ಅಲೀಗಡ (ಉತ್ತರಪ್ರದೇಶ) ಇಲ್ಲಿ ಭಾಜಪದ ಮಹಿಳಾ ಮುಸಲ್ಮಾನ ನಾಯಕಿ ಶ್ರೀ ಗಣೇಶಮೂರ್ತಿಯ ಸ್ಥಾಪನೆ ಮಾಡಿದ್ದರಿಂದ ದೇವಬಂದನಿಂದ ಫತ್ವಾ ಜಾರಿ

ಅಲೀಗಡ (ಉತ್ತರಪ್ರದೇಶ) – ಇಲ್ಲಿಯ ಭಾಜಪ ನಾಯಕಿ ರೂಬಿ ಖಾನ ಇವರು ಶ್ರೀ ಗಣೇಶ ಚತುರ್ಥಿಯ ನಿಮಿತ್ತ ಶ್ರೀ ಗಣೇಶನ ಮೂರ್ತಿ ಸ್ಥಾಪಿಸಿದ್ದರು. ಈ ಕಾರಣದಿಂದ ದಾರುಲ ಉಲುಮ ದೇವಬಂದನ ಪ್ರಮುಖ ಮುಫ್ತಿ (ಶರಿಯತ ಕಾನೂನಿನ ಜ್ಞಾನ ಹೊಂದಿರುವವರು) ಅರ್ಶದ ಫಾರುಕಿ ಇವರು ಖಾನರನ್ನು ವಿರೋಧಿಸಿ ಫತ್ವಾ ಹೊರಡಿಸಿದ್ದಾರೆ. ಫಾರೂಕಿಯವರು, ಮನೆಯಲ್ಲಿ ಮೂರ್ತಿ ಸ್ಥಾಪಿಸುವುದು ಇಸ್ಲಾಂ ವಿರೋಧಿ ಆಗಿದೆ. ಹಿಂದೂ ಧರ್ಮದವರು ಗಣೇಶನನ್ನು ಪೂಜನೀಯವೆಂದು ತಿಳಿಯುತ್ತಾರೆ. ಅವನನ್ನು ವಿದ್ಯೆ ಮತ್ತು ಸುಖ-ಸಮೃದ್ಧಿಯ ದೇವತೆಯೆಂದು ಹೇಳುತ್ತಾರೆ; ಆದರೆ ಇಸ್ಲಾಂನಲ್ಲಿ ಮೂರ್ತಿ ಪೂಜೆ ನಿಷಿದ್ಧವಾಗಿದೆ. ಇಸ್ಲಾಂನಲ್ಲಿ ಅಲ್ಲಾನನ್ನು ಹೊರತು ಪಡಿಸಿ ಯಾರನ್ನೂ ಪೂಜಿಸುವುದಿಲ್ಲ. ಯಾರು ಹೀಗೆ ಮಾಡುತ್ತಾರೆಯೋ, ಅವರು ಇಸ್ಲಾಂ ವಿರೋಧಿಗಳಾಗಿರುತ್ತಾರೆ ಎಂದು ಹೇಳಿದರು.

ನಾನು ಯಾವಾಗಲೂ ಹಿಂದೂಗಳ ಹಬ್ಬಗಳನ್ನು ಆಚರಿಸುತ್ತೇನೆ ಮತ್ತು ಮುಂದೆಯೂ ಹೀಗೆಯೇ ಆಚರಿಸುತ್ತಲೇ ಇರುತ್ತೇನೆ ! – ರೂಬಿ ಖಾನ

ರೂಬಿ ಖಾನ ಈ ಫತ್ವಾವನ್ನು ವಿರೋಧಿಸಿದ್ದಾರೆ, ಅವರು, ಇಂತಹ ಫತ್ವಾ ಜಾರಿ ಮಾಡುವವರಿಗೆ ಈ ದೇಶ ವಿಭಜನೆಗೊಳ್ಳುವುದು ಬೇಕಾಗಿದೆ. ಈ ದೇಶ ಎಲ್ಲರದ್ದಾಗಿದೆ. ಇಲ್ಲಿ ಹಿಂದೂ ಮತ್ತು ಮುಸಲ್ಮಾನರು ಒಗ್ಗಟ್ಟಿನಿಂದ ಬಾಳಬೇಕಾಗಿದೆ. ಇಂತಹ ಯಾವುದೇ ಫತ್ವಾದ ಬಗ್ಗೆ ನಾನು ಚಿಂತಿಸುವುದಿಲ್ಲ, ನಿಜವಾದ ಮುಸಲ್ಮಾನ ಇಂತಹ ಫತ್ವೆ ಹೊರಡಿಸುವುದಿಲ್ಲ ಎಂದು ಹೇಳಿದರು.
ನನ್ನ ವಿರುದ್ಧ ಇಂತಹ ಫತ್ವೆ ತೆಗೆಯುತ್ತಲೇ ಇರುತ್ತಾರೆ. ಈ ರೀತಿ ವಿಚಾರ ಮಾಡುವ ಮುಫ್ತಿ (ಶರಿಯತ ಕಾನೂನಿನ ಜ್ಞಾನ ಹೊಂದಿರುವವರು) ಮತ್ತು ಮೌಲವಿ(ಇಸ್ಲಾಂ ಧಾರ್ಮಿಕ ಪ್ರಮುಖ) ಈ ಕಟ್ಟರವಾದಿ ಮತ್ತು ಜಿಹಾದಿ ವಿಚಾರ ಹೊಂದಿರುವವರು ಆಗಿದ್ದಾರೆ, ಅವರಿಗೆ ವಿಭಜನೆಗೊಳ್ಳುವುದು ಬೇಕಾಗಿದೆ. ಈ ದೇಶದಲ್ಲಿದ್ದು ಅವರು ಈ ದೇಶದ ಒಳಿತನ್ನು ವಿಚಾರ ಮಾಡುವುದಿಲ್ಲ. ನಾನು ಯಾವಾಗಲೂ ಹಿಂದೂಗಳ ಹಬ್ಬ ಹರಿದಿನಗಳನ್ನು ಆಚರಿಸುತ್ತೇನೆ ಮತ್ತು ಮುಂದೆಯೂ ಹೀಗೆಯೇ ಆಚರಿಸುತ್ತಲೇ ಇರುತ್ತೇನೆ ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಯಾವಗಲೂ ಹಿಂದೂಗಳಿಗೆ ಸರ್ವಧರ್ಮಸಮಭಾವದ ಉಪದೇಶ ನೀಡುವ ಜಾತ್ಯತೀತವಾದಿ ಮತ್ತು ಪ್ರಗತಿಪರರು (ಅಧೋ)  ಈಗೇಕೆ ಸುಮ್ಮನಿದ್ದಾರೆ ?
  • ಹಿಂದೂಗಳು ಮುಸಲ್ಮಾನರಿಗೆ ಮಂದಿರದಲ್ಲಿ ನಮಾಜಗಾಗಿ, ಇಫ್ತಾರ ಔತಣಕೂಟ ಆಯೋಜಿಸಿದರೇ ಹಿಂದೂಗಳನ್ನು ಹೊಗಳುವ ಮುಸಲ್ಮಾನರು ಮಹಿಳೆಯು ಶ್ರೀ ಗಣೇಶನ ಮೂರ್ತಿ ಸ್ಥಾಪನೆ ಮಾಡಿದ ಬಗ್ಗೆ ಅವಳನ್ನು ಏಕೆ ವಿರೋಧಿಸಲಾಗುತ್ತಿದೆಯೆಂದು ಉತ್ತರಿಸುವರೇ ?