ಪಾಕಿಸ್ತಾನದ ನಾಗರೀಕತೆಯನ್ನು ಮುಚ್ಚಿಟ್ಟು ಸರಕಾರಿ ಶಿಕ್ಷಕಿ ಎಂದು ಕೆಲಸ ಮಾಡುತ್ತಿದ್ದ ಮಹಿಳೆ ಹಾಗೂ ಆಕೆಯ ಮಗಳ ಮೇಲೆ ಕಾರ್ಯಾಚರಣೆ !

ಸರಕಾರಿ ಅಧಿಕಾರಿಗಳ ಮೇಲೆಯೂ ಕಾರ್ಯಾಚರಣೆಯಾಗುವ ಸಾಧ್ಯತೆ

ರಾಮಪೂರ (ಉತ್ತರಪ್ರದೇಶ) – ಪಾಕಿಸ್ತಾನಿ ನಾಗರೀಕತೆಯ ಬಗ್ಗೆ ಮುಚ್ಚಿಟ್ಟು ಸರಕಾರಿ ಶಿಕ್ಷಕಿಯ ನೌಕರಿಯನ್ನು ಪಡೆದಿರುವ ಮಹಿಳೆಯನ್ನು ವಜಾಗೊಳಿಸಲಾದರೆ ಆಕೆಯ ಮಗಳನ್ನು ಅಮಾನತುಗೊಳಿಸಲಾಗಿದೆ. ಈ ಪ್ರಕರಣದಲ್ಲಿ ಕೆಲವು ಸರಕಾರಿ ಅಧಿಕಾರಿಗಳು ಹಾಗೂ ನೌಕರರ ಮೇಲೆಯೂ ಕಾರ್ಯಾಚರಣೆ ನಡೆಯುವ ಸಾಧ್ಯತೆಯಿದೆ. ಮಗಳು ಬರೇಲಿಯಲ್ಲಿ, ತಾಯಿಯು ರಾಮಪೂರದಲ್ಲಿ ನೌಕರಿ ಮಾಡುತ್ತಿದ್ದರು.


ರಾಮಪೂರದ ಆತಿಶಬಾಜಾನನಲ್ಲಿ ವಾಸಿಸುವ ಫರಜಾನ ಉರುಫ್‌ ಮಾಹಿರಾ ಅಖ್ತರರು ಜೂನ ೧೯೭೯ರಲ್ಲಿ ಪಾಕಿಸ್ತಾನದ ನಿವಾಸಿಯಾದ ಸಿಬಗತ ಅಲೀಯೊಂದಿಗೆ ವಿವಾಹವಾದರು. ಅನಂತರ ಆಕೆಯು ಪಾಕಿಸ್ತಾನಕ್ಕೆ ಹೋದಾಗ ಆಕೆಗೆ ಅಲ್ಲಿನ ಪೌರತ್ವ ಲಭಿಸಿತ್ತು. ೨ ವರ್ಷಗಳ ನಂತರ ಆಕೆಯ ತಲಾಖ ಆದ ನಂತರ ಆಕೆಯು ಪಾಕಿಸ್ತಾನಿ ಪಾರಪತ್ರದ ವಿಜಾ ಪಡೆದು ಭಾರತಕ್ಕೆ ಹಿಂತಿರುಗಿದ್ದರು. ಈ ಸಮಯದಲ್ಲಿ ಆಕೆಯೊಂದಿಗೆ ಆಕೆಯ ಇಬ್ಬರು ಹುಡುಗಿಯರೂ ಬಂದಿದ್ದರು. ವಿಜಾದ ಅವಧಿ ಮುಗಿದ ನಂತರವೂ ಆಕೆಯು ಪುನಃ ಪಾಕಿಸ್ತಾನಕ್ಕೆ ಹೋಗಲಿಲ್ಲ. ಆಕೆಯು ಇಲ್ಲಿಯೇ ನೌಕರಿ ಮಾಡಲು ಆರಂಭಿಸಿದ್ದಳು. ೧೯೮೬ರಲ್ಲಿ ಆಕೆಯ ಮೇಲೆ ಖಟ್ಲೆಯನ್ನು ದಾಖಲಿಸಲಾದಾಗ ಆಕೆಗೆ ಕೇವಲ ಒಂದು ದಿನ ನ್ಯಾಯಾಲಯದಲ್ಲಿ ಉಪಸ್ಥಿತಳಿರುವ ಶಿಕ್ಷೆಯನ್ನು ನೀಡಲಾಯಿತು. ಅನಂತರ ಆಕೆಗೆ ಪ್ರಾಥಮಿಕ ಶಿಕ್ಷಣ ವಿಭಾಗದಲ್ಲಿ ಶಿಕ್ಷಕಿಯ ನೌಕರಿ ದೊರೆಯಿತು. ಆಕೆಯು ಪಾಕಿಸ್ತಾನಿಯಾಗಿರುವ ಬಗ್ಗೆ ಮಾಹಿತಿ ದೊರೆತಾಗ ಆಕೆಯನ್ನು ಅಮಾನತುಗೊಳಿಸಲಾಗಿದ್ದರೂ ಆಕೆಯನ್ನು ಪುನಃ ನೌಕರಿಗೆ ಸೇರಿಸಲಾಯಿತು ಹಾಗೂ ಪ್ರಕರಣವು ಶಾಂತವಾಗಿತ್ತು. ಕಳೆದ ವರ್ಷ ಆಕೆಯ ಮಗಳೂ ಸರಕಾರಿ ಶಿಕ್ಷಕಿಯಾಗಿರುವ ಬಗ್ಗೆ ತಿಳಿದಾಗ ಫರಜಾನಿನ ಮೇಲೆ ಪುನಃ ತನಿಖೆ ಆರಂಭವಾಯಿತು ಹಾಗೂ ಆಕೆಯನ್ನು ವಜಾಗೊಳಿಸಲಾದರೆ, ಮಗಳನ್ನು ಅಮಾನತುಗೊಳಿಸಲಾಗಿದೆ.

ಸಂಪಾದಕೀಯ ನಿಲುವು

ಇಂತಹವರಿಗೆ ಜೀವಾವಧಿ ಶಿಕ್ಷೆ ನೀಡಬೇಕು, ಇದಕ್ಕಾಗಿ ಉತ್ತರಪ್ರದೇಶದಲ್ಲಿನ ಭಾಜಪ ಸರಕಾರವು ಪ್ರಯತ್ನಿಸಬೇಕು ಎಂದು ಭಾರತೀಯರಿಗೆ ಅನಿಸುತ್ತದೆ !