ಜ್ಞಾನವಾಪಿಯ ಖಟ್ಲೆಯು ಮುಂದುವರಿಯಲಿದೆ!

  • ಹಿಂದೂಗಳ ಪಕ್ಷದಲ್ಲಿ ನಿರ್ಣಯ(ತೀರ್ಪು) ನೀಡಿದ ವಾರಾಣಸಿ ಜಿಲ್ಲಾ ನ್ಯಾಯಾಲಯ!

  • ಈ ನಿರ್ಣಯಕ್ಕೆ ಮುಸಲ್ಮಾನ ಪಕ್ಷವು ಉಚ್ಚ ನ್ಯಾಯಾಲಯದಲ್ಲಿ ಸವಾಲು ಹಾಕಲಿದೆ

ವಾರಣಸಿ (ಉತ್ತರಪ್ರದೇಶ) – ಜ್ಞಾನವಾಪಿ ಮತ್ತು ಶೃಂಗಾರ ಗೌರಿ ಇಲ್ಲಿ ಪೂಜೆಯನ್ನು ನಡೆಸುವ ಅರ್ಜಿಯ ಬಗ್ಗೆ ಮುಸಲ್ಮಾನ ಪಕ್ಷವು ಆಕ್ಷೇಪವೆತ್ತಿದ ನಂತರ ಈ ಖಟ್ಲೆಯನ್ನು ನಡೆಸಬೇಕೋ ಬೇಡವೋ ಎಂಬ ಬಗ್ಗೆ ಜಿಲ್ಲಾ ನ್ಯಾಯಾಲಯವು ನಿರ್ಣಯ ನೀಡಿದೆ. ೧೨ ಸೆಪ್ಟೆಂಬರ ನಂದು ‘ಈ ಖಟ್ಲೆಯು ಮುಂದುವರಿಕೆಗೆ ಯೋಗ್ಯವಾಗಿದೆ’ ಎಂಬ ಆದೇಶವನ್ನು ನ್ಯಾಯಾಲಯವು ನೀಡಿದೆ. ನ್ಯಾಯಾಲಯದ ಆದೇಶದಲ್ಲಿ ಮುಂದಿನಂತೆ ಹೇಳಲಾಗಿದೆ, ‘ಜ್ಞಾನವಾಪಿ ಮತ್ತು ಶೃಂಗಾರ ಗೌರಿಯಲ್ಲಿ ಮೊದಲಿನಿಂದಲೂ ಪೂಜೆ ಮಾಡಲಾಗುತ್ತಿದ್ದು ಇಲ್ಲಿ ಧಾರ್ಮಿಕ ಪೂಜಾ ಸ್ಥಳ ಕಾನೂನು ೧೯೯೧ ಅನ್ವಯಿಸುವುದಿಲ್ಲ. ಹಾಗೂ ಇದು ವಕ್ಫ್ ಬೋರ್ಡನ ಆಸ್ತಿಯಲ್ಲ. ಹಾಗಾಗಿ ಮುಂದಿನ ಆಲಿಕೆ ಮಾಡಬಹುದು.’ ಜಿಲ್ಲಾ ನ್ಯಾಯಾಧೀಶ ಕೃಷ್ಣ ವಿಶ್ವೇಶ ಇವರು ಈ ನಿರ್ಣಯವನ್ನು ನೀಡಿದರು. ಇದರ ಬಗ್ಗೆ ಸೆಪ್ಟೆಂಬರ ೨೨ ರಂದು ಮುಂದಿನ ಆಲಿಕೆ ನಡೆಯಲಿದೆ. ಹಿಂದೂಗಳ ಪಕ್ಷದಲ್ಲಿ ತೀರ್ಪು ಬಂದಿರುವುದರಿಂದ ಮುಸಲ್ಮಾನರಿಂದ ‘ಈಗ ಉಚ್ಚ ನ್ಯಾಯಾಲಯದಲ್ಲಿ ಸವಾಲು ಹಾಕಲಿದ್ದೇವೆ’; ಎಂದು ಹೇಳಲಾಗುತ್ತಿದೆ.

