
ನವದೆಹಲಿ – ಅಪರಾಧಿ ಪ್ರಕರಣಗಳ ಮೊಕದ್ದಮೆ ಇರುವ ಜನಪ್ರತಿನಿಧಿಗಳಿಗೆ ಸಿಗುವ ವೇತನವನ್ನು ನಿಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಿದ ಮನವಿಯನ್ನು ತಳ್ಳಿಹಾಕಲಾಯಿತು. ಸಂಸದರು ಮತ್ತು ಶಾಸಕರ ವೇತತನವನ್ನು ತಡೆಹಿಡಿಯಬೇಕೆಂದು ಈ ಮನವಿಯನ್ನು ದಾಖಲಿಸಲಾಗಿತ್ತು. ‘ಇಂತವರಿಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯಲು ಸಾಧ್ಯವಿಲ್ಲದಿದ್ದರೆ, ಕಡಿಮೆ ಪಕ್ಷ ವೇತನವನ್ನು ತೆಗೆದುಕೊಳ್ಳಲು ಅನುಮತಿ ನೀಡಬಾರದು’, ಎಂದು ಈ ಮನವಿಯಲ್ಲಿ ಹೇಳಲಾಗಿತ್ತು.
गुन्हेगारी पार्श्वभूमी असलेल्या खासदार-आमदारांचा पगार रोखण्याबाबत एक याचिका दाखल करण्यात आली होती. यावर सुप्रीम कोर्टानं महत्वाचा निकाल दिलाय… #SupremeCourt https://t.co/Ug5mn48hRe
— ABP माझा (@abpmajhatv) September 12, 2022
ನ್ಯಾಯಾಲಯವು, ಕಾನೂನನ್ನು ಮಾಡುವುದು ನ್ಯಾಯಾಲಯದ ಕೆಲಸವಲ್ಲ. ಶಾಸಕರು ಮತ್ತು ಸಂಸದರ ವೇತನ ಅಥವಾ ಇತರ ಸೌಲಭ್ಯಗಳನ್ನು ನೀಡುವ ನಿರ್ಣಯವನ್ನು ಸರಕಾರ ತೆಗೆದುಕೊಳ್ಳುತ್ತದೆ. ಸಭಾಗೃಹದಿಂದ ಹೋದನಂತರ ಈ ವಿಷಯವನ್ನು ನಿರ್ಣಯಿಸುವ ಅಧಿಕಾರವೂ ಈ ಸದಸ್ಯರ ಕೈಯಲ್ಲಿಯೆ ಇರುತ್ತದೆ. ವೇತನ ಮತ್ತು ನಿವೃತ್ತಿಗೆ ಸಂಬಂಧಿಸಿದ ವ್ಯವಸ್ಥೆಯನ್ನು ಹೆಚ್ಚು ಕಡಿಮೆ ಮಾಡುವ ಅಧಿಕಾರವೂ ಸಂಸದರು ಮತ್ತು ಶಾಸಕರ ಕೈಯಲ್ಲಿದೆ. ಅವರು ತಮ್ಮ ಹಿತವನ್ನು ಅಪಾಯಕ್ಕೀಡು ಮಾಡಿ ನಿವೃತ್ತಿವೇತನ ಅಥವಾ ವೇತನವನ್ನು ತೆಗೆದುಕೊಳ್ಳಲು ನಿರಾಕರಿಸಿರುವುದು ಎಲ್ಲಿಯೂ ಕಾಣಿಸಿಲ್ಲ. ಅಬ್ಜಾವಧಿಯ ಸಂಪತ್ತು ಇರುವ ಕೆಲವು ಸದಸ್ಯರೂ ವೇತನ ಮತ್ತು ನಿವೃತ್ತಿವೇತನವನ್ನು ಬಿಡುವುದಿಲ್ಲ. ಇನ್ನೊಂದೆಡೆ ಕೆಲವು ಸದಸ್ಯರು ಮಾತ್ರ ವೇತನವನ್ನು ನಿರಾಕರಿಸಿದ ವಾರ್ತೆ ಬೆಳಕಿಗೆ ಬಂದಿತ್ತು ಎಂದು ಹೇಳಿದೆ.
ಕೊಲೆ ಪ್ರಕರಣವನ್ನು ವಿರೋಧಿಸಿದವರ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ!
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC