ಹಿಂದೂ ಜನಜಾಗೃತಿ ಸಮಿತಿಯ ವಿಶೇಷ ಸಂವಾದ : ಚರ್ಚ್ ಮೂಲಕ ನಡೆಸಲಾಗುತ್ತಿರುವುದು ಆಶ್ರಯಕೇಂದ್ರವೋ ಅಥವಾ ಅತ್ಯಾಚಾರಕೇಂದ್ರವೋ ?’

ಚರ್ಚ್ ಮೂಲಕ ನಡೆಸುತ್ತಿರುವ ಎಲ್ಲಾ ಆಶ್ರಯಕೇಂದ್ರಗಳನ್ನು ನಿಯಮಿತವಾಗಿ ತನಿಖೆ ಮಾಡಿ ಮತ್ತು ಸಮೀಕ್ಷೆ ನಡೆಸಿ ! – ಶ್ರೀ. ಅನಿಲ ಧೀರ, ಭಾರತ ರಕ್ಷಾ ಮಂಚ್

ದೇಶದ ನಾನಾ ಭಾಗಗಳಲ್ಲಿ ಚರ್ಚ್‌ಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ನಡೆದಾಗ ನಗರದಲ್ಲಿ ಈ ಪ್ರಕರಣಗಳು ಸ್ವಲ್ಪ ಮಟ್ಟಿಗೆ ಬೆಳಕಿಗೆ ಬರುತ್ತವೆ. ಬೆಳಕಿಗೆ ಬಂದಿರುವ ಈ ಪ್ರಕರಣಗಳು ಮಂಜುಗಡ್ಡೆಯ ತುದಿ ಮಾತ್ರ; ಆದರೆ ಆದಿವಾಸಿಬಹುಸಂಖ್ಯಾತ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ, ಚರ್ಚ್‌ಗೆ ಸಂಬಂಧಿಸಿದ ಇಂತಹ ಘಟನೆಗಳು ಯಾವಾಗ ನಡೆಯುತ್ತವೆಯೋ ಆಗ ಅದು ಯಾರಿಗೂ ತಿಳಿಯುವುದಿಲ್ಲ. ಭಾರತದಲ್ಲಿ ಚರ್ಚ್‌ನಿಂದ ನಡೆಯುತ್ತಿರುವ ತಪ್ಪು ಕೃತ್ಯಗಳನ್ನು ಗಮನಿಸಿದರೆ, ರಾಜ್ಯ ಸರಕಾರಗಳು ಚರ್ಚ್ ನಡೆಸುತ್ತಿರುವ ಎಲ್ಲಾ ಆಶ್ರಯಕೇಂದ್ರಗಳ ನಿಯಮಿತ ತನಿಖೆ ಮತ್ತು ಸಮೀಕ್ಷೆಗಳನ್ನು ನಡೆಸಬೇಕು, ಎಂದು ‘ಭಾರತ ರಕ್ಷಾ ಮಂಚ್’ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ. ಅನಿಲ ಧೀರ ಇವರು ಆಗ್ರಹಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಚರ್ಚ್ ನಡೆಸುತ್ತಿರುವ ಆಶ್ರಯಕೇಂದ್ರವೋ ಅಥವಾ ಅತ್ಯಾಚಾರಕೇಂದ್ರವೋ ?’ ಎಂಬ ವಿಷಯದ ಕುರಿತು ‘ಆನ್‌ಲೈನ್’ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.

ಶ್ರೀ. ಅನಿಲ ಧೀರ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಯಾವಾಗ ಚರ್ಚ್‌ನಲ್ಲಿ ದೌರ್ಜನ್ಯಗಳು ನಡೆಯುತ್ತದೆಯೋ ಆಗ ಮುಖ್ಯ ಪ್ರಸಾರ ಮಾಧ್ಯಮಗಳು ಮೌನವಾಗಿರುತ್ತವೆ; ಆದರೆ ಹಿಂದೂ ಸಾಧು ಮತ್ತು ಸಂತರ ವಿರುದ್ಧ ಆರೋಪ ಮಾಡಿದಾಗ, ಆ ವಿಷಯವನ್ನು ಎತ್ತಿ ಹಿಡಿಯಲಾಗುತ್ತದೆ. ಇದು ದ್ವಿಮುಖ ನೀತಿಯಾಗಿದೆ. ಭಾರತದಲ್ಲಿನ ಚರ್ಚ್‌ಗಳಿಗೆ ವಿದೇಶದಿಂದ ಹೆಚ್ಚಿನ ಪ್ರಮಾಣದ ಹಣವನ್ನು ಪೂರೈಸಲಾಗುತ್ತದೆ. ಅದರ ಮೇಲೆ ಸರಕಾರದ ನಿಯಂತ್ರಣವಿಲ್ಲ ಎಂದು ಹೇಳಿದರು.

