ಹಲಾಲ ಅರ್ಥವ್ಯವಸ್ಥೆಯನ್ನು ನಮ್ಮ ಮೇಲೆ ಹೇರಲಾಗುತ್ತಿದೆ ! – ನ್ಯಾಯಾವಾದಿ ವಿಷ್ಣು ಶಂಕರ ಜೈನ್, ಕೇಂದ್ರ ಸರಕಾರದ ನ್ಯಾಯವಾದಿ

ದೆಹಲಿಯಲ್ಲಿ ‘ಹಲಾಲ ಜಿಹಾದ್’ ಗ್ರಂಥದ ಹಿಂದಿ ಆವೃತ್ತಿಯ ಪ್ರಕಾಶನ !

ಗ್ರಂಥದ ಪ್ರಕಾಶನ ಮಾಡುತ್ತಿರುವ ಎಡದಿಂದ ಶ್ರೀ. ಕಪಿಲ ಮಿಶ್ರಾ, ಶ್ರೀ. ಸುರೇಶ ಚವ್ಹಾಣಕೆ, ಶ್ರೀ. ರಮೇಶ ಶಿಂದೆ ಮತ್ತು ನ್ಯಾಯವಾದಿ ವಿಷ್ಣು ಶಂಕರ ಜೈನ

ನವದೆಹಲಿ ವಾರ್ತೆ– ಇಲ್ಲಿನ ಇಂಡಿಯಾ ಇಂಟರ್‌ನೇಶನಲ್ ಸೆಂಟರ್‌ನಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಇವರು ಬರೆದಿರುವ ‘ಹಲಾಲ ಜಿಹಾದ್’ ಈ ಗ್ರಂಥದ ಹಿಂದಿ ಆವೃತ್ತಿಯನ್ನು ನ್ಯಾಯವಾದಿ ವಿಷ್ಣು ಶಂಕರ ಜೈನ, ಭಾಜಪದ ನಾಯಕ ಹಾಗೂ ಹಿಂದೂ ಇಕೋಸಿಸ್ಟಮ್’ನ ಶ್ರೀ. ಕಪಿಲ ಮಿಶ್ರಾ ಹಾಗೂ ‘ಸುದರ್ಶನ ನ್ಯೂಸ್’ ಈ ವಾರ್ತಾವಾಹಿನಿಯ ಸಂಪಾದಕ ಶ್ರೀ. ಸುರೇಶ ಚವ್ಹಾಣಕೆ ಇವರ ಹಸ್ತದಿಂದ ಪ್ರಕಾಶಿಸಲಾಯಿತು. ಈ ಸಂದರ್ಭದಲ್ಲಿ ನ್ಯಾಯವಾದಿ ವಿಷ್ಣು ಶಂಕರ ಜೈನರು ಹೀಗೇಂದರು, “ಹಲಾಲ ಪುರಸ್ಕೃತ ಪದಾರ್ಥಗಳ ಸೇವಿಸುವಿಕೆ ಮತ್ತು ಉಪಯೋಗಿಸಿ ಹಲಾಲ ಆರ್ಥಿಕವ್ಯವಸ್ಥೆಯನ್ನು ನಮ್ಮ ಮೇಲೆ ಹೇರಲಾಗುತ್ತಿದೆ. ಆದ್ದರಿಂದ ಹಲಾಲ ಪ್ರಮಾಣಪತ್ರದ ಮೂಲಕ ಬಹುಸಂಖ್ಯಾತ ಸಮಾಜದ ಧಾರ್ಮಿಕ ಭಾವನೆಯನ್ನು ನೋಯಿಸಲಾಗುತ್ತಿದೆ. ಇಂತಹ ಅನೇಕ ಪದಾರ್ಥಗಳ ಮಾಹಿತಿ, ಹಲಾಲ ಅರ್ಥವ್ಯವಸ್ಥೆಯ ಮೂಲಕ ಹಿಂದೂ ಸಮಾಜ ಮತ್ತು ಭಾರತೀಯ ಅರ್ಥವ್ಯವಸ್ಥೆಯ ಮೇಲಾಗುವ ವಿಪರೀತ ಪರಿಣಾಮಗಳ ಮಾಹಿತಿ ಈ ಪುಸ್ತಕದ ಮೂಲಕ ಸಮಾಜಕ್ಕೆ ಸಿಗಲಿಕ್ಕಿದೆ.”
ಈ ಸಂದರ್ಭದಲ್ಲಿ ದೆಹಲಿಯ ಉದ್ಯೋಗಪತಿ ಡಾ. ವಿವೇಕ ಅಗ್ರವಾಲ, ಪತ್ರಕರ್ತ ಶ್ರೀ. ಸಂದೀಪ ದೇವ, ಇತಿಹಾಸಕಾರ ಡಾ, ರಿಂಕೂ ವಡೇರಾ, ಬಾಲಾಜಿ ಗ್ರೂಪ್ ಆಫ್ ಕಾಲೇಜಸ್‌ನ ಸಂಚಾಲಕ ಶ್ರೀ. ಜಗದೀಶ ಚೌಧರಿ ಮುಂತಾದ ಗಣ್ಯರು ಈ ಪ್ರಕಾಶನ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕ್ಕೆ ೨೦ ವರ್ಷಗಳು ಪೂರ್ಣವಾಗಿರುವ ಸ್ಮರಣಾರ್ಥ ಸಮಿತಿಯ ಪಶ್ಚಿಮ ಉತ್ತರಪ್ರದೇಶ ಮತ್ತು ಉತ್ತರಾಖಂಡದ ಸಮನ್ವಯಕ ಶ್ರೀ. ಶ್ರಿರಾಮ ಲುಕ್‌ತುಕೆ ಇವರು ವಿವಿಧ ವಿಷಯಗಳಲ್ಲಿ ಸಮಿತಿಗೆ ಲಭಿಸಿದ ಯಶಸ್ಸಿನ ವಿಷಯಗಳನ್ನು ಹೇಳಿದರು. ಸಮಿತಿಯ ಪಂಜಾಬ ಮತ್ತು ಹರಿಯಾಣದ ರಾಜ್ಯ ಸಮನ್ವಯಕ ಶ್ರೀ. ಕಾರ್ತಿಕ ಸಾಳುಂಕೆ ಇವರು ಕಾರ್ಯಕ್ರಮದ ಸೂತ್ರಸಂಚಾಲನೆಯನ್ನು ಮಾಡಿದರು.

