ಮುಸಲ್ಮಾನ ಪತಿಯು ಬಲವಂತದಿಂದ ಮತಾಂತರಿಸಿದನೆಂದು ಕ್ರೈಸ್ತ ಪತ್ನಿಯಿಂದ ಆರೋಪ

ಲವ್ ಜಿಹಾದ್ ಗೆ ಬಲಿಯಾದ ಕ್ರೈಸ್ತ ಮಹಿಳೆಯ ಇನ್ನೊಂದು ಉದಾಹರಣೆ!

ಎರ್ನಾಕುಲಮ್ (ಕೇರಳ) – ಇಲ್ಲಿನ ಒಬ್ಬ ಕ್ರೈಸ್ತ ಮಹಿಳೆಯು ತನ್ನ ಮುಸಲ್ಮಾನ ಪತಿಯು ಮತಾಂತರವಾಗಲು ಒತ್ತಡ ಹೇರುತ್ತಿದ್ದಾನೆಂದು ಆರೋಪಿಸಿದ್ದಾಳೆ. ಮುಸಲ್ಮಾನ ವ್ಯಕಿಯೊಂದಿಗೆ ವಿವಾಹವಾಗಲು ನನ್ನನ್ನು ಕೆಲವು ದಿನಗಳ ಕಾಲ ಒಂದು ಕೊಠಡಿಯಲ್ಲಿ ಕೂಡಿಹಾಕಲಾಗಿತ್ತು. ಹಾಗಾಗಿ ನನಗೆ ಅವನೊಂದಿಗೆ ವಿವಾಹವಾಗಬೇಕಾಯಿತು. ಎಂದು ಹೇಳಿದಳು. ಮುಂದೆ ಕೆಲವು ದಿನಗಳಿಗಾಗಿ ಈ ಮಹಿಳೆಯು ತನ್ನ ತವರೂರಿಗೆ ಹೋದ ನಂತರ ವಾಪಾಸು ಬರದ ಕಾರಣ ಮುಸಲ್ಮಾನ ಪತಿಯು ಅವಳನ್ನು ವಾಪಾಸು ಕರೆಸಲು ಕೇರಳ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದನು. ನ್ಯಾಯಾಲಯವು ಈ ಅರ್ಜಿಯು ಅಯೋಗ್ಯವಾಗಿದೆ ಎಂದು ಹೇಳಿ ತಿರಸ್ಕರಿಸಿದೆ.


ಮುಸಲ್ಮಾನ ಪತಿಯು ದೂರನ್ನು ದಾಖಲಿಸಿದ ನಂತರ ಪೊಲೀಸರು ಕ್ರೈಸ್ತ ಪತ್ನಿಯ ಅಲ್ಲಪುಳಾದಲ್ಲಿರುವ ತವರೂರಿಗೆ ಹೊಗಿ ಅವಳ ವಿಚಾರಣೆ ನಡೆಸಿದಾಗ ಮೇಲಿನ ಸತ್ಯವು ಬೆಳಕಿಗೆ ಬಂದಿದೆ. ಕ್ರೈಸ್ತ ಮಹಿಳೆಯು ಈಗ ಒಬ್ಬಳೇ ವಾಸಿಸುವ ಇಚ್ಛೆಯಿದೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ.

ಸಂಪಾದಕೀಯ ನಿಲುವು

  • ಕೇವಲ ಹಿಂದೂ ಯುವತಿಯರು ಮತ್ತು ಮಹಿಳೆಯರು ಮಾತ್ರವಲ್ಲ, ಅನೇಕ ಕ್ರೈಸ್ತ ಮಹಿಳೆಯರೂ ಲವ್ ಜಿಹಾದ್‌ದ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದಾರೆ. ಯಾವಾಗಲೂ ಕ್ರೈಸ್ತರನ್ನು ಒಲೈಸುವ ಜಾತ್ಯತೀತವಾದಿಗಳು ಈಗ ಈ ಪ್ರಕರಣದಲ್ಲಿ ಏನಾದರೂ ಮಾತನಾಡುವರೇನು?
  • ಲವ್ ಜಿಹಾದ್ ಷಡ್ಯಂತ್ರವಲ್ಲ, ಬರೀ ಬೊಗಳೆಯಾಗಿದೆ ಎಂದು ಒದರುವವರಿಗೆ ಈಗ ಏನು ಹೇಳಲಿಕ್ಕಿದೆ?