ಗೋಮಾಂಸ ತಿನ್ನುತ್ತಿರುವುದರಿಂದ ನಟ ರಣಬೀರ ಕಪೂರ ಮತ್ತು ಪತ್ನಿ ಆಲಿಯಾ ಇವರಿಗೆ ಬಜರಂಗ ದಳದ ಕಾರ್ಯಕರ್ತರು ಮಹಾಕಾಲೇಶ್ವರ ಮಂದಿರದೊಳಗೆ ಹೋಗದಂತೆ ತಡೆದರು !

ನಟ ರಣಬೀರ ಕಪೂರ ಮತ್ತು ಅವನ ಪತ್ನಿ ಆಲಿಯಾ ಭಟ್

ಉಜ್ಜೈನ್ (ಮಧ್ಯಪ್ರದೇಶ) – ಸಪ್ಟೆಂಬರ ೬ ರಂದು ರಾತ್ರಿ ನಟ ರಣಬೀರ ಕಪೂರ ಮತ್ತು ಅವನ ಪತ್ನಿ ಆಲಿಯಾ ಭಟ್ ಇವರು ಮಹಾಕಾಲೇಶ್ವರ ಮಂದಿರದಲ್ಲಿ ದರ್ಶನಕ್ಕಾಗಿ ಬಂದಾಗ ಅವರನ್ನು ಬಜರಂಗ ದಳದ ಕಾರ್ಯಕರ್ತರು ಮಂದಿರಕ್ಕೆ ಹೋಗದಂತೆ ತಡೆದರು. ಕಾರ್ಯಕರ್ತರು ಅವರ ವಾಹನವನ್ನು ಅಡ್ಡಗಟ್ಟಿದ್ದರಿಂದ ಅವರು ದರ್ಶನ ತೆಗೆದುಕೊಳ್ಳದೆಯೆ ಹಿಂತಿರುಗಿ ಹೋದರು. ರಣಬೀರ ಕಪೂರ ಇವರು ‘ನಾನು ಗೋಮಾಂಸ ತಿನ್ನುತ್ತೇನೆ’ ಎಂದು ಹೇಳಿರುವುದರ ಹಿನ್ನೆಲೆಯಲ್ಲಿ ಬಜರಂಗದಳದ ಕಾರ್ಯಕರ್ತರು ಇವರಿಬ್ಬರನ್ನೂ ತಡೆದಿದ್ದರು. ಬಜರಂಗ ದಳದ ಕಾರ್ಯಕರ್ತರು ‘ಜಯ ಶ್ರೀರಾಮ’ನ ಘೋಷಣೆ ನೀಡುತ್ತಾ ಕಪ್ಪು ಬಾವುಟವನ್ನು ತೋರಿಸಿದರು. ಈ ಪ್ರಕರಣದಲ್ಲಿ ಪೊಲೀಸರು ಕಲಂ ೩೫೩ ರ ಅಡಿಯಲ್ಲಿ ಅಪರಾಧವನ್ನು ದಾಖಲಿಸಿದ್ದಾರೆ. ಸರಕಾರಿ ಕಾರ್ಮಿಕರ ಕೆಲಸದಲ್ಲಿ ಅಡಚನೆಯನ್ನುಂಟು ಮಾಡಲು ಪ್ರಯತ್ನಿಸಿದ ಆರೋಪದಲ್ಲಿ ಈ ಅಪರಾಧವನ್ನು ದಾಖಲಿಸಲಾಗಿದೆ. ರಣಬೀರ ಕಪೂರ ಮತ್ತು ಆಲಿಯಾ ಭಟ್ ಇವರು ತಮ್ಮ ಮುಂದಿನ ‘ಬ್ರಹ್ಮಾಸ್ತ್ರ’ ಚಲನಚಿತ್ರದ ಪ್ರಸಾರದ ನಿಮಿತ್ತ ದೇಶದ ವಿವಿಧ ಭಾಗಗಳಲ್ಲಿ ತಿರುಗಾಡುತ್ತಿದ್ದಾರೆ.

