ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತೀ ಇವರ ಪಾರ್ಥಿವಕ್ಕೆ ಭೂ ಸಮಾಧಿ !

ಭೋಪಾಳ (ಮಧ್ಯಪ್ರದೇಶ) – ದ್ವಾರಕಾ ಮತ್ತು ಜ್ಯೋತಿಷ ಪೀಠಗಳ ಜಗದ್ಗುರು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಇವರಿಗೆ ಮಧ್ಯಪ್ರದೇಶದ ನರಸಿಂಹಪುರದಲ್ಲಿನ ಪರಮಹಂಸಿ ಗಂಗಾ ಆಶ್ರಮದಲ್ಲಿ ಭೂ ಸಮಾಧಿ ಮಾಡಲಾಯಿತು. ಸಪ್ಟೆಂಬರ ೧೧ ರಂದು ಅವರು ತಮ್ಮ ೯೯ ನೆ ವಯಸ್ಸಿನಲ್ಲಿ ನರಸಿಂಹಪುರದ ಝೋತೇಶ್ವರ ಆಶ್ರಮದಲ್ಲಿ ದೇಹತ್ಯಾಗ ಮಾಡಿದ್ದರು.

ಭೂ ಸಮಾಧಿಯ ವಿಧಿ ಝೋತೇಶ್ವರದ ಶಾಸ್ತ್ರಿ ರವಿಶಂಕರ ಮಹಾರಾಜ ಮತ್ತು ಕಾಶಿಯಿಂದ ಬಂದಿದ್ದ ವಿದ್ವಾಂಸರು ಮಾಡಿದರು. ಅದಕ್ಕೂ ಮೊದಲು ಶಂಕರಾಚಾರ್ಯರ ಪಾರ್ಥಿವಕ್ಕೆ ಎಲ್ಲ ತೀರ್ಥಗಳಿಂದ ತಂದಿರುವ ನೀರಿನಿಂದ ಸ್ನಾನ ಮಾಡಿಸಿ ಅಂತ್ಯದರ್ಶನಕ್ಕಾಗಿ ಇಡಲಾಗಿತ್ತು.