ಕಾಂಗ್ರೆಸ್ ನಾಯಕ ಸಚಿನ್ ಸಾವಂತ್‌ನ ನುಡಿಮುತ್ತು !
ಅಮರಾವತಿ – ಇಲ್ಲಿನ ರುಕ್ಮಿಣಿ ನಗರ ಪ್ರದೇಶದಿಂದ ನಾಪತ್ತೆಯಾಗಿದ್ದ ೧೯ ವರ್ಷದ ಯುವತಿ ಪತ್ತೆಯಾಗಿದ್ದಾಳೆ. ‘ಈಕೆ ಕೋಪಗೊಂಡು ಮನೆ ಬಿಟ್ಟು ಹೋಗಿದ್ದಳು’, ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಷಯದ ಕುರಿತು ಕಾಂಗ್ರೆಸ್ ನಾಯಕ ಸಚಿನ್ ಸಾವಂತ್ ಅವರು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಉದ್ದೇಶಿಸಿ, ‘ನೀವು ದೂರವಾಣಿ ಕರೆಗಳನ್ನು ರೆಕಾರ್ಡ್ ಮಾಡುವ ‘ಆಪ್’ ಅನ್ನು ಇಡಬಾರದು ಎಂದು ಪೊಲೀಸರ ನಿಯಮವಿದೆಯೇ ?’ ಇದನ್ನು ಎತ್ತಿ ಹಿಡಿಯಬೇಕು ಇಲ್ಲವೇ ಪೊಲೀಸರ ಗೌರವ ಕಾಪಾಡಬೇಕು ಎಂದು ಟ್ವೀಟ್ ಮಾಡಿದ್ದರು. ‘ಲವ್ ಜಿಹಾದ್’ ಹೆಸರಿನಲ್ಲಿ ನಕಲಿ ಬಾಂಬ್ ಗಳನ್ನು ಹಾಕಿ ಸಮಾಜದಲ್ಲಿ ಅಶಾಂತಿ ಹರಡಲು ಯತ್ನಿಸುವುದು ಅಪರಾಧವಲ್ಲವೇ ? ಹೀಗಿರುವಾಗ ಏಕೆ ಕ್ರಮಕೈಗೊಂಡಿಲ್ಲ’ ಎಂದು ಪ್ರಶ್ನಿಸಿದರು.
लव्ह जिहाद नावाने खोटी बोंब ठोकून समाजात अशांतता पसरवण्याचा प्रयत्न अपराध नाही का?; सचिन सावंतांचा सवाल @sachin_inc @Dev_Fadnavis @BJP4India @navneetravirana #freepressindia https://t.co/W2FW57u9mS
— 𝐅𝐑𝐄𝐄 𝐏𝐑𝐄𝐒𝐒 𝐈𝐍𝐃𝐈𝐀 (@Freepressindia1) September 9, 2022
ಈ ಹಿಂದೂ ಯುವತಿ ನಾಪತ್ತೆಯಾಗಿರುವ ಬಗ್ಗೆ ಆಕೆಯ ತಂದೆಯವರು ರಾಜಪೇಠ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ವೇಳೆ ಈರುಳ್ಳಿ, ಆಲೂಗಡ್ಡೆ ಮಾರಾಟ ಮಾಡುತ್ತಿದ್ದ ಮುಸ್ಲಿಂ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದಾದ ಬಳಿಕ ಸಂಸದ ನವನೀತ್ ರಾಣಾ, ಬಿಜೆಪಿ ಹಾಗೂ ಹಿಂದುತ್ವನಿಷ್ಠ ಸಂಘ ಸಂಸ್ಥೆಗಳು ‘ಲವ್ ಜಿಹಾದ್’ ಪ್ರಕರಣವಾಗಿ ಪ್ರತಿಭಟನೆ ನಡೆಸಿದ್ದವು.
ಸಂಪಾದಕೀಯ ನಿಲುವು
|