1. ಹಿಂದೂ ಪಕ್ಷದ ನ್ಯಾಯವಾದಿ ವಿಷ್ಣು ಶಂಕರ ಜೈನ ಇವರು ಮುಂದಿನಂತೆ ಹೇಳಿದರು, ನ್ಯಾಯಾಲಯದ ಈ ನಿರ್ಣಯದಿಂದ ಪೂಜೆಯನ್ನು ಮಾಡುವ ಬೇಡಿಕೆ ಸಹಿತ ನ್ಯಾಯಾಲಯ ಆಯುಕ್ತರ ಜ್ಞಾನವಾಪಿಯ ಸಮೀಕ್ಷೆಯ ವರದಿಯ ಬಗ್ಗೆಯೂ ಈಗ ಆಲಿಕೆಯನ್ನು ನಡೆಸಲಾಗುವುದು.

2. ನ್ಯಾಯವಾದಿ ಪೂ. ಹರಿಶಂಕರ ಜೈನರು ಹೇಳಿದುದೇನೆಂದರೆ, ಇದು ಬಹುದೊಡ್ಡ ವಿಜಯವಾಗಿದೆ. ಈಗ ಭವ್ಯ ಶಿವಮಂದಿರವನ್ನು ಕಟ್ಟುವ ಒಂದು ಮಾರ್ಗವು ಮುಕ್ತವಾಗಿದೆ. ಇವತ್ತಿನ ಹಾಗೆ ಮುಂದಿನ ಹೋರಾಟದಲ್ಲಿಯೂ ನಾವು ಗೆಲ್ಲುವೆವು.

3. ಅರ್ಜಿದಾರರಾದ ರೇಖಾ ಪಾಠಕರು ಇಂದು ನಾವು ಇತಿಹಾಸವನ್ನು ರಚಿಸಿದ್ದೇವೆ. ಈ ನಿರ್ಣಯದಿಂದ ವಾರಾಣಸಿಯಲ್ಲಿ ‘ಹರ ಹರ ಮಹಾದೇವ’ ಘೋಷಣೆಯನ್ನು ಕೇಳಬಹುದು ಎಂದರು.

4. ಅರ್ಜಿದಾರರಾದ ಸೋಹನ ಲಾಲ ಆರ್ಯ ಇವರು, ಇದು ಹಿಂದೂ ಪಕ್ಷದ ವಿಜಯವಾಗಿದೆ. ಈ ನಿರ್ಣಯವು ಜ್ಞಾನವಾಪಿ ಮಂದಿರದ ಆಧಾರಶಿಲೆಯಾಗಿದೆ. ನಾವು ಜನರಿಗೆ ಶಾಂತಿ ಕಾಪಾಡುವಂತೆ ಕರೆ ನೀಡುತ್ತಿದ್ದೇವೆ, ಎಂದರು.

5. ವಿಶ್ವಹಿಂದೂ ಪರಿಷತ್ತಿನ ಕಾರ್ಯಾಧ್ಯಕ್ಷರಾದ ಅಲೋಕ ಕುಮಾರ ಇವರೂ ಈ ನಿರ್ಣಯವನ್ನು ಸ್ವಾಗತಿಸಿದ್ದಾರೆ. ಇದೇ ನಿರ್ಣಯವೇ ಬರುವುದಿತ್ತು. ಆದರೆ ಅದನ್ನು ವಿಳಂಬಿಸಲು ಮುಸಲ್ಮಾನರಿಂದ ಪ್ರಯತ್ನಿಸಲಾಗುತ್ತಿತ್ತು ಎಂದರು.

6. ಅತಿ ಸಂವೇದನಾಶೀಲವೆಂದು ಪರಿಗಣಿಸಲ್ಪಟ್ಟಿರುವ ಈ ಖಟ್ಲೆಯ ಪ್ರಕರಣದಲ್ಲಿ ನ್ಯಾಯಾಲಯದ ಆದೇಶವನ್ನು ನೋಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಲಂ ೧೪೪ (ಗುಂಪುನಿಷೇಧ) ಜ್ಯಾರಿಗೊಳಿಸಲಾಗಿದೆ. ದೊಡ್ಡ ಪ್ರಮಾಣದಲ್ಲಿ ಪೊಲೀಸು ಬಂದೋಬಸ್ತನ್ನು ಸಹ ಮಾಡಲಾಗಿದೆ.