೧. ‘ಆಡಳಿತದವರು ರಣಬೀರ ಕಪೂರ ಮತ್ತು ಆಲಿಯಾ ಭಟ್ ಇವರನ್ನು ಮಹಾಕಾಲೇಶ್ವರನ ದರ್ಶನಕ್ಕಾಗಿ ಮಂದಿರಕ್ಕೆ ಬರಲು ಆವಾಹನ ನೀಡಿದರು; ಆದರೆ ಇವರಿಬ್ಬರಿಗೂ ವಿರೋಧವಾಗಿರುವುದರಿಂದ ಅವರು ವಾಹನದಿಂದ ಕೆಳಗಿಳಿಯದೆಯೆ ಹಿಂತಿರುಗಿ ಹೋದರು’, ಎಂದು ಹೇಳಲಾಗುತ್ತದೆ. (ಗೋಮಾಂಸ ತಿಂದು ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸುವವರನ್ನು ಮಂದಿರದೊಳಗೆ ದರ್ಶನಕ್ಕಾಗಿ ಏಕೆ ಕರೆದರು ? ಆಡಳಿತದವರು ಮೊದಲು ಇದಕ್ಕೆ ಉತ್ತರವನ್ನು ನೀಡಬೇಕು ! – ಸಂಪಾದಕರು) ‘ಈ ಸಮಯದಲ್ಲಿ ಪೊಲೀಸರು ವಿರೋಧಿಸುತ್ತಿದ್ದ ಹಿಂದುತ್ವನಿಷ್ಠರನ್ನು ರಸ್ತೆಯಿಂದ ದೂರ ಸರಿಸಿದ್ದರು’, ಎಂದು ಕೂಡ ಹೇಳಲಾಗುತ್ತಿದೆ.

೨. ಚಲನಚಿತ್ರ ನಿರ್ದೇರ್ಶಕ ಆರ್ಯನ್ ಮುಖರ್ಜಿ ಮಾತ್ರ ಮಂದಿರಕ್ಕೆ ಹೋಗಿ ದರ್ಶನ ಪಡೆದರು ಎಂದು ಇಲ್ಲಿನ ಪುರೋಹಿತ ಆಶಿಷ ಪುಜಾರಿ ಇವರು ಹೇಳಿದರು.

ರಣಬೀರ ಕಪೂರ ಏನು ಹೇಳಿದ್ದರು ?

೨೦೧೧ ರಲ್ಲಿ ರಣಬೀರ ಕಪೂರ ಇವರು ‘ರಾಕ್‌ಸ್ಟಾರ್’ ಚಲನಚಿತ್ರ ಪ್ರಸಿದ್ದಿಯ ಸಮಯದಲ್ಲಿ ‘ನನಗೆ ಗೋಮಾಂಸ ತಿನ್ನಲಿ ಇಷ್ಟವಾಗುತ್ತದೆ. ನನ್ನ ಕುಟುಂಬದವರು ಪಾಕಿಸ್ತಾನದ ಪೇಶಾವರದವರಾಗಿದ್ದಾರೆ. ಆದ್ದರಿಂದ ಅವರೊಂದಿಗೆ ಪೇಶಾವರೀ ಸಂಸ್ಕೃತಿಯೂ ಇಲ್ಲಿಗೆ ಬಂದಿದೆ. ನಾನು ಮಟನ್ ತಿನ್ನುತ್ತೇನೆ. ಗೊಮಾಂಸವನ್ನು ಇಷ್ಟಪಡುತ್ತೇನೆ’, ಎಂದು ಹೇಳಿದ್ದರು. ಆ ಸಮಯದ ಈ ವಿಡಿಯೋ ಈಗ ಪುನಃ ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಗುತ್ತಿದೆ. ಅದರಿಂದ ರಣಬೀರನಿಗೆ ವಿರೋಧಿಸಲಾಗುತ್ತಿದೆ.

ಸಂಪಾದಕೀಯ ನಿಲುವು

ಹಿಂದೂಗಳು ಈಗ ಜಾಗೃತರಾಗಿರುವುದರಿಂದ ಅವರು ಹೀಗೆ ಕಾನೂನು ಮಾರ್ಗದಲ್ಲಿ ವಿರೋಧಿಸಿ ಅವರ ಧಾರ್ಮಿಕ ಭಾವನೆಯನ್ನು ಗೌರವಿಸುವಂತೆ ಅನಿವಾರ್ಯ ಮಾಡುತ್ತಿದ್ದಾರೆ, ಎಂಬುದು ಶ್ಲಾಘನೀಯವಾಗಿದೆ !