ಬ್ರಿಟನ್ ಹಿಂದಿಕ್ಕಿ ಭಾರತ ಜಗತ್ತಿನ ೫ನೇ ಬೃಹತ್ ಅರ್ಥವ್ಯವಸ್ಥೆ !

ನವದೆಹಲಿ – ಅಮೇರಿಕಾ, ಚೀನಾ, ಜಪಾನ ಮತ್ತು ಜರ್ಮನಿಯ ಬಳಿಕ ಭಾರತ ಈಗ ಜಗತ್ತಿನ ೫ನೇ ದೊಡ್ಡ ಅರ್ಥವ್ಯವಸ್ಥೆಯ ದೇಶವಾಗಿದೆ. ಭಾರತವು ಬ್ರಿಟನ್‌ಗೆ ಹಿಂದಿಕ್ಕಿ ಈ ಯಶಸ್ಸು ಸಾಧಿಸಿದೆ. ಬ್ರಿಟನ ಸಧ್ಯಕ್ಕೆ ಅನೇಕ ಸಂಕಟಗಳಿಂದ ಸಾಗುತ್ತಿದೆ. ಅದರಲ್ಲಿ ಬೆಲೆಏರಿಕೆ ಮತ್ತು ರಾಜಕೀಯ ಅಸ್ತಿರತೆಯ ಸಮಾವೇಶವಿದೆ. ಕೃಷಿ ಮತ್ತು ಸೇವಾ ಕ್ಷೇತ್ರದಲ್ಲಿ ನಡೆದಿರುವ ಒಳ್ಳೆಯ ಕಾರ್ಯಗಳಿಂದ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಎಪ್ರಿಲ್-ಜೂನ) ದೇಶದ ರಾಷ್ಟ್ರೀಯ ಉತ್ಪನ್ನ(ಜಿಡಿಪಿ) ಶೇ. ೧೩.೫ ರಷ್ಟು ಇದೆ. ಇದರ ಏರಿಕೆಯೊಂದಿಗೆ ಭಾರತವು ಜಗತ್ತಿನ ಅತಿ ವೇಗವಾಗಿ ಏರಿಕೆ ಕಂಡ ದೊಡ್ಡ ಅರ್ಥವ್ಯವಸ್ಥೆಯಾಗಿದೆ. ಇದೇ ಕಾಲದಲ್ಲಿ ಚೀನಾದ ಬೆಳವಣಿಗೆ ದರ ಶೇ.೦.೪ ರಷ್ಟು ಆಗಿದೆ. ಹಣಕಾಸು ಸಚಿವ ಸೋಮನಾಥನ್ ಇವರೂ ಕೂಡ, ಭಾರತೀಯ ಅರ್ಥವ್ಯವಸ್ಥೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ. ೭ ಕ್ಕಿಂತ ಅಧಿಕ ಬೆಳವಣಿಗೆ ದರ ಹೊಂದುವ ದಿಶೆಯಲ್ಲಿ ಮುನ್ನಡೆಯುತ್ತಿದೆಯೆಂದು ಹೇಳಿದ್ದರು.


ಅಂತರರಾಷ್ಟ್ರೀಯ ಹಣಕಾಸು ನಿಧಿಯ ಅಂಕಿ-ಅಂಶಗಳನುಸಾರ ೨೦೧೯ರಲ್ಲಿಯೂ ಭಾರತದ ಅರ್ಥವ್ಯವಸ್ಥೆ ೫ನೇ ಎಲ್ಲಕ್ಕಿಂತ ದೊಡ್ಡ ಅರ್ಥವ್ಯವಸ್ಥೆಯಾಗಿದೆ ಮತ್ತು ಅದು ೨.೯ ಟ್ರಿಲಿಯನ್ ಡಾಲರಷ್ಟು ಆಗಿದೆ. ಅದೇ ಸಮಯದಲ್ಲಿ ಬ್ರಿಟನ ಅರ್ಥವ್ಯವಸ್ಥೆ ೨.೮ ಟ್ರಿಲಿಯನ ಡಾಲರ್ಸಗಳೊಂದಿಗೆ ೬ನೇ ಸ್ಥಾನ ತಲುಪಿತ್ತು.