ರಾಷ್ಟ್ರೀಯ ಬಾಲ ಅಧಿಕಾರ ಸಂರಕ್ಷಣಾ ಆಯೋಗದ ಪರಿಶೀಲನೆಯಲ್ಲಿ ಬಹಿರಂಗ !
ಚೆನ್ನೈ (ತಮಿಳುನಾಡು)– ಇಲ್ಲಿಯ ರೋಯಾಪೆಟ್ಟ ಪ್ರದೇಶದಲ್ಲಿರುವ ಸಿ ಎಸ್ ಐ ಮೋನಹನ್ ಗರ್ಲ್ಸ್ ಹೈಯರ್ ಸೆಕೆಂಡರಿ ಸ್ಕೂಲ್ ಈ ಶಾಲೆಯ ವಸತಿಗೃಹದ ತಪಾಸಣೆಯನ್ನು ರಾಷ್ಟ್ರೀಯ ಬಾಲ ಅಧಿಕಾರ ಸಂರಕ್ಷಣಾ ಆಯೋಗದ ರಾಜ್ಯ ಶಾಖೆಯಿಂದ ನಡೆಸಲಾಯಿತು. ಈ ಸಮಯದಲ್ಲಿ ವಸತಿಗೃಹದಲ್ಲಿನ ವಿದ್ಯಾರ್ಥಿನಿಯರು, ನಮ್ಮ ಮೇಲೆ ಕ್ರಿಶ್ಚಿಯನ್ ಪರಂಪರೆ ಪಾಲಿಸಲು ಒತ್ತಡ ಹೇರಲಾಗುತ್ತದೆ, ಎಂದು ಆರೋಪಿಸಿದರು. ಇದರ ನಂತರ ಈ ಪ್ರಕರಣದ ವಿಚಾರಣೆ ನಡೆಸಲಾಗಿದೆ. ಈ ವಸತಿಗೃಹದ ಮಾಹಿತಿ ದೊರೆತನಂತರ ಈಗ ಆಯೋಗದ ಪಥಕ ರಾಜ್ಯದಲ್ಲಿನ ಬೇರೆ ಶಾಲೆಯ ವಸತಿಗೃಹಗಳ ಪರಿಶೀಲನೆ ಮಾಡುತ್ತಿದೆ.
ಈ ಪ್ರಕರಣದಲ್ಲಿ ಈ ವಿದ್ಯಾರ್ಥಿನಿಯರು ಆಯೋಗಕ್ಕೆ ಲಿಖಿತ ದೂರು ನೀಡಿದ್ದಾರೆ, ಅದರಲ್ಲಿ ಅವರು ತಮಗೆ ಹೊಡೆತದ ಜೊತೆಗೆ ಅತ್ಯಾಚಾರ ಮಾಡಲಾಗುತ್ತದೆ. ವಸತಿಗೃಹದ ಪ್ರಮುಖ ಅವರಿಗೆ ಬೈಗುಳದ ಜೊತೆಗೆ ಕಟ್ಟಿ ಹಾಕಿ ಅವರ ಮತಾಂತರವಾಗಲು ಅನಿವಾರ್ಯ ಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
Tamil Nadu: Conversion racket exposed in a Christian school, warden forces hostel girls to convert, assaults them for refusinghttps://t.co/B9Ij7utFvp
— OpIndia.com (@OpIndia_com) September 11, 2022
ವಿದ್ಯಾರ್ಥಿನಿಯರಿಗೆ ಹೂವನ್ನು ಮುಡಿಯಲು ಮತ್ತು ಹಣೆಗೆ ಕುಂಕುಮ ಇಟ್ಟುಕೊಳ್ಳಲು ನಿಷೇಧ
ಈ ವಸತಿಗೃಹದಲ್ಲಿ ಬಡ ಕುಟುಂಬದ ಹಿಂದೂ ವಿದ್ಯಾರ್ಥಿನಿಯರು ವಾಸಿಸುತ್ತಿದ್ದಾರೆ. ಅವರ ಮೇಲೆ ಮತಾಂತರಗಾಗಿ ಒತ್ತಡ ಹೇರಲಾಗುತ್ತದೆ. ವಿಶೇಷವೆಂದರೆ ಈ ವಸತಿಗೃಹದ ನೋಂದಣಿ ಮಾಡಿಸಲಾಗಿಲ್ಲ. ಹಾಗೂ ವಿದ್ಯಾರ್ಥಿನಿಯರಿಗೆ ಯಾವುದೇ ಸೌಲಭ್ಯ ಸಿಗದೇ ಇರುವುದು ಗಮನಕ್ಕೆ ಬಂದಿದೆ. ಎಲ್ಲೆಡೆ ಅಸ್ವಚ್ಛತೆ ಇತ್ತು. ಸಭಾಗೃದಲ್ಲಿ ಮಲಗಲು ಇರುವ ಹಾಸಿಗೆಗಳು ಕೂಡ ಅಸ್ವಚ್ಛವಾಗಿದ್ದವು. ಪ್ರತಿಯೊಂದು ಮಂಚದ ಮೇಲೆ ಬೈಬಲ್ ಇಡಲಾಗಿತ್ತು. ಹಾಗೂ ಗೋಡೆಗಳ ಮೇಲೆ ಯೇಸುವಿನ ಚಿತ್ರಗಳು ಹಾಕಲಾಗಿದೆ. ವಿದ್ಯಾರ್ಥಿನಿಯರು ಹೂವನ್ನು ಮುಡಿಯಬಾರದು ಮತ್ತು ಹಣೆಗೆ ಕುಂಕುಮ ಹಚ್ಚಲು ಮತ್ತು ಕಿವಿ ಓಲೆ ಹಾಕುಲು ನಿರ್ಬಂಧಿಸಲಾಗಿದೆ. ಆಯೋಗದ ಅಧಿಕಾರಿಗಳು ತಲುಪಿದಾಗ ಅವರು ಅಳಲು ಪ್ರಾರಂಭಿಸಿದ್ದರು.
