಾಮಿ ಆಸ್ತಿ ವಶಪಡಿಸಿಕೊಳ್ಳಲಾಗಿದೆ. ಈ ದಾಳಿಯಲ್ಲಿ ಅನೇಕ ಪ್ರಸಿದ್ಧ ಉದ್ಯಮಿಗಳ ಸಹಿತ ನಟ ಅಮೀರ ಖಾನ್ ಇವನ ಹೆಸರು ಕೂಡ ಇದೆ. ಜೊತೆಗೆ ಶಿಕ್ಷಕರ ನೇಮಕ ಹಗರಣ, ಗೋವುಗಳ ಕಳ್ಳ ಸಾಗಾಣಿಕೆ, ಕಲ್ಲಿದ್ದಲು ಕಳ್ಳ ಸಾಗಾಣಿಕೆ ಇದರಲ್ಲಿ ರಾಜ್ಯದ ಅನೇಕ ದಿಗ್ಗಜ ರಾಜಕೀಯ ವ್ಯಕ್ತಿಗಳ ಸಮಾವೇಶ ಇದೆ. (ಈ ರೀತಿ ಕಾನೂನುಬಾಹಿರ ವ್ಯವಸಾಯದಲ್ಲಿ ನಿರತರಾಗಿರುವ ಭ್ರಷ್ಟ ವ್ಯಕ್ತಿಗಳ ವಿರುದ್ಧ ಕೇಂದ್ರ ಸರಕಾರದಿಂದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರ ಭಕ್ತ ನಾಗರಿಕರ ಅಪೇಕ್ಷೆಯಾಗಿದೆ ! – ಸಂಪಾದಕರು)
ಸಂಪಾದಕೀಯ ನಿಲುವುತೃಣಮೂಲ ಕಾಂಗ್ರೆಸ್ಸಿನ ರಾಜ್ಯದಲ್ಲಿ ಬಂಗಾಲ ‘ಬಾಂಬ್ ತಯಾರಿಸುವ ಕಾರ್ಖಾನೆ’ ಆಗಿದೆ. ಇಲ್ಲಿಯ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಆದ್ದರಿಂದ ಇಲ್ಲಿ ರಾಷ್ಟ್ರಪತಿ ಶಾಸನ ಜಾರಿ ಮಾಡುವುದು ಅನಿವಾರ್ಯ ! |