ಒಂದು ವಿಶೇಷ ಧರ್ಮದವರನ್ನು ಸಂತೋಷ ಪಡಿಸಲು ನನ್ನ ಪತಿಯ ಬಂಧನ !

ಶಾಸಕ ಟಿ. ರಾಜಾ ಸಿಂಹರ ಪತ್ನಿಯು ಆರೋಪಿಸುತ್ತಾ ಉಚ್ಚ ನ್ಯಾಯಾಲಯದಲ್ಲಿ ತ್ವರಿತ ಆಲಿಕೆಗಾಗಿ ದೂರು ದಾಖಲು !

ಭಾಗ್ಯನಗರ (ತೇಲಂಗಾಣಾ) – ಇಲ್ಲಿಯ ಶಾಸಕ ಟಿ. ರಾಜಾ ಸಿಂಹರನ್ನು ಮಹಮ್ಮದ ಪೈಗಂಬರರ ತಥಾಕಥಿತ ಅಪಮಾನ ಮಾಡಿರುವ ಬಗ್ಗೆ ‘ಪ್ರಿವ್ಹೆಂಟಿವ್ ಡಿಟೆನ್ಷನ್ ಆಕ್ಟ’ ಕಾನೂನಿನ ಅಡಿಯಲ್ಲಿ ಬಂಧಿಸಲಾಗಿದೆ. ಅವರ ಮೇಲಿನ ಆರೋಪಗಳ ಮೇಲೆ ಶೀಘ್ರ ಆಲಿಕೆ ನಡೆಸಬೇಕು, ಇದಕ್ಕಾಗಿ ಅವರ ಪತ್ನಿಯು ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ರಾಜಾ ಸಿಂಹರ ಪತ್ನಿಯು, ನನ್ನ ಪತಿಯನ್ನು ಕೇವಲ ಒಂದು ವಿಶೇಷ ಧರ್ಮದವರನ್ನು ಸಂತೋಷ ಪಡಿಸಲು ಕಾರಾಗೃಹದಲ್ಲಿ ಇಟ್ಟಿದ್ದಾರೆ. ವಿಶೇಷ ಧರ್ಮದವರ ಓಲೈಕೆಗಾಗಿ ಇದನ್ನು ಮಾಡಲಾಗಿದೆ. ಇದರ ಹೊರತು ಬೇರೆ ಯಾವುದೇ ಕಾರಣವಿಲ್ಲ ಎಂದು ಆರೋಪಿಸಿದ್ದಾರೆ.