ಎಲ್ಲರೂ ಸಂಘಟಿತರಾಗಿ ವಿರೋಧಿಸಿದರೆ, ಹಲಾಲ ಆರ್ಥಿಕವ್ಯವಸ್ಥೆ ಹೆಚ್ಚಾಗದಂತೆ ಖಂಡಿತವಾಗಿಯೂ ತಡೆಗಟ್ಟಬಹುದು ! ಶ್ರೀ. ರಮೇಶ ಶಿಂದೆ

ಹಲಾಲ ಪ್ರಮಾಣಪತ್ರದ ಮೂಲಕ ಸಂಗ್ರಹವಾಗುವ ಹಣವನ್ನು ಎಲ್ಲಿ ಉಪಯೋಗಿಸಲಾಗುತ್ತಿದೆ, ಎಂಬುದು ಕೂಡ ಇಂದು ತನಿಖೆ ಮಾಡಬೇಕಾದ ವಿಷಯವಾಗಿದೆ. ದೇಶದ ಗೃಹಮಂತ್ರಿಗಳಿಗೆ ಹಲಾಲ ಪ್ರಮಾಣಪತ್ರವನ್ನು ನೀಡುವ ಜಮಿಯತ ಉಲೇಮಾ-ಎ-ಹಿಂದ ಈ ಸಂಘಟನೆಯ ಕಾರ್ಯಕರ್ತರಿಂದ ಅಪಾಯವಿದೆ. ಮಧ್ಯಪ್ರದೇಶದಲ್ಲಿ ‘ಇಸ್ಕಾನ್’ನವರು ಮಕ್ಕಳಿಗೆ ಶಾಲೆಗಳಲ್ಲಿ ಮಧ್ಯಾಹ್ನದ ಭೋಜನವನ್ನು ನೀಡಲು ಮುಂದೆ ಬಂದಾಗ ಇಸ್ಲಾಮ್ ಧರ್ಮದವರು ಅದನ್ನು ಬಹಿಷ್ಕರಿಸಿದರು ಹಾಗೂ ಮುಂದಿನಂತೆ ಹೇಳಿದ್ದರು, ‘ನಾವು ಈ ಅನ್ನವನ್ನು ಸ್ವೀಕರಿಸುವುದಿಲ್ಲ; ಏಕೆಂದರೆ ಇದನ್ನು ಭಗವಾನ ಜಗನ್ನಾಥನಿಗೆ ಅರ್ಪಣೆ ಮಾಡಿ ಹಂಚಲಾಗುತ್ತದೆ.’ ಹಾಗಾದರೆ ನಮ್ಮ ಮೇಲೇಕೆ ಹಲಾಲ ಪುರಸ್ಕೃತ ಖಾದ್ಯಪದಾರ್ಥ ಮತ್ತು ಇತರ ವಸ್ತುಗಳನ್ನು ಹೇರಲಾಗುತ್ತದೆ ? ಭಾರತ ಸರಕಾರದ ಮಾಂಸ ರಪ್ತು ಮಾಡುವ ಸಂಸ್ಥೆಯಲ್ಲಿ ಕೇವಲ ಹಲಾಲ ಮಾಂಸವನ್ನು ಮಾತ್ರ ರಪ್ತು ಮಾಡಬಹುದು, ಎಂಬ ಮಾರ್ಗದರ್ಶಕ ಸೂಚನೆಯನ್ನು ನೀಡಲಾಗಿತ್ತು. ಈ ಪ್ರಕರಣದಲ್ಲಿ ಭಾರತ ಸರಕಾರದೊಂದಿಗೆ ಮಾಡಿದ ಪತ್ರವ್ಯವಹಾರದ ಪರಿಣಾಮದಿಂದ ಈ ಸಂಸ್ಥೆ ಈಗ ಅದನ್ನು ನಿಲ್ಲಿಸಿದೆ. ಇಸ್ಲಾಮ್‌ನಲ್ಲಿ ‘ಹಲಾಲ ತಿನ್ನಿ’ ಎಂದು ಬರೆದಿರಬಹುದು, ಆದರೆ ಹಲಾಲ ಮಾರಾಟ ಮಾಡುವ ವಿಷಯದಲ್ಲಿ ಬರೆದಿಲ್ಲ. ಆದ್ದರಿಂದ ನಮಗೆ ಹಲಾಲ ಖರೀದಿಸುವಂತೆ ಯಾರೂ ಬಲವಂತಪಡಿಸುವ ಹಾಗಿಲ್ಲ. ನಾವೆಲ್ಲರೂ ಸಂಘಟಿತರಾಗಿ ವಿರೋಧಿಸಿದರೆ ಹಲಾಲ ಅರ್ಥವ್ಯವಸ್ಥೆ ಹೆಚ್ಚಾಗದಂತೆ ತಡೆಗಟ್ಟಡಬಹುದು.

