ಬದಾಯು (ಉತ್ತರಪ್ರದೇಶ) – ಇಲ್ಲಿನ ಜಾಮಾ ಮಸೀದಿಯು ಈ ಹಿಂದೆ ನೀಲಕಂಠ ಮಹಾದೇವ ದೇವಸ್ಥಾನವಾಗಿತ್ತು ಎಂದು ಇಲ್ಲಿನ ದಿವಾಣಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಒಟ್ಟು ೫ ಪಕ್ಷದವರು ಈ ಅರ್ಜಿ ಸಲ್ಲಿಸಿದ್ದಾರೆ. ಹಿಂದೂ ಮಹಾಸಭಾದ ಪ್ರಾದೇಶಿಕ ಸಂಚಾಲಕ ಮುಖೇಶ ಪಟೇಲ ಇವರು ಅರ್ಜಿದಾರರಲ್ಲಿ ಒಬ್ಬರಾಗಿದ್ದಾರೆ. ನ್ಯಾಯಾಲಯವು ವಿರೋಧ ಪಕ್ಷಕ್ಕೆ ನೋಟಿಸ್ ಜಾರಿ ಮಾಡಿ ಅಭಿಪ್ರಾಯ ಕೇಳಿದೆ. ಜಾಮಾ ಮಸೀದಿಯು ಹಿಂದೆ ಹಿಂದೂ ರಾಜ ಮಹಿಪಾಲ್ ಅವರ ಕೋಟೆಯಾಗಿತ್ತು ಮತ್ತು ಅದೇ ಸ್ಥಳದಲ್ಲಿ ಇಂದು ನೀಲಕಂಠ ದೇವಾಲಯವು ಇದೆ. ಈ ಅರ್ಜಿಯ ಮೂಲಕ ಮಸೀದಿಯ ಸಮೀಕ್ಷೆ ಮಾಡುವಂತೆ ಒತ್ತಾಯಿಸಲಾಗಿದೆ. ದೇವಾಲಯವನ್ನು ಕೆಡವಿ ಇಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ. ಇಲ್ಲಿ ಏಕಕಾಲಕ್ಕೆ ೨೩ ಸಾವಿರ ಮಂದಿ ನಮಾಜ್ ಮಾಡಬಹುದು.
अखिल भारत हिंदू महासभा ने यूपी के बदायूं की जामा मस्जिद शम्सी की जगह नीलकंठ महादेव मंदिर होने का दावा किया है #UttarPradesh https://t.co/TBLeRRBJV2
— AajTak (@aajtak) September 3, 2022
೧. ಅರ್ಜಿದಾರರ ಪರ ವಕೀಲ ವೇದ ಪ್ರಕಾಶ ಗುಪ್ತಾ ಇವರು ಮುಂದಿನಂತೆ ಹೇಳಿದ್ದಾರೆ, ಇದಕ್ಕೆ ಸಂಬಂಧಿತ ಎಲ್ಲ ಸಾಕ್ಷ್ಯಗಳನ್ನು ನಾವು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದೇವೆ.
೨. ಜಾಮಾ ಮಸೀದಿ ಇಂತಾಜಾಮಿಯಾ ಸಮಿತಿ, ಉತ್ತರಪ್ರದೇಶ ಸುನ್ನಿ ವಕ್ಫ್ ಬೋರ್ಡ್, ಉತ್ತರಪ್ರದೇಶ ಪುರಾತತ್ವ ಸಮೀಕ್ಷಾ ಇಲಾಖೆ, ಉತ್ತರಪ್ರದೇಶ ಸರಕಾರ ಮತ್ತು ಕೇಂದ್ರ ಸರಕಾರಗಳಿಗೂ ತಮ್ಮ ಅಭಿಪ್ರಾಯಗಳನ್ನು ಮಂಡಿಸುವಂತೆ ಹೇಳಲಾಗಿದೆ.