ತೆಲಂಗಾಣದ ‘ಕ್ರಿಶ್ಚಿಯನ್ ಸ್ಟಡೀಸ್’ನ ಅಭ್ಯಾಸಕಿ ಶ್ರೀಮತಿ ಈಸ್ಟರ್ ಧನರಾಜ್ ಇವರು ಮಾತನಾಡುತ್ತಾ, ಕ್ರೈಸ್ತ ಸಂಸ್ಥೆಗಳು ಮಹಿಳೆ ಮತ್ತು ಮಕ್ಕಳ ಶೋಷಣೆಯ ಕೇಂದ್ರಗಳಾಗುತ್ತಿವೆ. ಇದು ಹೊಸದಾಗಿರದೇ 1980 ರ ದಶಕದಿಂದ ಜಗತ್ತಿನಾದ್ಯಂತ ಚರ್ಚ್‌ನಲ್ಲಿನ ಕಿರುಕುಳದ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಚರ್ಚ್‌ಗಳಲ್ಲಿನ ದೌರ್ಜನ್ಯಗಳಿಗೆ ಕಾರಣವಾದ ಪಾದ್ರಿಗಳನ್ನು ವಿವಿಧ ಚರ್ಚ್ ಆಡಳಿತಗಳು ಶಿಕ್ಷೆ ನೀಡದೇ ಬೆಂಬಲಿಸಿದವು. ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಈ ಎಲ್ಲ ಚರ್ಚ್‌ಗಳಿಂದ ದೊಡ್ಡ ಪ್ರಮಾಣದಲ್ಲಿ ಹಣಕಾಸಿನ ಹಗರಣಗಳು ನಡೆದಾಗ, ಅದರ ಬಗ್ಗೆ ಯಾವುದೇ ಚರ್ಚೆಯಿಲ್ಲ; ಆದರೆ ದೇವಸ್ಥಾನಗಳಲ್ಲಿ ಹಣ ದುರುಪಯೋಗವಾಗುತ್ತದೆ ಎಂಬ ಕಾರಣ ನೀಡಿ ಸರಕಾರ ಇನ್ನೂ ದೇವಸ್ಥಾನಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ ಎಂದು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯ ರಣರಾಗಿಣಿ ಶಾಖೆಯ ಕು. ಪ್ರತಿಕ್ಷಾ ಕೋರಗಾವಕರ ಇವರು ಮಾತನಾಡುತ್ತಾ, ನವಮುಂಬಯಿನಲ್ಲಿರುವ ‘ಬೆತೆಲ್ ಗಾಸ್ಪೆಲ್ ಚಾರಿಟೇಬಲ್ ಟ್ರಸ್ಟ್’ನ ಚರ್ಚ್‌ನ ವಸತಿಗೃಹದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದೆ. ಈ ವಿಷಯದ ಜೊತೆಗೆ, ದೇಶಾದ್ಯಂತ ಎಲ್ಲಾ ಕಡೆಯ ಚರ್ಚ್‌ನ ಅಧೀನದಲ್ಲಿರುವ ಆಶ್ರಯಕೇಂದ್ರಗಳ ತನಿಖೆಗೆ ಸರಕಾರ ಸಮಿತಿಯನ್ನು ನೇಮಿಸಬೇಕು ಮತ್ತು ತಪ್ಪು ಕೃತ್ಯಗಳಾಗುತ್ತಿರುವ ಚರ್ಚ್‌ಗಳ ಆಶ್ರಯಕೇಂದ್ರಗಳ ನೋಂದಣಿಯನ್ನು ಶಾಶ್ವತವಾಗಿ ರದ್ದುಗೊಳಿಸಬೇಕು, ಎಂದು ‘ರಣರಾಗಿಣಿ’ಯು ಆಗ್ರಹಿಸಿದೆ, ಎಂದರು.