ಸಂಪಾದಕೀಯ ನಿಲುವುದೇಶದಲ್ಲಿನ ಕ್ರಿಶ್ಚನ್ ಶಾಲೆಗಳಲ್ಲಿ ಬಹಳಷ್ಟು ಬಾರಿ ಈ ರೀತಿಯ ದೌರ್ಜನ್ಯ ನಡೆಯುವ ಘಟನೆಗಳು ಬೆಳಕಿಗೆ ಬಂದರು ಸಹ ಸಂಬಂಧಿತ ರಾಜ್ಯ ಸರಕಾರಗಳು ಈ ವಿಷಯವಾಗಿ ಕಠಿಣ ಕ್ರಮ ತೆಗೆದು ಕೊಳ್ಳುವುದು ಕಾಣುವುದಿಲ್ಲ. ಭಾಜಪ ಆಡಳಿತವಿರುವ ರಾಜ್ಯಗಳಲ್ಲಿ ಮತ್ತು ಕೇಂದ್ರ ಸರಕಾರವು ಈ ಸಂದರ್ಭದಲ್ಲಿ ಹಿಂದೂಗಳ ರಕ್ಷಣೆಗಾಗಿ ಮತ್ತು ಈ ರೀತಿಯ ಶಾಲೆಗಳ ಮೇಲೆ ಕ್ರಮ ಕೈಗೊಳ್ಳುವ ನಿರ್ಣಯ ತೆಗೆದುಕೊಳ್ಳುವುದು ಅವಶ್ಯಕವಾಗಿದೆ, ಎಂದು ಹಿಂದೂಗಳಿಗೆ ಅನಿಸುತ್ತದೆ. |
ಶಾಲೆಯ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಿದರು ದ್ರಾವಿಡ ಮುನ್ನೆತ್ರ ಕಳಘಂ(ದ್ರಾವಿಡ ಪ್ರಗತಿಪರ ಸಂಘ) ಸರಕಾರ ನಿಷ್ಕ್ರಿಯ !
ಆಯೋಗವು ಈ ವಿಷಯದಲ್ಲಿ ತಮಿಳುನಾಡಿನ ಮುಖ್ಯ ಸಚಿವ ವಿ. ಈರಾಯಿ ಅಂಬು ಮತ್ತು ಪೊಲೀಸ ಮಹಾ ಸಂಚಾಲಕ ಸಿಲಿಂದ್ರಬಾಬು ಇವರಿಗೆ ಪತ್ರ ಬರೆದು, ಈ ವಸತಿಗೃಹದ ವಿದ್ಯಾರ್ಥಿನಿಯರ ಮೇಲೆ ಬಲವಂತದಿಂದ ಕ್ರಿಶ್ಚನ್ ಧರ್ಮ ಸ್ವೀಕರಿಸುವುದನ್ನು ಅನಿವಾರ್ಯ ಮಾಡಲಾಗುತ್ತಿದೆ, ಆದ್ದರಿಂದ ಶಾಲೆಯ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದೆ, ಹಾಗೂ ಆಯೋಗವು ಈ ವಸತಿಗೃಹದಿಂದ ವಿದ್ಯಾರ್ಥಿನಿಯರನ್ನು ಹೊರ ತೆಗೆಯಲು ಒತ್ತಾಯಿಸಿದೆ. ಆದರೆ ಸರಕಾರ ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಈ ವರ್ಷ ಜನವರಿ ತಿಂಗಳಿನಲ್ಲಿ ತಮಿಳುನಾಡಿನ ಒಂದು ಕ್ರಿಶ್ಚನ್ ಶಾಲೆಯ ವಸತಿಗೃಹದಲ್ಲಿ ಲಾವಣ್ಯ ಎಂಬ ಹಿಂದೂ ಯುವತಿಯು ತನಗೆ ಕ್ರಿಶ್ಚನ್ ಧರ್ಮ ಸ್ವೀಕರಿಸಲು ಒತ್ತಾಯಿಸಿದರೆಂದು ಆತ್ಮಹತ್ಯೆ ಮಾಡಿಕೊಂಡಿದ್ದಳು.
ಸಂಪಾದಕೀಯ ನಿಲುವುಸ್ವತಹ ನಾಸ್ತಿಕವೆಂದು ಕರೆಸಿಕೊಳ್ಳುವ ದ್ರಮುಕ ಸರಕಾರ ನಾಸ್ತಿಕವಲ್ಲ, ಕ್ರಿಶ್ಚನ್ ರನ್ನು ಓಲೈಸುವ ಮತ್ತು ಹಿಂದೂ ದ್ವೇಷದ ಸರಕಾರವಾಗಿದೆ ಎಂಬುದು ಇದರಿಂದ ತಿಳಿಯುತ್ತದೆ. |