ಏನಿದು ಖಟ್ಲೆ ?

ಅಗೋಸ್ತು ೧೮, ೨೦೨೧ರಂದು ೫ ಹಿಂದೂ ಮಹಿಳೆಯರು ತಮಗೆ ಪ್ರತಿದಿನ ಜ್ಞಾನವಾಪಿ ಪ್ರದೇಶದಲ್ಲಿರುವ ಶೃಂಗಾರಗೌರಿಯ ಪೂಜೆಯನ್ನು ಮಾಡಲು ಅವಕಾಶ ನೀಡಬೇಕೆಂದು ಕೋರಿ ದಿವಾಣಿ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿದ್ದರು. ಸದ್ಯ ಇಲ್ಲಿ ವರ್ಷದಲ್ಲಿ ಒಂದು ಸಲ ಮಾತ್ರ ಪೂಜೆ ನಡೆಯುತ್ತಿದೆ. ದೆಹಲಿಯಲ್ಲಿರುವ ರಾಖಿ ಸಿಂಗ ಇವರು ಈ ೫ ಅರ್ಜಿದಾರರ ನೇತೃತ್ವವನ್ನು ವಹಿಸಿದ್ದಾರೆ. ಸೀತಾ ಸಾಹೂ, ಮಂಜುವ್ಯಾಸ, ಲಕ್ಷ್ಮಿ ದೇವಿ ಮತ್ತು ಕಾಶಿಯ ರೇಖಾ ಪಾಠಕ ಇವರು ಇತರ ನಾಲ್ಕು ಅರ್ಜಿದಾರರಾಗಿದ್ದಾರೆ. ಎಪ್ರಿಲ್ ೨೬, ೨೦೨೨ರಂದು ವಾರಾಣಸಿ ದಿವಾಣಿ ನ್ಯಾಯಾಲಯವು ಜ್ಞಾನವಾಪಿ ಪರಿಸರ ಹಾಗೂ ಶೃಂಗಾರ ಗೌರಿ ಮತ್ತು ಇತರ ದೇವತೆಗಳ ಪರಿಶೀಲನೆಗಾಗಿ ಚಿತ್ರೀಕರಣ ಮತ್ತು ಸಮೀಕ್ಷೆ ನಡೆಸಲು ಆದೇಶಿಸಿತ್ತು. ಅನಂತರ ಅದನ್ನು ನಡೆಸಲಾಗಿತ್ತು. ಆಗ ಇಲ್ಲಿ ಶಿವಲಿಂಗವು ಕಂಡುಬಂದಿತ್ತು. ಮುಸಲ್ಮಾನರು ಸಂಪೂರ್ಣವಾಗಿ ಈ ಖಟ್ಲೆಯನ್ನು ವಿರೋಧಿಸಿ ಅದು ಧಾರ್ಮಿಕ ಪೂಜಾ ಸ್ಥಳ ಕಾನೂನು ೧೯೯೧ಕ್ಕನುಸಾರ ತಪ್ಪಾಗಿದೆ ಎಂದು ಹೇಳಿದ್ದರು. ಅದಕ್ಕೆ ಜಿಲ್ಲಾ ನ್ಯಾಯಾಲಯವು ೧೨ ಸೆಪ್ಟೆಂಬರನಂದು ನೀಡಿದ ಆದೇಶದಲ್ಲಿ ಧಾರ್ಮಿಕ ಪೂಜಾ ಸ್ಥಳ ಕಾನೂನು ೧೯೯೧ ಇಲ್ಲಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿ ಖಟ್ಲೆಯನ್ನು ನಡೆಸಲು ಅನುಮತಿ ನೀಡಿದೆ.