ತಮ್ಮ ವಿರುದ್ಧವಿರುವ ಸಮಾಂತರ ಆರ್ಥಿಕವ್ಯವಸ್ಥೆಯನ್ನು ನಿಲ್ಲಿಸುವುದು ಪ್ರತಿಯೊಬ್ಬ ಹಿಂದೂವಿನ ಮೂಲಭೂತ ಅಧಿಕಾರ ! – ಶ್ರೀ. ಕಪಿಲ ಮಿಶ್ರಾ

ಹಲಾಲ ಅರ್ಥವ್ಯವಸ್ಥೆಯ ಮೂಲಕ ನಮ್ಮ ಜೇಬಿನಿಂದ ಬಲವಂತದಿಂದ ಹಣವನ್ನು ತೆಗೆದು ಸಮಾಂತರ ಆರ್ಥಿಕವ್ಯವಸ್ಥೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ನಮ್ಮ ವಿರುದ್ಧವಿರುವ ಸಮಾಂತರ ಅರ್ಥವ್ಯವಸ್ಥೆಯನ್ನು ನಿಲ್ಲಿಸುವುದು ಪ್ರತಿಯೊಬ್ಬ ಹಿಂದೂವಿನ ಮೂಲಭೂತ ಅಧಿಕಾರವಾಗಿದೆ. ಬಹುಸಂಖ್ಯಾತ ಸಮಾಜವನ್ನು ಆರ್ಥಿಕದೃಷ್ಟಿಯಿಂದ ದುರ್ಬಲಗೊಳಿಸುವ ಕಾರಸ್ತಾನವು ಇದರ ಮೂಲಕ ನಡೆಯುತ್ತಿದೆ.

ಹಿಂದೂ ರಾಷ್ಟ್ರದ ಬೇಡಿಕೆಯನ್ನು ಮುಂದುವರಿಸುವ ಅವಶ್ಯಕತೆ !- ಶ್ರೀ. ಸುರೇಶ ಚವ್ಹಾಣಕೆ

ಇಂದು ಹಿಂದೂ ಸಮಾಜದ ಮೇಲೆ ವಿವಿಧ ಪ್ರಕಾರದ ಸಂಕಟಗಳಿವೆ, ಅವುಗಳಲ್ಲಿ ಒಂದು ಹಲಾಲ ಜಿಹಾದ್. ಇಂದು ಎಲ್ಲ ಹಿಂದೂಗಳು ತಮ್ಮ ಮೇಲೆ ಹೇರುಲಾಗುತ್ತಿರುವ ಹಲಾಲ ಪ್ರಮಾಣಪತ್ರವನ್ನು ವಿರೋಧಿಸುವುದರೊಂದಿಗೆ ಹಿಂದೂ ರಾಷ್ಟ್ರದ ಬೇಡಿಕೆಯನ್ನು ಮುಂದುವರಿಸುವ ಅವಶ್ಯಕತೆಯಿದೆ.